Song release from the love thriller "Austinna Mahanmauna": Curiosity increases

ಲವ್, ಥ್ರಿಲ್ಲರ್ ಕಥನದ “ಆಸ್ಟಿನ್‍ನ ಮಹನ್ಮೌನ” ಚಿತ್ರದ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

ಲವ್, ಥ್ರಿಲ್ಲರ್ ಕಥನದ “ಆಸ್ಟಿನ್‍ನ ಮಹನ್ಮೌನ” ಚಿತ್ರದ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ

ಲವ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಹೊಸ ಪ್ರತಿಭೆಗಳ “ಆಸ್ಟಿನ್‍ನ ಮಹನ್ಮೌನ” ಚಿತ್ರ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬಂದಿದೆ, ಎಲ್ಲಾ ಅಂದುಕೊಂಡಂತೆ ಆದರೆ ಸೆಪ್ಟಂಬರ್ 5 ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ.

ವಿಭಿನ್ನ ಶೀರ್ಷಿಕೆ ಮತ್ತು ಹೊಸತನದ ಕಥೆಯೊಂದಿಗೆ ಕನ್ನಡ ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಅನುಭವವಿರುವ ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ, ನಿರ್ಮಿಸಿ ನಿರ್ದೇಶಿಸಿರುವ “ಆಸ್ಟಿನ್‍ನ ಮಹನ್ಮೌನ” ಬಿಡುಗಡೆ ಹಂತಕ್ಕೆ ಬಂದಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ವಿನಯ್ ಕುಮಾರ್ ವೈದ್ಯನಾಥನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಚಿತ್ರರಂಗದ ಬಗೆ ಆಸಕ್ತಿ ಇದ್ದ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕಿರುಚಿತ್ರಗಳನ್ನ ನಿರ್ದೇಶನ ಮಾಡಿದ ಅನುಭವವಿದೆ. ಸುಮಾರು 13 ವರ್ಷಗಳ ನಂತರ ನನ್ನ ಕನಸು ಈಗ ನನಸಾಗುತ್ತಿದೆ. ಈ ಚಿತ್ರದಲ್ಲಿ ನಟಿಸಿ , ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡಿದ್ದೇನೆ. ಈ ಚಿತ್ರದ ಟೈಟಲ್ ಕಥೆಗೆ ಸೂಕ್ತವಾಗಿದ್ದು , ಹಾಗಾಗಿ ಅದನ್ನೇ ಇಟ್ಟಿದ್ದೇನೆ ಎಂದರು

ಯಾವುದೇ ಜಾತಿ , ಧರ್ಮದ ಕಥೆ ಒಳಗೊಂಡಿಲ್ಲ ,ಇದೊಂದು ಲವ್ ಥ್ರಿಲ್ಲರ್ ಮತ್ತು ಎಮೋಷನ್ ಕಥೆ ಒಳಗೊಂಡಿದೆಆಸ್ಟಿನ್ ಎನ್ನುವುದು ನಾಯಕನ ಪಾತ್ರದ ಹೆಸರು, ಚಿತ್ರದಲ್ಲಿ ಎರಡು ಶೇಡ್ ಗಳಲ್ಲಿ ಬರಲಿದೆ.ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಧರ್ಮದಾಗಿದ್ದು , 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಕುಟುಂಬದ ಕಥಾನಕ ಒಳಗೊಂಡಿದೆ.

2023 ರಲ್ಲಿ ಆರಂಭಗೊಂಡ ಚಿತ್ರ ಮೈಸೂರು , ಹೊನ್ನಾವರ ಹಾಗೂ ಚಿಕ್ಕಮಗಳೂರು ಸೇರಿದಂತೆ ಸುಮಾರು 23 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡದಿದ್ದೇವೆ. ನಮ್ಮ ಚಿತ್ರ ಸೆಪ್ಟಂಬರ್ 5ರಂದು ರಾಜ್ಯದ್ಯಂತ ಕೆ .ಆರ್. ಜೆ ಫಿಲ್ಮ್ಸ್ ಮೂಲಕ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ.ಬಹುದಿನದ ಶ್ರಮದ ಚಿತ್ರ ಇದಾಗಿದ್ದು , ನಿಮ್ಮೆಲ್ಲರ ಪ್ರೀತಿ , ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.

ನಾಯಕಿ ರಿಷಾ ಗೌಡ ಮಾತನಾಡಿ ಮೈಸೂರಿನವಳು , ಕಲಾ ರಂಗಭೂಮಿಯಲ್ಲಿ ನಾಟಕ ಮಾಡಿಕೊಂಡು ಬಂದಿದ್ದೇನೆ. ಇದು ಮೂರನೇ ಚಿತ್ರ. ಹೀರೋಯಿನ್ ಗಳನ್ನು ಗ್ಲಾಮರಸ್ ಪಾತ್ರಗಳಿಗೆ ಹೆಚ್ಚು ಬಳಸಿಕೊಳ್ಳುತ್ತಾರೆ, ಆದರೆ ಚಿತ್ರದಲ್ಲಿ ನಿರ್ದೇಶಕರು ನನಗೆ ಒಂದು ಉತ್ತಮ ಪಾತ್ರ ನೀಡಿದ್ದು , ಹೋಮ್ಲಿ ಹುಡುಗಿಯಾಗಿ ಅಭಿನಯಿಸಿದ್ದೇನೆ. ಚಿತ್ರದ ಕಂಟೆಂಟ್ ನೋಡಿ ಒಪ್ಪಿಕೊಂಡಿದ್ದೆ. ಚಿತ್ರ ಸೊಗಸಾಗಿ ಬಂದಿದೆ , ನಮ್ಮನ್ನ ಹರಸಿ , ಬೆಳೆಸಿ ಎಂದರು.

ಇನ್ನೋರ್ವ ನಾಯಕಿ ಮೈಸೂರಿನ ಬೆಡಗಿ ಪ್ರಕೃತಿ ಪ್ರಸಾದ್ ಮಾತನಾಡಿ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಚಿತ್ರವಾಗಿದ್ದು , ಡಾಕ್ಟರ್ ಪಾತ್ರ ನಿರ್ವಹಿಸುತ್ತಿದ್ದೇನೆ. ಪಾತ್ರವೂ ಬಹಳ ವಿಭಿನ್ನವಾಗಿದೆ. ಹಾಡುಗಳು ನಿಮಗೆ ಹೇಗೆ ಅನ್ನಿಸಿತು , ನಿರ್ದೇಶಕ ಬಹಳಷ್ಟು ಶ್ರಮ ಪಟ್ಟಿದ್ದಾರೆ ಎಂದು ಹೇಳಿದರು

ಸಂಗೀತ ನಿರ್ದೇಶಕ ವಿಶ್ವಿ ಮಾತನಾಡಿ ಮೊದಲ ಸಂಗೀತ ನಿರ್ದೇಶನದ ಚಿತ್ರ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದೆ. ಒಂದು ಹಾಡು ಲಾಟಿನ್ ಭಾಷೆಯಲ್ಲಿ ಮೂಡಿದೆ. ಈ ಚಿತ್ರದ ರೀ ರೆಕಾರ್ಡಿಂಗ್ ಕೆಲಸ ಬಹಳ ಉತ್ತಮವಾಗಿ ಮೂಡಿ ಬಂದಿದೆ. ನಿಮ್ಮ ಸಪೋರ್ಟ್ ನಮ್ಮ ಟೀಮ್ ಮೇಲೆ ಇರಲಿ ಎಂದರು.

ಚಿತ್ರದಲ್ಲಿಬಾಲರಾಜವಾಡಿ , ರಘು ರಾಮನಕೊಪ್ಪ , ಜಗಪ್ಪ , ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ , ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin