ಸಿದ್ದು ಪೂರ್ಣ ಚಂದ್ರ ಹೊಸ ಚಿತ್ರ “ಈ ಪಾದ ಪುಣ್ಯ ಪಾದ” ಚಿತ್ರಕ್ಕೆವಿ.ನಾಗೇಂದ್ರ ಪ್ರಸಾದ್ ಕ್ಲಾಪ್

“ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಂದು ಚಿತ್ರ “ಈ ಪಾದ ಪುಣ್ಯಪಾದ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಕ್ಲಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ

ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಮುಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕ ಸಿದ್ದು ಪೂರ್ಣಚಂದ್ರ,ಇದೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗುತ್ತದೆಂದು ಸಿದ್ದು ಪೂರ್ಣಚಂದ್ರ ತಿಳಿಸಿದರು.
ವಿಭಿನ್ನ ಕಥಾ ಹಂದರ ಹೊಂದಿದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭೂತಿ ಕಟ್ಟಿಕೊಡುತ್ತದೆ. ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಅದರಲ್ಲಿ ಮುಖ್ಯವಾಗಿ ಆನೆಕಾಲು ರೋಗಿಯ ಜೀವನ ಶೈಲಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸಲಾಗುತ್ತದೆ. ಇದರ ಜೊತೆಗೆ ಮಕ್ಕಳ ಪಾದ, ವೃದ್ದರ ಪಾದ, ದಾಸರ ಪಾದ, ಸ್ವಾಮೀಜಿಗಳ ಪಾದದ ಕಥೆ ಹೇಳಲಾಗುತ್ತದೆ. ಎಲ್ಲೂ ನೋಡಿರದ ಕೇಳಿರದ ಈ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿರುವೆ ಎಂದರು.

ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್ ಅಭಿನಯಿಸುತ್ತಿದ್ದಾರೆ. ಉಳಿದಂತೆ “ಸಂಭವಾಮಿ ಯುಗೇ ಯುಗೇ” ಚಿತ್ರ ಖ್ಯಾತಿಯ ಜಯ್ ಶೆಟ್ಟಿ, ಬಲ ರಾಜ್ವಾಡಿ, ಚೈತ್ರ, ನಂದಿನಿ ರಾಜ್ ಜೀವನ್ ರಿಚಿ, ಪ್ರಮಿಳ ಸುಬ್ರಮಣ್ಯಂ, ಶಂಕರ್ ಭಟ್ ಹರೀಶ್ ಕುಂದೂರ್, ಯೋಗಿತ, ಬೇಬಿ ರಿಧಿ, ಯೋಗೇಶ್ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ ಎಂದು ಹೇಳಿದರು

ಸಹ ನಿರ್ಮಾಪಕರಾಗಿ ಶ್ರೀಯುತ ಸನ್ನಿ, ಎ.ಕೆ ಪುಟ್ಟರಾಜು ಮತ್ತು ಪ್ರಮಿಳಾ ಸುಬ್ರಮಣ್ಯಂ ಕೂಡ ಸಹ ನಿರ್ಮಾಪಕರಾಗಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಕಲನ ದೀಪಕ್ ಸಿ ಎಸ್, ಕಲೆ ಬಸವರಾಜ್ ಆಚಾರ್, ವಸ್ತ್ರ ವಿನ್ಯಾಸ ನಾಗರತ್ನ ಕೆಹೆಚ್, ಸಂಗೀತ ಅನಂತ್ ಆರ್ಯನ್, ಮೇಕಪ್ ಸಿದ್ದು ರಾಯಚೂರ್, ಸ್ವರೂಪ್ ವಿ ಎಫ್ ಎಕ್ಸ್. ಕಲರಿಂಗ್ ನಿಖಿಲ್ ಕಾರ್ಯಪ್ಪ ಮತ್ತಿತರಿದ್ದಾರೆ.

.