“Black Sheep” movie ready for release: Song, trailer unveiled

“ಬ್ಲ್ಯಾಕ್ ಶೀಪ್” ಚಿತ್ರ ಬಿಡುಗಡೆಗೆ ಸಿದ್ದ: ಹಾಡು, ಟ್ರೈಲರ್ ಅನಾವರಣ - CineNewsKannada.com

“ಬ್ಲ್ಯಾಕ್ ಶೀಪ್” ಚಿತ್ರ ಬಿಡುಗಡೆಗೆ ಸಿದ್ದ: ಹಾಡು, ಟ್ರೈಲರ್ ಅನಾವರಣ

ಹೊಸ ಪ್ರತಿಭೆಗಳು ಸೇರಿಕೊಂಡು ಸಿದ್ದಪಡಿಸಿರುವ “ಬ್ಲ್ಯಾಕ್ ಶೀಪ್” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡು ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ

‘ಹರೇ ರಾಮ ಹರೇ ಕೃಷ್ಣ’ದಲ್ಲಿ ಶೃತಿಹರಿಹರನ್, ‘ದೇವ್ ಸನ್ ಆಫ್ ಮುದ್ದೆಗೌಡ’ದಲ್ಲಿ ಚಾರ್ಮಿಕೌರ್‍ಗೆ ಜೋಡಿ, ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರಕ್ಕೆ ಡ್ಯಾನ್ಸ್ ಕೋರಿಯಾಗ್ರಾಫರ್ ಆಗಿದ್ದ ಜೀವನ್ ಹಳ್ಳಿಕಾರ್ ಇದೆಲ್ಲಾ ಅನುಭವದಿಂದ ಈಗ ಸಿನಿಮಾಕ್ಕೆ ರಚನೆ,ಚಿತ್ರಕಥೆ, ನಿರ್ದೇಶನ ಹಾಗೂ ನೃತ್ಯ ಸಂಯೋಜನೆ ಮಾಡಿದ್ದಾರೆ.

ಅಶ್ವಿನಿ ಗುರುಚರಣ್ ಬಂಡವಾಳ ಹೂಡುವ ಜತೆಗೆ ಕಾಸ್ಟ್ಯೂಮ್ ಡಿಸೈನರ್ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಮಂಜುನಾಥ್.ಪಿ.ರಾವ್ ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ

ನಿರ್ದೇಶಕ ಜೀವನ್ ಹಳ್ಳಿಕಾರ್ ಮಾತನಾಡಿ ಐದು ಜಾನರ್, ಎರಡು ಮಗ್ಗಲುಗಳೊಂದಿಗೆ ಕ್ರೈಮ್, ಸಸ್ಪೆನ್ಸ್, ಥ್ರಿಲ್‍ರ್ ಕಥೆ ಒಳಗೊಂಡ ಚಿತ್ರ. ಉಪೇಂದ್ರ ಅಭಿಮಾನಿಯಾಗಿ, ಅವರಿಂದ ಸ್ಪೂರ್ತಿಗೊಂಡು ಭೂತಕಾಲ, ವರ್ತಮಾನಕಾಲದ ಸನ್ನಿವೇಶ ಸೃಷ್ಟಿಸಲಾಗಿದೆ. ಒಂದಷ್ಟು ನೈಜ ಘಟನೆಗಳನ್ನು ಸಿನಿಮಾಕ್ಕೆ ಬಳಸಲಾಗಿದೆ. ಜಾನರ್‍ದಲ್ಲಿ ರೈಮಿಂಗ್ ಪದ ಹುಟ್ಟಿಕೊಂಡಿದ್ದರಿಂದ ಇದೇ ಶೀರ್ಷಿಕೆ ಇಡಲಾಗಿದೆ ಎಂದು ವಿವರ ನೀಡಿದರು

ಹೀರೋ ಮತ್ತು ವಿಲನ್ ಮಧ್ಯೆ ನಡೆದ ಸಂಘರ್ಷದಲ್ಲಿ ಕೆಲ ಘಟನೆಗಳನ್ನು ಮರೆತು ಹೇಗೆ ಜೀವನ ಸಾಗಿಸಿರುತ್ತಾನೆ. ಹಾಗೆ ಮರೆತ ವಿಷಯಗಳನ್ನು ಹುಡುಕಲು ಯಾವ ರೀತಿ ಪ್ರಾರಂಭಿಸುತ್ತಾನೆ. ಕೊನೆ ಹಂತದವರೆಗೂ ಕುತೂಹಲ ಹೆಚ್ಚಿಸಲಿದೆ. ಅಲ್ಲದೆ ಮಾಫಿಯಾ ಅಂಶಗಳನ್ನು ತೋರಿಸಲಾಗಿದೆ. ಬೆಂಗಳೂರು, ಮಂಗಳೂರು, ಬಾಂಬೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಅಂತ ಮಾಹಿತಿ ತೆರೆದಿಟ್ಟರು.

ವಿಶಾಲ್‍ಕಿರಣ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಿ ಶಿವಾಂಗಿದಾವೆ ನಾಯಕಿ. ಖಳನಾಗಿ ಪ್ರಶಾಂತ್.ವಿ.ಹರಿ. ಉಳಿದಂತೆ ನಿಶಾಹೆಗಡೆ, ಸಿದ್ಲುಂಗು ಶ್ರೀಧರ್, ಕೃಷ್ಣಹೆಬ್ಬಾಳೆ, ಸುಂದರ್‍ವೀಣಾ, ಪುನೀತ್, ದೀಪಿಕಾ ಅಡ್ತಲೆ ಮುಂತಾದವರು ಅಭಿನಯಿಸಿದ್ದಾರೆ.

ಅಭಿಜಿತ್‍ಮಹೇಶ್-ಶೈಲೇಶ್ ಕುಮಾರ್ ಸಾಹಿತ್ಯದ ಗೀತೆಗಳಿಗೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೇವೂ, ಸಂಕಲನ ಎಸ್.ಆಕಾಶ್ ಮಹೇಂದ್ರಕರ್, ಸಾಹಸ ಅವತಾರ್ ಆದಿತ್ಯ ಅವರದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin