ಪ್ರೀಮಿಯರ್ ಪದ್ಮಿನಿ ಚಿತ್ರದ ಬಳಿಕ ಹೊಸ ಚಿತ್ರ ಆರಂಭಿಸಿದ ಶೃತಿ ನಾಯ್ಡು

“ಪ್ರೀಮಿಯರ್ ಪದ್ಮಿನಿ” ಚಿತ್ರ ನಿರ್ಮಾಣದ ಮೂಲಕ ಕಿರುತೆರೆಯಿಂದ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದ ನಟಿ,ನಿರ್ದೇಶಕಿ, ನಿರ್ಮಾಪಕಿ ಶೃತಿ ನಾಯ್ಡು ಇದೀಗ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರವನ್ನೂ ರಮೇಶ್ ಇಂದಿರಾ ಆಕ್ಷನ್‍ಕಟ್ ಹೇಳುತ್ತಿದ್ದು, ಪ್ರಮೋದ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
2019ರಲ್ಲಿ ಪ್ರೀಮಿಯರ್ ಪದ್ಮಿನಿ ಚಿತ್ರ ತೆರೆಗೆ ಬಂದು ನಾಲ್ಕು ವರ್ಷಗಳ ಬಳಿಕ ನಿರ್ಮಾಪಕಿ ಶೃತಿ ನಾಯ್ಡ ಈ ಬಾರಿ ಹೊಸತನದ ಕಥೆ ಮುಂದಿಟ್ಟುಕೊಂಡು ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ದತೆ ನಡೆಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಆರಂಭಿಸುವ ನಾಡದೇವತೆಯ ಆಶೀರ್ವಚನ ಪಡೆದು ಮುಂದಿನ ಕೆಲಸಕ್ಕೆ ಅಡಿ ಇಟ್ಟಿದ್ದಾರೆ.

“ಪ್ರೀಮಿಯರ್ ಪದ್ಮಿನಿ” ಚಿತ್ರ ನಿರ್ದೇಶನ ಮಾಡಿದ್ದ ರಮೇಶ್ ಇಂದಿರಾ ಅವರೇ ಹೊಸ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಶೃತಿ ನಾಯ್ಡು ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಹಿರಿಯ ಕಲಾವಿದರಾದ ಜಗ್ಗೇಶ್, ಮಧುಬಾಲಾ ಅವರ ಜೊತೆ ನಟಿಸಿ ಗಮನ ಸೆಳೆದಿದ್ದ ಪ್ರಮೋದ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Took Goddess chamundeshwari s blessings for another Venture …….
— shruti naidu (@shrunaidu) June 19, 2023
From Premier Padmini movie team #thistimeitsBIG
ತಾಯಿ ಚಾಮುಂಡೇಶ್ವರಿ ಯ ಆಶೀರ್ವಾದ ಪಡೆದೆವು…
ಮತ್ತೊಂದು ಹೆಜ್ಜೆ …..
ಪ್ರೀಮಿಯರ್ ಪದ್ಮಿನಿ ಚಿತ್ರತಂಡದಿಂದ
Shruthi Naidu Chithra
Ramesh Indira @pramodactor1
Rajendra urs pic.twitter.com/js4dbmRG5T
ಅಂದಹಾಗೆ ಶೃತಿ ನಾಯ್ಡು ಚಿತ್ರ ನಿರ್ಮಾಣದ ಹೊಸ ಚಿತ್ರದಲ್ಲಿ ರಮೇಶ್ ಇಂದಿರಾ ಮತ್ತು ಪ್ರಮೋದ್ ಅವರು ಶೃತಿ ನಾಯ್ಡು ಜೊತೆ ಮತ್ತೊಮ್ಮೆ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಮೂರು ಮಂದಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಎರಡನೇ ಚಿತ್ರ ಇದಾಗಿದೆ.

ಚಿತ್ರದ ಚಿತ್ರದ ಕುರಿತು ಮಾಹಿತಿ ನೀಡಿದ ಶೃತಿ ನಾಯ್ಡು ಅವರು ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಕಿಪ್ಟ್ರ್ ಪೂಜೆ ನಡೆದಿದೆ. ಎಲ್ಲೆಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವುದನ್ನು ಇನ್ನು ನಿರ್ದರಿಸಬೇಕಾಗಿದೆ. ಶೀಘ್ರದಲ್ಲಿ ಲೋಕೇಷನ್ ಅಂತಿಮಗೊಳಿಸುತ್ತೇವೆ ಎಂದಿದ್ದಾರೆ.
ನಟ ಪ್ರಮೋದ್ ಆಕ್ಷನ್ ಹಿರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಾಲೇಜು ಸ್ಟೋರಿಯ ಕಥೆ ಚಿತ್ರದಲ್ಲಿದೆ., ಪ್ರೀತಿ, ಸ್ನೇಹ, ಸೇರಿದಂತೆ ಎಲ್ಲರಿಗೂ ಇಷ್ಟವಾಗುವ ಅಂಶಗಳು ಚಿತ್ರದಲ್ಲಿರಲಿದೆ. ಒಟಿಟಿಯ ಭರಾಟೆಯಲ್ಲಿ ಚಿತ್ರಮಂದಿರದಿಂದ ವಿಮುಖವಾಗಿರುವ ಪ್ರೇಕ್ಷಕರನ್ನು ಸಿನಿಮಾ ಮಂದಿರದತ್ತ ಕರೆತರುವ ಪ್ರಯತ್ನ ನಡೆದಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸ ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಶೃತಿ ನಾಯ್ಡು ಚಿತ್ರ ಅಂದ ಮೇಲೆ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ ಎನ್ನುವ ಭರವಸೆಯ ಖಚಿತವಾಗಿದೆ