ಹಾಡಿನೊಂದಿಗೆ “ಶಿಲ್ಪಾ ಶ್ರೀನಿವಾಸ್” ಚಿತ್ರೀಕರಣ ಪೂರ್ಣ
ರಾಜೀವ್ ಕೃಷ್ಣ ನಿರ್ದೇಶನದ “ಶಿಲ್ಪಾ ಶ್ರೀನಿವಾಸ್” ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಂಗಾರಪೇಟೆ ತಾಲ್ಲೂಕಿನ ಶ್ರೀಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿಸ್ಟಾರ್ ಅಭಿಜಿತ್ ಅಭಿನಯದ “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರದಾರಿಗಳು”,ಎಂಬ ಹಾಡಿನ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆಯಲಾಗಿದೆ

ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ ಜಾನರ್ ಕಥಾಹಂದರ ಒಳಗೊಂಡ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಅಭಿಜಿತ್, ಶಿಲ್ಪಾ ಶ್ರೀನಿವಾಸ್, ಶೋಭರಾಜ್, ನಾಗೇಂದ್ರ ಅರಸ್, ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯಾ,ಪಂಚಾಕ್ಷರಯ್ಯ.ಮರಿಸ್ವಾಮಿ, ಅಮೃತ ಕಾಳೆ,ಶಂಖನಾದ ಆಂಜಿನಪ್ಪ, ಮಾಸ್ಟರ್ ವೀರ ಧನುಷ್, ಅನ್ನಪೂರ್ಣ, ನಂದಿನಿ ಕಮ್ಮಯ್ಯ, ಧನ್ಯ ಭೂಮಿಕಾಶ್ರೀ, ಬೇಬಿ ಶಾರಿಕಾ ಕಾರ್ತೀಕ್ ಮೊದಲಾದವರು ನಟಿಸಿದ್ದಾರೆ.
ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಾಹಸ ಮತ್ತು ನೃತ್ಯ ನಿರ್ದೇಶನದ ಜವಾಬ್ದಾರಿಯನ್ನೂ ಸಹ ನಿಭಾಯಿಸಿದ್ದಾರೆ.

ಪ್ರಮೋದ್ ಛಾಯಾಗ್ರಹಣ, ಡಿ. ಮಲ್ಲಿ ಸಂಕಲನ, ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಪ್ರವೀಣ್ ಭದ್ರಾವತಿ ಹಾಗು ಮಲ್ಲಿ ಕೆ. ವಡ್ಡರಹಟ್ಟಿ ಸಹ ನಿರ್ದೇಶನ ಇರುವ ಶಿಲ್ಪಾ ಶ್ರೀನಿವಾಸ್ ಚಿತ್ರದ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮೇ ತಿಂಗಳ ಮೊದಲ ವಾರ ಚಿತ್ರ ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ.


