“45” gets an international touch: Promotion with Uganda’s ‘Ghetto Kids’

“45” ಚಿತ್ರಕ್ಕೆ ಅಂತರಾಷ್ಟ್ರೀಯ ಸ್ಪರ್ಶ: ಉಗಾಂಡದ ‘ಗೆಟ್ಟೋ ಕಿಡ್ಸ್” ಜೊತೆಗೆ ಪ್ರಚಾರ - CineNewsKannada.com

“45” ಚಿತ್ರಕ್ಕೆ ಅಂತರಾಷ್ಟ್ರೀಯ ಸ್ಪರ್ಶ: ಉಗಾಂಡದ ‘ಗೆಟ್ಟೋ ಕಿಡ್ಸ್” ಜೊತೆಗೆ ಪ್ರಚಾರ

ಉಗಾಂಡದ ವೈರಲ್ ಡ್ಯಾನ್ಸ್ ಮಕ್ಕಳ ತಂಡ “ಗೆಟ್ಟೋ ಕಿಡ್ಸ್” ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದರ ಪ್ರಮೋಷನ್‍ಗಾಗಿ ಆಗಮಿಸುತ್ತಿದ್ದಾರೆ. ಅದುವೇ “ ಬಹುನಿರೀಕ್ಷಿತ “ 45” ಚಿತ್ರಕ್ಕಾಗಿ. ಈಗಾಗಲೇ ವಿವಿಧ ಕಾರಣಗಳಿಂದ ಸದ್ದು ಮಾಡಿರುವ ಚಿತ್ರಕ್ಕೆ ಇದೀಗ ಮತ್ತಷ್ಟು ಬಲಬಂದಂತಾಗಲಿದೆ.

ಗೆಟ್ಟೋ ಕಿಡ್ಸ್‍ನ 11 ಮಕ್ಕಳು ಸೇರಿದಂತೆ 18 ಮಂದಿಯ ತಂಡ ನಾಳೆ ಭಾರತಕ್ಕೆ ಆಗಮಿಸಲಿದ್ದು “45” ಚಿತ್ರದ ಪ್ರೊಮೋಷನಲ್ ಹಾಡಿನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆ ಹೆಜ್ಜೆ ಹಾಕಲಿದ್ದಾರೆ. ನಾಲ್ಕೈದು ದಿನಗಳ ಕಾಲ ಪ್ರಮೋಷನಲ್ ಹಾಡಿನ ಚಿತ್ರೀಕರಣ ನಡೆಯಲಿದ್ದು ಈ ಮೂಲಕ “45” ಚಿತ್ರ ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ.

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಬಹುತಾರಾಗಣ ಮತ್ತು ಬಹುಕೋಟಿ ವೆಚ್ಚದ ಸಿನಿಮಾವನ್ನು ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಧಾರಾಳವಾಗಿ ಖರ್ಚು ಮಾಡಿದ್ದಾರೆ .ಅದರ ಭಾಗವಾಗಿ ಉಗಾಂಡ ಗೆಟ್ಟೋ ಕಿಡ್ಸ್ ಡಾನ್ಸ್ ತಂಡವನ್ನು ಕರೆಸುತ್ತಿದ್ದಾರೆ.

ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಚಿತ್ರದ ಮೇಲೆ ಇರುವ ಪ್ರೀತಿ, ಅಭಿಮಾನವೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ರಮೇಶ್ ರೆಡ್ಡಿ ಅವರು, “45” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಉಗಾಂಡದ ಡ್ಯಾನ್ಸ್ ವೈರಲ್ ಡ್ಯಾನ್ಸ್ ತಂಡ ಗೆಟ್ಟೋ ತಂಡವನ್ನು ಕನ್ನಡಕ್ಕೆ ಕರೆಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂದಿದ್ಧಾರೆ.

“ಉಗಾಂಡ” ದ ವೈರಲ್ ಡ್ಯಾನ್ಸ್ ತಂಡವನ್ನು ಪ್ರಚಾರಕ್ಕಾಗಿ ಕರೆಸುತ್ತಿದ್ದೇವೆ, ಇದೇ 15ರಿಂದ ಹಾಡಿನ ಚಿತ್ರೀಕರಣ ನಡೆಯಲಿದ್ದು ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಪ್ರಮೋಷನ್‍ನಲ್ ಹಾಡಿಗೆ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಲಿದ್ದು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಭಾಗಿಯಾಗಲಿದ್ದಾರೆ. ಹಾಡಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಿರ್ದೇಶಕ ಅರ್ಜುನ್ ಜನ್ಯ ಪ್ರತಿಕ್ರಿಯಿಸಿ ಉಗಾಂಡದ “ಗೆಟ್ಟೋ ಕಿಡ್ಸ್” ಲಕ್ಷಾಂತರ ಅನುಯಾಯಿಗಳನ್ನು ಜಗತ್ತಿನಾದ್ಯಂತ ಹೊಂದಿದೆ. ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಡಿನ ಚಿತ್ರೀಕರಣ ನಡೆಸಲಿದೆ. ಜಾಗತಿಕ ಮಟ್ಟದಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. ಸರಿ ಸುಮಾರು 2.5 ಕೋಟಿ ವೆಚ್ಚದಲ್ಲಿ ಪ್ರಮೋಷನಲ್ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. ಹಾಡು ಕಲರ್‍ಫುಲ್ ಆಗಿರಲಿದೆ. ಗೆಟ್ಟೋ ಕಿಡ್ಸ್ ತಂಡದ ಮೂಲಕ ಅಂತರಾಷ್ಟ್ರೀಯ ಸ್ಪರ್ಶವನ್ನು ಹಾಡಿಗೆ ನೀಡಲಾಗುತ್ತಿದೆ ಎಂದಿದ್ಧಾರೆ.

ಈ ಮೂಲಕ ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಪ್ರಯತ್ನ ಇದಾಗಿದೆ. ಬಹು ತಾರಾಗಣದ ಚಿತ್ರ “45” ಅಂತರಾಷ್ಟ್ರೀಯ ಗಮನ ಸೆಳೆದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin