Shivanna-Dhanush starrer "Captain Miller" to hit screens for Sankranti

ಶಿವಣ್ಣ- ಧನುಷ್ ನಟನೆಯ “ಕ್ಯಾಪ್ಟನ್ ಮಿಲ್ಲರ್ ” ಸಂಕ್ರಾಂತಿಗೆ ತೆರೆಗೆ - CineNewsKannada.com

ಶಿವಣ್ಣ- ಧನುಷ್ ನಟನೆಯ “ಕ್ಯಾಪ್ಟನ್ ಮಿಲ್ಲರ್ ” ಸಂಕ್ರಾಂತಿಗೆ ತೆರೆಗೆ

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗು ತಮಿಳು ನಟ ಧನುಷ್, ಅಭಿನಯದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಡಿಸೆಂಬರ್‍ನಲ್ಲಿ ತೆರೆಗೆ ಬರಬೇಕಿತ್ತು. ಇದೀಗ 2024ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ.

ಜೈಲರ್ ಬಳಿಕ ಡಾ ಶಿವರಾಜ್‍ಕುಮಾರ್ ನಟಿಸಿರುವ ಎರಡನೇ ತಮಿಳು ಸಿನಿಮಾ ಇದಾಗಿದೆ. ಆ ಸಮಯಕ್ಕೆ ಈಗಾಗಲೇ ದಕ್ಷಿಣ ಭಾರತದ ಹಲವು ಸಿನಿಮಾಗಳು ತೆರೆಗೆ ಬರಲು ರಿಲೀಸ್ ಡೇಟ್ ಘೋಷಣೆ ಮಾಡಿವೆ. ಅವುಗಳ ಸಾಲಿಗೆ ಕ್ಯಾಪ್ಟನ್ ಮಿಲ್ಲರ್ ಕೂಡ ಸೇರಿಕೊಂಡಿದೆ.

ಧನುಷ್ ಅವರ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು ಅರುಣ್ ಮಾದೇಶ್ವರನ್ ನಿರ್ದೇಶನ ಮಾಡಿದ್ದು, ಇದು ಧನುಷ್ ಅವರ ವೃತ್ತಿಜೀವನದ ಅತ್ಯಂತ ಬಿಗ್ ಬಜೆಟ್ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಪ್ರೇಕ್ಷಕರ ಮನಸೂರೆಗೊಂಡಿದೆ. ಈ ಪ್ಯಾನ್ ಇಂಡಿಯಾ ಚಲನಚಿತ್ರವು 2024ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು 1930-40ರ ಬ್ಯಾಕ್‍ಡ್ರಾಪ್‍ನಲ್ಲಿ ಚಿತ್ರೀಕರಿಸಲಾಗಿದೆ. ಸಂದೀಪ್ ಕಿಶನ್, ಪ್ರಿಯಾಂಕಾ ಅರುಳ್ ಮೋಹನ್ ಮುಂತಾದವರು ನಟಿಸಿದ್ದಾರೆ. ಟಿ ಜಿ ತ್ಯಾಗರಾಜನ್, ಸೆಂಥಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಜಿ ಸರವಣನ್ ಮತ್ತು ಸಾಯಿ ಸಿದ್ಧಾರ್ಥ್ ಸಹ ಹಣ ಹಾಕಿದ್ದಾರೆ. ಹಾಡುಗಳಿಗೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದು, ಸಿದ್ಧಾರ್ಥ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin