“ಸರ್ಕಾರಿ ನ್ಯಾಯ ಬೆಲೆ ಅಂಗಡಿ” ಟ್ರೈಲರ್ ಬಿಡುಗಡೆ: ಜುಲೈ 31ಕ್ಕೆ ಸಿನಿಮಾ ತೆರೆಗೆ
ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಮುಂಟ್ಟಿಕೊಂಡು ಗ್ರಾಮೀಣ ಸೊಗಡಿನಲ್ಲಿ ಕಟ್ಟಿಕೊಟ್ಟಿರುವ ಚಿತ್ರ “ ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರ ಜುಲೈ 31 ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಬಹುದಿನಗಳ ನಂತರ ನಟ ಕಮ್ ರಾಜಕಾರಣಿ ಕುಮಾರ್ ಬಂಗಾರಪ್ಪ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಮಾದಕ ಬೆಡಗಿ ರಾಗಿಣಿ ದ್ವಿವೇದಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಇದರ ಜೊತೆಗೆ ಮಾಜಿ ಶಿವರಾಮೇಗೌಡ, ನವೀನ್ ಸಜ್ಜು, ರೋಹಿತ್ ಶ್ರೀನಾಥ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. “ತಾಯವ್ವ” ಬಳಿಕ ಸಾತ್ವಿಕ್ ಪವನ್ ಆಕ್ಷನ್ ಕಟ್ ಹೇಳಿದ್ದಾರೆ
ನಿರ್ಮಾಪಕರಾ ಭಾಮ ಹರೀಶ್ ಮತ್ತು ಭಾಮ ಗಿರೀಶ್ ಸಾರಥ್ಯದಲ್ಲಿ ಚಿತ್ರ ಮೂಡಿಬಂದಿದ್ದು ಚಿತ್ರಕ್ಕೆ ತೇಜುಮೂರ್ತಿ, ಪದ್ಮಾವತಿ ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೆ ಮಾಜಿ ಸಂಸದ ಶಿವರಾಮೇಗೌಡ, ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದು, ಕೆ.ವಿ ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಂಡು ಚಿತ್ರಕ್ಕೆ ಶುಭಕೋರಿದರು.

ಚಿತ್ರದ ನಿರ್ಮಾಣದ ಹಿಂದಿನಶಕ್ತಿಯಾಗಿರುವ ಭಾ ಮ ಹರೀಶ್ ಮಾತನಾಡಿ ಹಿರಿಯ ನಟ ಅನಂತ್‍ನಾಗ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ನಟಿಸಿದ ಸಂದರ್ಭ ಅವರ ಮನೆಗೆ ಊಟಕ್ಕೆ ಹೋದಾಗ ಈ ರೀತಿಯ ಸಿನಿಮಾವನ್ನು ನಾವೂ ಮಾಡೋಣ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಪದ್ಮಾವತಿ ಚಂದ್ರಶೇಖರ್ ವಿಷಯ ಪ್ರಸ್ತಾಪ ಮಾಡಿದರು, ಅದರಂತೆ ಹಿರಿಯ ನಿರ್ದೇಶಕ ಬಿ, ರಾಮಮೂರ್ತಿ ಅವರಿಗೆ ಕಥೆ ಸಿದ್ದಪಡಿಸಲು ಹೇಳಿ ಸಿನಿಮಾ ಮಾಡಿಸಿದ್ದೇವೆ. ಚಿತ್ರ ಜುಲೈ 31ರಂದು ತೆರೆಗೆ ಬರುತ್ತಿದೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.
ನಿರ್ಮಾಪಕರಲ್ಲಿ ಒಬ್ಬರಾದ ತೇಜು ಮೂರ್ತಿ ಮಾತನಾಡಿ 50 ದಿನ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಬಿಡುಗಡೆಯ ಹೊಸ್ತಿಲಲ್ಲಿದ್ದು ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು

ಮತ್ತೊಬ್ಬ ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್ ಮಾತನಾಡಿ ಹಿರಿಯ ನಟ ಅನಂತ್‍ನಾಗ್ ಸರ್ ಮನೆಗೆ ಹೋದಾಗ ಅವರ ನಟನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಬಿಡುಗಡೆ ಆಗಿತ್ತು, ನಾವೂ ಕೂಡ ಇದೇ ರೀತಿ ಸಿನಿಮಾ ಮಾಡಬೇಕು ಎಂದಾಗ ಹೊಳೆದಿದ್ದೇ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಎಂದು ತಿಳಿಸಿದ್ಧಾರೆ.
ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಎಲ್,ಆರ್ ಶಿವರಾಮೇಗೌಡ ಮಾತನಾಡಿ ಸಾಮಾಜಿಕ ಕಳಕಳಿ ಇರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಮುಂದುವರಿದ ಭಾಗ ಮಾಡಿ ಚಿತ್ರಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು
ನಿರ್ದೇಶಕ ಸಾತ್ವಿಕ್ ಪವನ್ ಮಾತನಾಡಿ, ತಾಯವ್ವ ಚಿತ್ರದ ಬಳಿಕ ಎರಡನೇ ಚಿತ್ರ ಸಾಮಾಜಿಕ ಕಳಕಳಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ, ನಿರ್ಮಾಪಕರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದರು

ಚಿತ್ರಕ್ಕೆ ಕಥೆಮ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಹಿರಿಯ ನಿರ್ದೇಶಕ ಬಿ,ರಾಮಮೂರ್ತಿ, ಚಿತ್ರಕ್ಕೆ ಧ್ವನಿಯಾಗಿರುವ ಗಾಯಕಿ ಡಾ,ಶಮಿತಾ ಮಲ್ನಾಡ್ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಮಾಹಿತಿ ಹಂಚಿಕೊಂಡರು

