ಡಿಯರ್ ಹಸ್ಬೆಂಡ್ ಚಿತ್ರದ `ಮಾಲಾಶ್ರೀ ಸಿಕ್ಕಳೋ ಮೆಲ್ಲನೆ ನಕ್ಕಳೋ’ ಹಾಡು ಧ್ವನಿಮುದ್ರಣ
ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ `ಡಿಯರ್ ಹಸ್ಬೆಂಡ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಹಾಡುಗಳ ಧ್ವನಿ ಮುದ್ರಣ ಕಾರ್ಯ ಕೂಡ ಮಾಡಿ ಮುಗಿಸಿದೆ.

ಚಿತ್ರದ ಕೊನೆಯ ಹಾಡಿಗೆ ಬಾಲಿವುಡ್‍ನ ಖ್ಯಾತ ಗಾಯಕ ನಕಾಶ್ ಧ್ವನಿಯಾಗಿದ್ದಾರೆ. ಹಾಡಿನ ಧ್ವನಿಮುದ್ರಣ ಕಾರ್ಯ ನಡೆಯಿತು. ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ `ಮಾಲಾಶ್ರೀ ಸಿಕ್ಕಳೋ ಮೆಲ್ಲನೆ ನಕ್ಕಳೋ’ ಎಂದು ಆರಂಭವಾಗುವ ಟಪೆÇೀರಿ ಶೈಲಿಯ ಈ ಹಾಡಿನ ಸಾಲುಗಳಿಗೆ ಪ್ರಮೋದ ಮರವಂತೆ ಸಾಹಿತ್ಯವಿದೆ.
ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಮಾತನಾಡಿ ಈಗಾಗಲೇಡಿಯರ್ ಹಲ್ಬೆಂಡ್’ ಚಿತ್ರದ ಒಂದಷ್ಟು ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಇದೀಗ ಬಾಕಿಯಿದ್ದ ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಕೂಡ ಪೂರ್ಣವಾಗಿದೆ. ಗಾಯಕ ನಕಾಶ್ ಸಿನಿಮಾದಲ್ಲಿ ಈ ಹಾಡಿನ ಹಿನ್ನೆಲೆ, ಸಾಹಿತ್ಯದ ಅರ್ಥವನ್ನು ತಿಳಿದುಕೊಂಡು ತುಂಬ ಖುಷಿಯಿಂದ ಹಾಡನ್ನು ಹಾಡಿದ್ದಾರೆ. ರಾತ್ರಿ ಶುರುವಾದ ಈ ಹಾಡಿನ ರೆಕಾರ್ಡಿಂಗ್ ಮುಂಜಾನೆವರೆಗೂ ನಡೆಯಿತು. ಈ ಹಾಡನ್ನು ಈ ಸಿನಿಮಾದ ಯುಎಸ್ಪಿ ಎಂದೇ ಹೇಳಬಹುದು’ ಎಂದು ವಿವರಣೆ ನೀಡಿದ್ದಾರೆ.

ಸಂಗೀತ ನಿರ್ದೇಶ ವೀರ್ ಸಮರ್ಥ್ ಮತ್ತು ಗೀತ ಸಾಹಿತಿ ಪ್ರಮೋದ್ ಮರವಂತೆ ಕಾಂಬಿನೇಶನ್ ನಲ್ಲಿ ಬಂದಿರುವ ಹಾಡುಗಳದ್ದು ಒಂದು ಶೈಲಿಯಾಗಿದ್ದರೆ, ಹಾಡು ಅದೆಲ್ಲದಕ್ಕಿಂತ ವಿಭಿನ್ನವಾದ ಮತ್ತೊಂದು ಶೈಲಿಯಲ್ಲಿದೆ. ಖಂಡಿತವಾಗಿಯೂ ಹೊಸತರದಲ್ಲಿ ಮೂಡಿಬಂದಿರುವ ಈ ಹಾಡು ಕನ್ನಡದ ಸಿನಿಪ್ರಿಯರನ್ನ ಸೆಳೆಯಲಿದೆ. ಮಂಡ್ಯ ಹಿನ್ನೆಲೆಯಲ್ಲಿ ಈ ಹಾಡು ನೋಡುಗರನ್ನು ಕೂತಲ್ಲೇ ಕುಣಿಸುವಂತೆ ತೆರೆಮೇಲೆ ಬರಲಿದೆ’ ಎಂದಿದ್ಧಾರೆ
ಈ ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ನಟರಾದ ಪ್ರವೀಣ್ ಗೌಡ, ಗೀತ ಸಾಹಿತಿ ಪ್ರಮೋದ್ ಮರವಂತೆ ಸೇರಿದಂತೆ ಚಿತ್ರತಂಡದ ಅನೇಕರು ಹಾಜರಿದ್ದರು.
ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ `ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ನಟರಾದ ಸೂರಜ್ ಗೌಡ, ಶರಣ್ಯಾ ಶೆಟ್ಟಿ, ಪ್ರವೀಣ್, ಕುಮಾರ ಬಂಗಾರಪ್ಪ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.

ನಟ ಕಿಚ್ಚ ಸುದೀಪ್, ಡಿಯರ್ ಹಸ್ಬೆಂಡ್' ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.ಡಿಯರ್ ಹಸ್ಬೆಂಡ್’ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಬೆಂಗಳೂರು, ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಗೋವಾ ಮತ್ತಿತರ ಕಡೆಗಳಲ್ಲಿ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ.


