“ಬ್ರೆತ್” ಪುಸ್ತಕ ಬಿಡುಗಡೆ: ಗಣ್ಯರು ಭಾಗಿ

ಹಿರಿಯ ಲೇಖಕ ಡಾ. ಎಸ್.ಕೆ. ಮೂರ್ತಿ ರಚಿಸಿದ “ಬ್ರೆತ್” ದೇಹ ಮತ್ತು ಚೇತನದ ನಡುವೆ ಸೇತುಬಂಧ” ಎಂಬ ಕೃತಿಯ ಬಿಡುಗಡೆ ಬೆಂಗಳೂರಿನ ಬಸನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಡೆಯಿತು.
ಅದಮ್ಯ ಚೇತನದ ಸ್ಥಾಪಕಿ ತೇಜಸ್ವಿನಿ ಅನಂತಕುಮಾರ್,ಶ್ವಾಸಕೋಶ ತಜ್ಞ ಡಾ. ಗುರುಪ್ರಸಾದ್ ಭಟ್, ಅಷ್ಟಾಂಗ ಯೋಗ ಗುರು ಅಜಿತ್ ಕುಮಾರ್ ಶೆಣೈ ಮತ್ತು ನಿವೃತ್ತ ಜನರಲ್ ಹಾಗು ವೈದ್ಯ ಡಾ. ಶಿವಶಂಕರ್ ಶಾಸ್ತ್ರೀ ಈ ವೇಳೆ ಹಾಜರಿದ್ದರು
ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲಾ ಅತಿಥಿಗಳು, “ಇಂದಿನ ಹತಾಶ ಮತ್ತು ಆತಂಕಪೂರ್ಣ ಜೀವನದಲ್ಲಿ ಉಸಿರಾಟ ಅನಾಯಾಸವಾಗಿ ನಡೆಯುವ, ಆದರೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಅದನ್ನು ಜಾಗೃತವಾಗಿ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
“ಬ್ರೆತ್” ಕುರಿತು ಮಾಹಿತಿ ಹಂಚಿಕೊಂಡ ಗಣ್ಯರು ,ಪುಸ್ತಕ ಉಸಿರಾಟದ ಮಹತ್ವ ವೈಜ್ಞಾನಿಕ ದೃಷ್ಟಿಕೋನದಿಂದ, ನಿದರ್ಶನಗಳು ಮತ್ತು ಪುರಾವೆಗಳೊಂದಿಗೆ ವಿವರಿಸಿದ್ದು, ಸಂಶಯಾತ್ಮಕ ಮನಸ್ಸು ಹೊಂದಿರುವವರಿಗೆಲ್ಲರಿಗೂ ಮನನೀಯವಾಗುವ ರೀತಿಯಲ್ಲಿ ನಿರೂಪಿತವಾಗಿದೆ. ಈ ಕೃತಿ, ಓದುವವರನ್ನು ಆತ್ಮಪರಿಶೀಲನೆಗೆ ದಾರಿ ತೋರಿಸಬಲ್ಲ ಶಕ್ತಿಯಾಗಿದೆ ಎಂದು ಶ್ಲಾಘಿಸಿದರು.