ನಾಯಕನಾಗಿ ಬಡ್ತಿ ಪಡೆದ ಪ್ರಸಾದ್ ವಸಿಷ್ಠ: ` ಕಬಂಧ” ಡಬ್ಬಿಂಗ್ ಮುಕ್ತಾಯ

ಹಲವು ಚಿತ್ರಗಳು ಮತ್ತು ಧಾರಾವಾಹಿಯಲ್ಲಿ ನಟಿಸಿರುವ ಪ್ರಸಾದ್ ವಸಿಷ್ಠ ನಾಯಕನಾಗಿ ಬಡ್ತಿ ಪಡೆದಿರುವ “ ಕಬಂಧ”’ ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.

ದಾವಣೆಗೆರೆ, ತುಮಕೂರು ಮುಂತಾದ ಕಡೆಗಳಲ್ಲಿ 40 ದಿನ ಚಿತ್ರೀಕರಣ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯಹುಟ್ಟಿಸಿತ್ತು. ಜೊತೆಗೆ ಹಾರರ್ ರೂಪದಲ್ಲಿ ಚಿತ್ರವನ್ನು ನಿರ್ದೇಶಕ ಸತ್ಯನಾಥ್ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಪ್ರಸಾದ್ ವಸಿಷ್ಠಗೆ ನಾಯಕಿಯಾಗಿ ಪ್ರಿಯಾಂಕ ಮಲಾಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕಕ ನಾಯಕನಾಗಿ ಅದೃಷ್ಠ ಅರಸಲು ಮುಂದಾಗಿರುವ ಪ್ರಸಾದ್ ವಸಿಷ್ಠ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಳ್ಳುವ ತವಕದಲ್ಲಿದ್ದಾರೆ.
ತಾರಾಗಣದಲ್ಲಿ ನಾಯಕನ ಪಾತ್ರದಲ್ಲಿ ಪ್ರಸಾದ್ ವಸಿಷ್ಠ ನಾಯಕಿಯಾಗಿ ಪ್ರಿಯಾಂಕ ಮಲಾಲಿ, ಪ್ರಮುಖ ಪಾತ್ರದಲ್ಲಿ ಕಿಶೋರ್ ಕುಮಾರ್, ಅವಿನಾಶ್ ಯಳಂದೂರು, ಛಾಯಶ್ರೀ, ಪ್ರಶಾಂತ್ ಸಿಧ್ದಿ, ವಂದನ-ವಚನ ಮತ್ತು ವಿಭಿನ್ನ ಪಾತ್ರದಲ್ಲಿ ಯೋಗರಾಜ ಭಟ್ ನಟಿಸಿದ್ದಾರೆ. ಇನ್ನು ಹಲವು ಪಾತ್ರದಲ್ಲಿ ನುರಿತ ಕಲಾವಿದರು ಅಭಿನಯಿಸಿದ್ದಾರೆ

ಈ ಚಿತ್ರಕ್ಕೆ ಕೆ.ಕಲ್ಯಾಣ್ ಸಂಗೀತವಿದ್ದು ಸಾನಿತೇಜ್ ಸಂಗೀತ, ವಿಷ್ಣು ಪ್ರಸಾದ್ ಛಾಯಾಗ್ರಹಣವಿದೆ. ಕುಂಜರ ಫಿಲಮ್ಸ್ ಸಂಸ್ಥೆಯ ನಿರ್ಮಾಣ, ಹೊಬಾಕ್ಸ್ ಸ್ಟುಡಿಯೊಸ್ ನ ಸಹಯೋಗದೊಂದಿಗೆ ಚಿತ್ರ ತಯಾರಿಗಿದೆ.
ತಾಂತ್ರಿಕ ತಂಡದಲ್ಲಿ ಸತ್ಯನಾಥ್ ನಿರ್ದೇಶನ, ವಿಷ್ಣು ಪ್ರಸಾದ್ ಛಾಯಾಗ್ರಹಣ, ಸತ್ಯಜಿತ್ ಸಿಧ್ದನಕಟ್ಟೆಯವರ ಸಂಕಲನ, ಸಾಯಿ ತೇಜ ಸಂಗೀತ ಸಂಯೋಜನೆ, ಕೆ ಕಲ್ಯಾಣ್ ಸಾಹಿತ್ಯ ರಚನೆಯಿದ್ದು, ಚಿತ್ರಕ್ಕೆ ತಾಂತ್ರಿಕವಾಗಿ ಉನ್ನತ ಮೆರಗು ಮೂಡಿಸಿದೆ.