“Rummy Ata” trailer released: Movie to hit screens this month

“ರಮ್ಮಿ ಆಟ” ಟ್ರೈಲರ್ ಬಿಡುಗಡೆ: ಇದೇ ತಿಂಗಳು ಚಿತ್ರ ತೆರೆಗೆ - CineNewsKannada.com

“ರಮ್ಮಿ ಆಟ” ಟ್ರೈಲರ್ ಬಿಡುಗಡೆ: ಇದೇ ತಿಂಗಳು ಚಿತ್ರ ತೆರೆಗೆ

ಮನರಂಜನೆಗಾಗಿ ಆನ್ ಲೈನ್ ಗೇಮ್ ಆಡುವ ಹವ್ಯಾಸ ಬೆಳೆಸಿಕೊಂಡ ನಂತರ ಅದು ಚಟ ಆಗಿಬಿಡುತ್ತದೆ. ರಮ್ಮಿ ಗೇಮ್ ನಂಥ ಆಟಗಳ ಚಟಕ್ಕೆ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ. ಇಂತಹದೊಂದು ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದು ಇದೇ ತಿಂಗಳು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಈ ಆಟದಿಂದ ಲಾಭ, ನಷ್ಟ ಎರಡೂ ಆಗಬಹುದು. ಸಿನಿತಾರೆಯರು ಇದರ ಪ್ರಚಾರ ಮಾಡುವುದರಿಂದ ಬಹುತೇಕರು ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಹಿಂದೆ ಡಾ.ರಾಜ್ ಕುಮಾರ್ ಅವರು ತಮ್ಮ ಚಿತ್ರಗಳಲ್ಲಿ ಸಿಗರೇಟ್ ಸೇದೋ ಸೀನ್ ಮಾಡುತ್ತಿರಲಿಲ್ಲ. ಅವರ ಅಭಿಮಾನಿಗಳು ಸಹ ಅದನ್ನೇ ಫಾಲೋ ಮಾಡ್ತಿದ್ದರು. ಈ ಚಿತ್ರದ ಡೈಲಾಗ್ ಗಳಲ್ಲಿ ಅದನ್ನು ಬಳಸಿಕೊಂಡಿದ್ದಾರೆ.

ರಮ್ಮಿ ಆಡುವುದರಿಂದ ಏನೇನು ತೊಂದರೆಗಳಾಗುತ್ತವೆ, ಜನ ಹೇಗೆಲ್ಲ ಮೋಸ ಹೋಗುತ್ತಾರೆ ಎಂಬುದನ್ನು ಬಿಡುಗಡೆಗೆ ಸಿದ್ದವಾಗಿರುವ “ರಮ್ಮಿ ಆಟ” ಚಿತ್ರದಲ್ಲಿ ಹೇಳಲಾಗಿದೆ. ಉಮರ್ ಷರೀಫ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಟ್ರೈಲರ್ ರಿಲೀಸ್ ಮಾಡಿ ಆನ್ ಲೈನ್ ಗೇಮ್ ಹುಚ್ಚಿಗೆ ಬಲಿಯಾಗಬೇಡಿ ಎಂಬ ಮೆಸೇಜ್ ಇಟ್ಟುಕೊಂಡು ಉಮರ್ ಷರೀಫ್ ಅವರು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಒಳ್ಳೇದಾಗಲಿ, ಜನ ಇಂಥ ಚಿತ್ರಗಳನ್ನು ನೋಡುವ ಮೂಲಕ ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು.

ನಿರ್ಮಾಪಕ ರಮೇಶ್ ಯಾದವ್ ಹಾಗು ಹನುಮೇಶ್ ಪಾಟೀಲ್ ಇದೇ ವೇಳೆ ಉಪಸ್ಥಿತರಿದ್ದರು

ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ನೆರಳು ಮೀಡಿಯಾ ಥ್ರೂ ಲಿಖಿತ್ ಫಿಲಂಸ್ ಮೂಲಕ ಇದೇ ತಿಂಗಳು ಚಿತ್ರ ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಇಬ್ಬರು ನಾಯಕರು, ರಾಘವ ಸೂರ್ಯ ಹಾಗು ಸಯ್ಯದ್ ಇರ್ಫಾನ್, ವಿನ್ಯಾ ಶೆಟ್ಟಿ, ಸ್ನೇಹರಾವ್, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ಮೋಹನ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin