“ಸುಖೀಭವ” ಚಿತ್ರದ ಟೀಸರ್ ಬಿಡುಗಡೆ : ಮುಂದಿನ ತಿಂಗಳು ಬಿಡುಗಡೆ
ಹೊಸಬರ “ಸುಖೀಭವ” ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆಯಾಗಿದ್ದು ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ ಸಂತೋಷ್ ಕುಮಾರ್-ಭಾರ್ಗವಿ ಸಂತೋಷ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಎನ್.ಕೆ.ರಾಜೇಶ್‍ನಾಯ್ಡು ಆಕ್ಷನ್ ಕಟ್ ಹೇಳಿದ್ದಾರೆ ಸುಖೀಭವ ಹೆಸರಿನಂತೆ ಪ್ರಾರಂಭದಿಂದಲೂ ಯಾವುದೇ ಅಡೆತಡೆ ಇಲ್ಲದೆ ಎಲ್ಲಾ ಕೆಲಸಗಳು ಸುಗಮವಾಗಿ ಮುಗಿದಿದೆ.

ನಿರ್ದೇಶಕ ಎನ್. ಕೆ ರಾಜೇಶ್ ನಾಯ್ಡು ಮಾತನಾಡಿ ಪ್ರೀತಿ, ಭಾವನೆಗಳು, ಹಾಸ್ಯ ಹಾಗೂ ಮನರಂಜನೆಯಿಂದ ಕೂಡಿದ ಚಿತ್ರವಾಗಿದೆ. ಬದುಕಲ್ಲಿ ಮೊದಲ ಪ್ರೀತಿ ಒಳ್ಳೆಯ ಪ್ರೀತಿ ಎನ್ನುತ್ತಾರೆ. ಹಂತದಲ್ಲಿ ಅರ್ಥವಾಗಿ, ಅದನ್ನು ಹುಡುಕಿಕೊಂಡು ಹೋದಾಗ, ಅದು ಸಿಗುತ್ತದಾ ಇಲ್ಲವಾ ಇವೆಲ್ಲಾವನ್ನು ಸಕರಾತ್ಮಕ ರೀತಿಯಲ್ಲಿ ಏನು ಹೇಳಬೇಕೋ ಅದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ಬದುಕಿನ ಪಯಣದ ಸಿನಿಮಾ ಎಂದರು

ಮಹೇಂದ್ರ ನಾಯಕ. ಸುಶ್ಮಿತ ನಾಯಕ್ ಹಾಗೂ ವಿಯಾನ್‍ಶಿ ಗ್ಡೆ ನಾಯಕಿಯರು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ಪ್ರಮೋದ್ ಮರವಂತೆ, ಕೊನೆಯ ಗೀತೆಗೆ ಸಂತೋಷ್‍ಕುಮಾರ್ ಮತ್ತು ಎನ್.ಕೆ.ರಾಜೇಶ್ ನಾಯ್ಡು ಸಾಹಿತ್ಯ ಒದಗಿಸಿದ್ದಾರೆ.
ಬಿ.ಜೆ.ಭರತ್-ಶುಭಮ್-ವಿಯಾನ್.ಎಸ್.ಎ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ನಟ ಶರಣ್ ಬೇಡ ಮಚ್ಚಾ ಬೇಡ ಸಾಲಿನ ಗೀತೆಗೆ ಧ್ವನಿಯಾಗಿರುವುದು ವಿಶೇಷ. ಛಾಯಾಗ್ರಹಣ ಎಸ್.ಬಿ.ಮಂಜುನಾಥ್ ನಾಯಕ್, ಕಾರ್ಯಕಾರಿ ನಿರ್ಮಾಪಕ ವಿನಯ್.ಎನ್, ಸಂಕಲನ ಮಧುತುಂಬುಕೆರೆ, ಸಾಹಸ ನರಸಿಂಹ ಅವರದಾಗಿದೆ. ಬೆಂಗಳೂರು, ಉಡುಪಿ, ಸಕಲೇಶಪುರ, ಕಳಸ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.


