Set “Appaji” New Movie: The title is old but the story is new

ಸೆಟ್ಟೇರಿದ “ಅಪ್ಪಾಜಿ” ಹೊಸ ಚಿತ್ರ: ಶೀರ್ಷಿಕೆ ಹಳೆಯದಾದರೂ ಕಥೆ ಹೊಸದು - CineNewsKannada.com

ಸೆಟ್ಟೇರಿದ “ಅಪ್ಪಾಜಿ” ಹೊಸ ಚಿತ್ರ: ಶೀರ್ಷಿಕೆ ಹಳೆಯದಾದರೂ ಕಥೆ ಹೊಸದು

ಮೂರು ದಶಕಗಳ ಹಿಂದೆ ಡಾ.ವಿಷ್ಣುವರ್ಧನ್ ಅಭಿನಯದ ‘ಅಪ್ಪಾಜಿ’ ಸಿನಿಮಾ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರ ಸೆಟ್ಟೇರಿದೆ. ರಾಮನವಮಿ ಶುಭದಿನದಂದು ಸಿದ್ದಗಂಗಾ ಮಠದಲ್ಲಿರುವ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದಿಗೆ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು.

ಬಿಗ್ ಬಾಸ್ ವಿನ್ನರ್, ಪ್ರಥಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಹಿರಿಯ ನಟ ಸ್ವಸ್ತಿಕ್ ಶಂಕರ್ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ‘ಪ್ರೀತಿಗೆ ಕಡಲು ಕೋಪಕ್ಕೆ ಸಿಡಿಲು’ ಎಂಬ ಅಡಿಬರಹವಿದೆ.

ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುª ಓಂಪ್ರತಾಪ್. ಹೆಚ್.ಶಿವಮೊಗ್ಗ ಸಿನಿಮಾಕ್ಕೆ ಬರವಣಿಗೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ತುಮಕೂರಿನ ಬಿ.ಚಂದಿರಧರ,ಪಿನ್ನೇನಹಳ್ಳಿ-ಹೊನ್ನೇನಹಳ್ಳಿ, ತಂದೆಯ ಪಾತ್ರಕ್ಕೆ ಬಣ್ಣ ಹಚು ವ ಜತೆಗೆ ಸುಚಂದು ನೂಶಿತ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ.

ನಿರ್ದೇಶಕ ಓಂಪ್ರಕಾಶ್ ಹೇಳುವಂತೆ ಮೊದಲು ‘ಜನಕ’ ಹೆಸರನ್ನು ಇಡಲಾಗಿತ್ತು. ಬೇರೆಯವರು ನೊಂದಣಿ ಮಾಡಿಸಿದ್ದರಿಂದ, ಅನಿವಾರ್ಯವಾಗಿ ಇದೇ ಟೈಟಲ್ ಇಡಲಾಗಿದೆ. ನಾನು ಮತ್ತು ನಿರ್ಮಾಪಕರು ಸಾಹಸಸಿಂಹನ ಅಭಿಮಾನಿಗಳು. ಶೀರ್ಷಿಕೆ ಹಳೆಯದಾಗಿದ್ದರೂ ಕಥೆ ಹೊಸತನದಿಂದ ಇರಲಿದೆ. ಅಪ್ಪನಾದವನು ಮಕ್ಕಳ ಮೇಲೆ ತೋರಿಸುವ ಪ್ರೀತಿ, ಆತನ ಜವಬ್ದಾರಿ ಏನಿರುತ್ತದೆ. ಒಂದು ಹಂತದಲ್ಲಿ ತನಗಾದ ನೋವು, ಅನ್ಯಾಯಗಳನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಭಾವನಾತ್ಮಕವಾಗಿ ತೋರಿಸಲಾಗುತ್ತಿದೆ. ತುಮಕೂರು, ಡಾಬಸಪೇಟೆ ಉಳಿದುದನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು ಎಂದರು.

ಸಹಾಯಕ ಕೋರಿಯೋಗ್ರಾಫರ್ ಆಗಿರುವ ಶ್ರೀವೆಂಕಿ ಆಟೋ ಚಾಲಕನಾಗಿ ನಾಯಕ. ಪೂಜಾರಾಮ್ ನಾಯಕಿ. ತಾಯಿಯಾಗಿ ಭವ್ಯ. ಇವರೊಂದಿಗೆ ನಾಗೇಂದ್ರಅರಸ್, ಮಹೇಶ್‍ಸಿದ್ದು, ಜಗದೀಶ್‍ಕೊಪ್ಪ, ಅಭಿಷೇಕ್, ಸುನಿಲ್, ಕರ್ಣ, ಯಶಸ್, ಪಲ್ಟಿಗೋವಿಂದ, ಸುರೇಶ್‍ಸ್ವಾಮಿ, ಸುಶೀಲ, ಶಿವಮೊಗ್ಗರಾಮಣ್ಣ, ಗೋಪಾಲ್.ಕೆ.ಆರ್, ಬೇಬಿ ಚೈತ್ರಾ, ಮಾಸ್ಟರ್ ದುಶ್ಯಂತಚಂದ್ರ, ಕೆಂಚಪ್ಪ, ಲಿಖಿತಾಲಿವ್ಯ ಮುಂತಾದವರು ನಟಿಸುತ್ತಿದ್ದಾರೆ.

ಆರು ಹಾಡುಗಳಿಗೆ ಕುಶಾಲ್‍ರಾಜ್ ಸಂಗೀತವಿದೆ. ಈ ಪೈಕಿ ತಂದೆ ಮಗ, ತಂದೆ ಮಗಳ ಮೇಲೆ ಗೀತೆ ಇರುವುದು ವಿಶೇಷ. ಜಿ.ವಿ.ರಮೇಶ್-ಕೇಶವ್ ಛಾಯಾಗ್ರಹಣ, ಸಾಹಸ ಕೌರವ ವೆಂಕಟೇಶ್, ಸಾಹಿತ್ಯ ತ್ರಿಲೋಕ್‍ತ್ರಿವಿಕ್ರಮ್, ಸಂಕಲನ ಮಹೇಶ್, ಕಾರ್ಯಕಾರಿ ನಿರ್ಮಾಪಕ ಜಗದೀಶ್‍ಗಂಗಪ್ಪ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin