Simha Roopini film Review : ಮನಸೂರೆಗೊಳ್ಳುವ ಭಕ್ತಿ ಪ್ರದಾನ ಚಿತ್ರ “ಸಿಂಹರೂಪಿಣಿ”

ಚಿತ್ರ: ಸಿಂಹರೂಪಿಣಿ
ನಿರ್ದೇಶನ: ಕಿನ್ನಾಳ್ ರಾಜ್
ತಾರಾಗಣ: ಯಶಸ್ವಿನಿ ಸುಬ್ಬೇಗೌಡ, ಸುಮನ್, ಅಂಕಿತಾ ಗೌಡ, ಹರೀಶ್‍ರೈ, ವಿಜಯ್‍ಚೆಂಡೂರು, ತಬಲಾನಾಣಿ, ದಿವ್ಯಾಆಲೂರು, ಸಾಗರ್. ಗೌಡನಾಗಿ ದಿನೇಶ್‍ಮಂಗಳೂರು, ಯಶ್‍ಶೆಟ್ಟಿ, ನೀನಾಸಂ ಅಶ್ವಥ್ ಮತ್ತಿತರರು
ರೇಟಿಂಗ್ : *** 3.5 /5
ಕನ್ನಡದಲ್ಲಿ ಇತ್ತೀಚೆಗೆ ಭಕ್ತಿ ಪ್ರಧಾನ ಚಿತ್ರಗಳು ಬರುವುದು ಕಡಿಮೆ, ಬಂದರೂ ಅಲ್ಲೊಂದು ಇಲ್ಲೊಂದು ಬರುತ್ತಿವೆ. ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಸಿನಿಮಾ ಮಾಡುವುದು ರೂಢಿ, ಅದನ್ನು ಬದಿಗೆ ಸರಿಸಿ ಮನೆ ಮಂದಿಯೆಲ್ಲಾ ಇಷ್ಟಪಡುವ ಆರಾಧಿಸುವ ಭಕ್ತಿ ಪ್ರದಾನ ಚಿತ್ರ “ಸಿಂಹರೂಪಿಣಿ” ಈ ವಾರ ತೆರೆಗೆ ಬಂದಿದೆ.
ಗೀತ ಸಾಹಿತಿಯಾಗಿ ಗಮನ ಸೆಳೆದಿರುವ ಕಿನ್ನಾಳ್ ರಾಜ್ ನಿರ್ದೇಶನ ಮಾಡಿರುವ ಚಿತ್ರ “ಸಿಂಹರೂಪಿಣಿ”. ಹಾಡುಗಳನ್ನು ಚೆಂಡವಾಗಿ ಬರೆಯುವುದು ಗೊತ್ತಿದೆ ಎನ್ನುವ ಕಲೆ ಸಿದ್ದಿಸಿಕೊಂಡಿರುವ ಕಿನ್ನಾಳ ಕಲೆಯ ತವರೂರಿನ ಕಿನ್ನಾಳ್ ರಾಜ್ ಭಕ್ತಿ ಪ್ರದಾನ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ
ಪ್ರತಿ ದೇವರಿಗೂ ಹಿನ್ನಲೆ ಇದೆ ಹಾಗೆಯೇ ದೇವಿ ಮಹಾಲಕ್ಷೀ ರೂಪದಲ್ಲಿ ಮಾರಮ್ಮ ಯಾಕೆ ಆಗ್ತಾಳೆ ಒಂದು ಕಡೆಯಾದರೆ, ಮತ್ತೊಂದು ಭಾಗದಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿ. ದುಷ್ಟರನ್ನು ಸಂಹಾರ ಮಾಡಿದರೆ, ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಭೂಮಿಗೆ ದೇವಾನು ದೇವತೆಗಳು ಬರಲು ಕಾರಣವಿದೆ. ಅದೇ ರೀತಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು ಅಲ್ಲಿನ ಜನರ ಸಂಸ್ಕ್ರತಿ, ಆಚಾರ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ಪ್ರೇಕ್ಷಕರಿಗೆ ಮನಮುಟ್ಟವ ಹಾಗೆ ಕಟ್ಟಿಕೊಡಲಾಗಿದೆ
ದೇವಿಗೆ ಯಾತಕ್ಕಾಗಿ ಕೋಣ ಬಲಿ ಕೊಡುತ್ತಾರೆ. ಭಕ್ತಿ ಸಿನಿಮಾದಲ್ಲಿ ಪವಾಡ, ಮಹಿಮೆಗಳು ಇರುವುದು ಸಹಜ. ಅದರಂತೆ ಇದರಲ್ಲೂ ಎಲ್ಲವನ್ನು ಸಂದರ್ಭಕ್ಕೆ ತಕ್ಕಂತೆ ತೋರಿಸಲಾಗಿದೆ. ಹೀಗಾಗಿ ಚಿತ್ರದಲ್ಲಿ ಅಸಹಜ ಎನ್ನುವ ಯಾವುದೇ ದೃಶ್ಯಗಳು ಚಿತ್ರದಲ್ಲಿ ಇಲ್ಲ ಅಷ್ಟರ ಮಟ್ಟಿಗೆ ನಿರ್ದೇಶಕರು ಕಾಳಜಿ ಮತ್ತು ಜಾಗೃತೆ ವಹಿಸಿ ಚಿತ್ರವನ್ನು ತೆರೆಗೆ ತಂದಿದ್ದಾರೆ.
ದೇವಿಯ ಸ್ವರೂಪಗಳ ಜೊತೆ ಜತೆಗೆ ಪ್ರೀತಿ ಸನ್ನಿವೇಶಗಳು ಇದ್ದರೂ, ಇಬ್ಬರನ್ನು ದೇವಿಯ ಭಕ್ತರೆಂದು ಬಿಂಬಿಸಲಾಗಿದೆ. ಅಲ್ಲಿನ ಊರ ಗೌಡ ದೇವಿಯ ವಿರುದ್ದ ಸಂಚನ್ನು ರೂಪಿಸಲು ಹೋದಾಗ ಏನಾಗುತ್ತದೆ ಇದರಿಂದ ಕ್ಲೈಮಾಕ್ಸ್‍ದಲ್ಲಿ ದೇವಿ ಏನು ಮಾಡುತ್ತಾಳೆ ಎನ್ನುವುದನ್ನು ಕುತೂಹಲ ಭರಿತವಾಗಿ ತೆರೆಯ ಮೇಲೆ ತರಲಾಗಿದೆ.
ಭಕ್ತಿ ಪ್ರದಾನ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕಿನ್ನಾಳ್ ರಾಜ್ ಜನರಿಗೆ ಇಷ್ಟವಾಗುವ ಸಿನಿಮಾ ನೀಡಿದ್ದಾರೆ,ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಬಾಯಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಅಂಕಿತಾಗೌಡ, ಯಶಸ್ವಿನಿಸುಬ್ಬೆಗೌಡ, ಸುಮನ್, ಹರೀಶ್‍ರೈ, ವಿಜಯ್‍ಚೆಂಡೂರು, ತಬಲಾನಾಣಿ, ದಿವ್ಯಾಆಲೂರು, ಸಾಗರ್. ಗೌಡನಾಗಿ ದಿನೇಶ್‍ಮಂಗಳೂರು, ಯಶ್‍ಶೆಟ್ಟಿ, ನೀನಾಸಂಅಶ್ವಥ್, ಖುಷಿ ಬಸ್ರೂರು, ಆರವ್‍ಲೋಹಿತ್ ಸೇರಿದಂತೆ ನೂರ ಇಪ್ಪತ್ತ್ತನಾಲ್ಕು ಪೆÇೀಷಕ ಕಲಾವಿದರು ನಟಿಸಿರುವುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಕಿರಣ್‍ಕುಮಾರ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಒಂದೇ ರೀತಿಯ ಸಿನಿಮಾ ನೋಡಿ ಬೇಸರವಾದರೆ “ಸಿಂಹರೂಪಿಣಿ” ಮನ ಪುಳಕಗೊಳ್ಳುವ ಜೊತೆಗೆ ಮನಸ್ಸಿಗೆ ಹಿಡಿಸುವ ಚಿತ್ರ.