Stunt master Kaurava Venkatesh, who became a hero through the film "Ondu sundara devvada kathe"

“ಒಂದು ಸುಂದರ ದೆವ್ವದ ಕಥೆ” ಚಿತ್ರದ ಮೂಲಕ ನಾಯಕನಾದ ಸ್ಟಂಟ್ ಮಾಸ್ಟರ್ ಕೌರವ ವೆಂಕಟೇಶ್ - CineNewsKannada.com

“ಒಂದು ಸುಂದರ ದೆವ್ವದ ಕಥೆ” ಚಿತ್ರದ ಮೂಲಕ ನಾಯಕನಾದ ಸ್ಟಂಟ್ ಮಾಸ್ಟರ್ ಕೌರವ ವೆಂಕಟೇಶ್

ಶೋಭಾವತಿ ಕಪಿಲ್ ನಿರ್ಮಿಸುತ್ತಿರುವ, ಆರ್. ಲಕ್ಷ್ಮಿ ನಾರಾಯಣ ಗೌಡ ಅರ್ಪಿಸುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ನಿರ್ದೇಶನದ “ಒಂದು ಸುಂದರ ದೆವ್ವದ ಕಥೆ” ಯ ಮೂಲಕ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ

ಈ ಹಿಂದೆ ದಾಸರಹಳ್ಳಿ, ಬಿಡುಗಡೆಗೆ ಸಿದ್ದವಾಗಿರುವ ದೇವದೂತ ಚಿತ್ರಗಳ ನಿರ್ದೇಶಕ ಕಪಿಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 10ನೇ ಚಿತ್ರ ಇದಾಗಿದೆ.ಟೈಟಲ್ ನಷ್ಟೇ ಕುತೂಹಲಕಾರಿ ಹಾಗೂ ವಿಭಿನ್ನ ಕಥಾವಸ್ತು ಒಳಗೊಂಡ ಈ ಚಿತ್ರದಲ್ಲಿ ಇದೇ ಮೊದಲಬಾರಿಗೆ ನಾಯಕ ನಟರಾಗಿ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಇದೇ ತಿಂಗಳ 23ರಿಂದ ಚಿತ್ರೀಕರಣ ಆರಂಭಿಸಿ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

ಆರು ಜನ ಪ್ರತಿಭಾವಂತ ಹೆಣ್ಣುಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ನಿಮಗೆ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆಂದು ನಂಬಿಸಿ ಮೋಸ ಮಾಡುತ್ತಾರೆ. ಅದೇ ಕಾಲೋನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ನಾಯಕ ಈ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುತ್ತಾನೆ. ಹೀಗೆ ಕುತೂಹಲಕರ ಕಥಾಹಂದರ ಒಳಗೊಂಡ ಒಂದು ಸುಂದರ ದೆವ್ವದ ಕಥೆ ಚಿತ್ರದಲ್ಲಿ ಇದೇ ಮೊದಲಬಾರಿಗೆ ಒಬ್ಬ ಸಾಹಸ ನಿರ್ದೇಶಕ ಹಾಗೂ ನೃತ್ಯನಿರ್ದೇಶಕ ನಾಯಕ, ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಸಾಯಿ ಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ, ಸಂಭಾಷಣೆ, ಹರ್ಷ ಕೊಗೋಡ್ ಸಂಗೀತ, ಶಂಕರ್ ಆರಾಧ್ಯ ಛಾಯಾಗ್ರಹಣ, ವಿನಯ್. ಜಿ. ಆಲೂರು ಸಂಕಲನ, ಶರಣ್ ಗದ್ವಾಲ್ ತಾಂತ್ರಿಕ ನಿರ್ದೇಶನ ಈ ಚಿತ್ರಕ್ಕಿದೆ.

ಕೌರವ ವೆಂಕಟೇಶ್, ಕೆ.ಟಿ. ಮುನಿರಾಜ್, ಆರ್. ಲಕ್ಷ್ಮೀನಾರಾಯಣಗೌಡ, ಗುರು ಪ್ರಸಾದ್, ಸುರೇಶ್ ಮುರಳಿ, ವಿ. ಸಿ.ಎನ್. ಮಂಜು, ವಿಕ್ಟರಿ ದಯಾಲನ್, ನಾರಾಯಣಸ್ವಾಮಿ, ವಿಕ್ಟರಿ ವಾಸು, ಶಂಕರ್ ಭಟ್, ಪ್ರೇಮ್ ಪಾವಗಡ ಸೇರಿದಂತೆ ಸಾಕಷ್ಟು ಜನ ರಂಗಕಲಾವಿದರುಗಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin