Poster of the film “I Am Ruby” released

“ಐ ಯ್ಯಾಮ್ ರೂಬಿ” ಚಿತ್ರದ ಪೋಸ್ಟರ್ ಬಿಡುಗಡೆ - CineNewsKannada.com

“ಐ ಯ್ಯಾಮ್ ರೂಬಿ” ಚಿತ್ರದ ಪೋಸ್ಟರ್ ಬಿಡುಗಡೆ

ವಸಿಷ್ಠ ಸಿಂಹ ನಾಯಕರಾಗಿ ನಟಿಸಿದ್ದ “ಲವ್ ಲಿ” ಚಿತ್ರ ನಿರ್ದೇಶಿಸಿದ್ದ ಚೇತನ್ ಕೇಶವ್ ನಿರ್ದೇಶನದ ಎರಡನೇ ಸಿನಿಮಾದ “ “ಐ ಯ್ಯಾಮ್ ರೂಬಿ” ಚಿತ್ರ ಕೈಗೆತ್ತಿಕೊಂಡಿದ್ದಾರೆ. ಡಾ.ಶಿವೇಗೌಡ ಸಿ.ವೈ ಹಾಗೂ “ಚಿಂಗಾರಿ” ಬಿ ಮಹದೇವ್ ಬಂಡವಾಳ ಹೂಡುತ್ತಿದ್ದಾರೆ.

ಯುವ ನಟ ಆಕಾಶ್ ಎಂಬ ಮೈಸೂರಿನ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಈ ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದೆ.

ನಿರ್ದೇಶಕ ಚೇತನ್ ಕೇಶವ ಅವರೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಅಶ್ವಿನ್ ಕೆನಡಿ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ, ಪ್ರತಾಪ್ ಆರ್ ಮೆಂಡನ್ ಕಲಾ ನಿರ್ದೇಶನ ಹಾಗೂ ಡಾ.ಕೆ.ರವಿವರ್ಮ – ದಿಲೀಪ್ ಎಂ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ರಂಗಾಯಣ ಸೇರಿದಂತೆ ಅನೇಕ ಕಡೆ ನಾಟಕಗಳಲ್ಲಿ ಅಭಿನಯಿಸಿರುವ ಹಾಗೂ ಚಿತ್ರ ನಾಯಕನಾಗಲು ಬೇಕಾದ ಪೂರ್ವ ತಯಾರಿಯನ್ನು ಈಗಾಗಲೇ ಮಾಡಿಕೊಂಡಿರುವ ಮೈಸೂರು ಮೂಲದ ಆಕಾಶ್ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

“ಲಕ್ಷ್ಮೀ ಬಾರಮ್ಮ” ಧಾರಾವಾಹಿ ಖ್ಯಾತಿಯ ಭೂಮಿಕ ರಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿರುತ್ತದೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಐ ಯ್ಯಾಮ್ ರೂಬಿ” ಚಿತ್ರಕ್ಕೆ ಡಿಸೆಂಬರ್ ನಿಂದ ಚಿತ್ರೀಕರಣ ಶುರುವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin