ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ಮದುವೆಯಾದ ನಟಿ ಪೂಜಾಗಾಂಧಿ
ಕನ್ನಡ ಚಿತ್ರರಂಗದಲ್ಲಿ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ, ನಿರ್ಮಾಪಕಿ ಪೂಜಾಗಾಂಧಿ, ಜೀವನದ ಎರಡನೇ ಇನ್ಸಿಂಗ್ಸ್ ಆರಂಭಿಸಿದ್ದಾರೆ. ವಿಜಯ್ ಘೋರ್ಪಡೆ ಅವರೊಂದಿಗೆ ಹಸೆ ಮಣೆ ಏರುವ ಮೂಲಕ ದಾಂಪತ್ಯ ಜೀವನದ ಹೊಸ ಇನ್ಸಿಂಗ್ಸ್ ಆರಂಭಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಆಶಯದಂತೆ ನಟಿ ಪೂಜಾಗಾಂಧಿ ಅವರು ಮಂತ್ರ ಮಾಂಗಲ್ಯ ಪದ್ದತಿಯೊಂದಿಗೆ ಉದ್ಯಮಿ ವಿಜಯ್ ಘೋರ್ಪಡೆ ಅವರೊಂದಿಗೆ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಆಪ್ತರು, ಸ್ನೇಹಿತರು ಸಮ್ಮುಖದಲ್ಲಿ ವಿಜಯ್ ಘೋರ್ಪಡೆ ಅವರನ್ನು ಪತಿಯಾಗಿ ಸ್ವೀಕಾರ ಮಾಡಿದರು
ಚಿತ್ರನಟಿಯರು, ಸೆಲೆಬ್ರಿಟಿಗಳು ಅದ್ದೂರಿ ಮತ್ತು ಆಡಂಬರದಲ್ಲಿ ಮದುವೆಯಾಗುವ ಸಮಯದಲ್ಲಿ ನಟಿ ಪೂಜಾಗಾಂಧಿ ಅವರು ಸರಳವಾಗಿ ಮದುವೆಯಾಗುವ ಮೂಲಕ ಮಂತ್ರ ಮಾಂಗಲ್ಯ ಪದ್ದತಿಯೊಂದಿಗೆ ವಿವಾಹವಾಗುವ ಮೂಲಕ ಇತರಿಗೆ ಮಾದರಿಯಾಗಿದ್ದಾರೆ.
ಮದುವೆ ಮತ್ತು ಆರತಕ್ಷತೆ ಸಮಾರಂಭದಲ್ಲಿ ಹಲವು ಸ್ನೇಹಿತರು ಕುಟುಂಬದ ಸದಸ್ಯರು ಭಾಗಿಯಾಗುವ ಮೂಲಕ ನವ ದಂಪತಿಯನ್ನು ಹರಸಿ ಹಾರೈಸಿದ್ದು ನೂರ್ಕಾಲ ಬಾಳಲಿ ಎಂದು ಆಶೀರ್ವಾದ ಮಾಡಿದ್ದಾರೆ.
ನಟಿ ಪೂಜಾಗಾಂಧಿ ಅವರು ಯಾವುದೇ ಅದ್ದೂರಿ ಆಡಂಬರವಿಲ್ಲದೆ ಸರಳವಾಗಿ ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದು ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ನಟಿ ಪೂಜಾಗಾಂಧಿ ಅವರು ಕನ್ನಡದಲ್ಲಿ ಅನೇಕ ಯಶಸ್ವಿ ಚಿತ್ರಗಳಲ್ಲಿ ಭಾಗಿಯಾಗಿದ್ದರು. ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು.
ನಟನೆ, ನಿರ್ಮಾಣದ ಜೊತೆಯೂ ರಾಜಕಾರಣದಲ್ಲಿಯೂ ಒಂದು ಕೈ ನೋಡಿದ್ದರು .ಅಲ್ಲಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ರಾಜಕಾರಣದ ಸಹವಾಸವೇ ಬೇಡ ಎಂದು ಸುಮ್ಮನ್ನಿದ್ದರು. ಇದೀಗ ವಿಜಯ್ ಘೋರ್ಪಡೆ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.
.