ಕಲಾವಿದ ಯತಿರಾಜ್ ನಿರ್ದೇಶನದ ಏಳನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ
ಪತ್ರಕರ್ತ, ನಟ ಯತಿರಾಜ್ ಒಂದಿಲ್ಲೊಂದು ಕೆಲಸದಲ್ಲಿ ಸದಾ ಬ್ಯುಸಿ. ಇತ್ತೀಚಿಗೆ ದಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ನಿರ್ದೇಶನದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿ ಚಿತ್ರಕಥೆಯಲ್ಲಿ ತೊಡಗಿಕೊಂಡಿದ್ದಾರೆ.

ಬೆಂಗಳೂರಿನ ಪ್ರಶಾಂತನಗರದ ಪ್ರಶಾಂತ ಗಣಪತಿ ದೇವಾಲಯದಲ್ಲಿ ಸರಳವಾಗಿ ಪೂಜೆ ನೆರವೇರಿಸಿಕೊಂಡ ಚಿತ್ರತಂಡ ಇದೀಗ ಕಲಾವಿದರ ಹುಡುಕಾಟದಲ್ಲಿದೆ. ಸುನಿ ವಿನಿ ಪ್ರಸ್ತುತ ಪಡಿಸುತ್ತಿರುವ ಈ ಹೊಸ ಚಿತ್ರ ನಿರ್ಮಾಣವಾಗುತ್ತಿದ್ದು, ಟಿ ಆರ್ ಚೇತನ್ ಬಂಡವಾಳ ಹೂಡುತ್ತಿದ್ದಾರೆ.
ಮೊದಲಬಾರಿಗೆ ಹಾರರ್ ಕಥಾ ಹಂದರದ ಹಿಂದೆ ಬಿದ್ದಿರುವ ಯತಿರಾಜ್, ಹೊಸಬಗೆಯ ಕಥೆ ಮಾಡಿಕೊಂಡಿದ್ದಾರಂತೆ. ಹಾರರ್ ಮಿಶ್ರಿತ ಕಥೆಯಲ್ಲಿ ಹಾಸ್ಯ ಹಾಗೂ ಭಾವನಾತ್ಮಕ ಬೆಸುಗೆಯ ತೀವ್ರತೆಗೂ ಹೆಚ್ಚು ಒತ್ತುಕೊಟ್ಟಿದ್ದಾರಂತೆ.

ಹೆಸರಿಡದ ಈ ಚಿತ್ರ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಅತ್ಯುತ್ತಮ ಪ್ರತಿಭೆಗಳನ್ನು ಎದರು ನೋಡುತ್ತಿದೆ. ಹಿಂದೆ ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ವಿಜಯ್ ಹರಿತ್ಸ ಇದೀಗ ಮತ್ತೊಮ್ಮೆ ಜೊತೆಯಾಗಿದ್ದಾರೆ. ಶ್ರೀಕಾಂತ್ ಸಂಭಾಷಣೆ ಬರೆಯುತ್ತಿದ್ದು, ಸುಧೀಂದ್ರ ವೆಂಕಟೇಶ್ ಪತ್ರಿಕಾ ಸಂಪರ್ಕ,ಅರುಣ್ ಕುಮಾರ್ ಸಹ ನಿರ್ದೇಶನವಿರಲಿದೆ

