ಹೊಸ ಚಿತ್ರ ಕೈಗೆತ್ತಿಕೊಂಡ ಸತ್ಯಪ್ರಕಾಶ್: ಕಥೆ ಮೆಚ್ಚಿದ ಶಿವಣ್ಣ ದಂಪತಿ
ಜಯನಗರ 4ನೇ ಬ್ಲಾಕ್ ನಿಂದ ಆರಂಭವಾಗಿ ರಾಮಾ ರಾಮಾ ರೇ, ಒಂದಲ್ಲಾ ಎರೆಡಲ್ಲಾ, ಮ್ಯಾನ್ ಆಫ್ ದ ಮ್ಯಾಚ್ ಹಾಗೆ ಎಕ್ಸ್ ಅಂಡ್ ವೈ, ಹೀಗೆ ನಿರಂತರ ಹೊಸ ಪ್ರಯೋಗ ಮಾಡುತ್ತಿರುವ ನಿರ್ದೇಶಕ ಡಿ ಸತ್ಯ ಪ್ರಕಾಶ್ ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಈ ಬಾರಿ ಡಾ,ರಾಜ್ ಕುಮಾರ್ ಕುಟುಂಬದ ಕುಡಿ ಹಿರಿಯ ನಟ ರಾಮ್ ಕುಮಾರ್- ಪೂರ್ಣಿಮಾ ದಂಪತಿ ಪುತ್ರ ಧೀರೇನ್ ರಾಮ್ ಕುಮಾರ್ ಅವರಿಗೆ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಚಿತ್ರದ ಕಥೆ ಕೇಳಿದ ನಟ ಧೀರೇನ್ ರಾಮ್ ಕುಮಾರ್ ಅವರ ಸೋದರ ಮಾವ ಹಾಗು ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಚಿತ್ರದ ಕಥೆಯನ್ನು ದಂಪತಿ ಸಮೇತ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಡಿ ಸತ್ಯ ಪ್ರಕಾಶ್, ಕಥಾ ನಾಯಕರಾಗಿ ಧೀರೆನ್ ಇರುತ್ತಾರೆ. ನಿರ್ಮಾಣದ ಜವಾಬ್ದಾರಿ ಆರ್ ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್ ಸಂಸ್ಥೆಯದ್ದಾಗಿದೆ. ಇನ್ನು ಚಿತ್ರದ ಹೆಸರು, ಕಲಾವಿದರ, ತಂತ್ರಜ್ಞರ ಮಾಹಿತಿಗಳನ್ನು ಸಧ್ಯದಲ್ಲೇ ಹಂಚಿಕೊಳ್ಳುತ್ತೇನೆ. ಕತೆಯನ್ನು ಕೇಳಿ ಮನಸಾರೆ ಮೆಚ್ಚಿ ಆಶೀರ್ವದಿಸಿದ ಶಿವಣ್ಣ ನವರಿಗೆ ಈ ಕಿರಿಯನ ಸಾಷ್ಟಾಂಗ ಶರಣು ಎಂದು ಮಾಹಿತಿ ಹಂಚಿಕೊಂಡಿದ್ದಾರೆ


