Bharathi Teacher 7th class Movie Review: ಸಾಮಾಜಿಕ ಕಳಕಳಿಯ ಸಮಾಜಮುಖಿ ಚಿತ್ರ “ಭಾರತಿ ಟೀಚರ್ 7ನೇ ತರಗತಿ” - CineNewsKannada.com

Bharathi Teacher 7th class Movie Review: ಸಾಮಾಜಿಕ ಕಳಕಳಿಯ ಸಮಾಜಮುಖಿ ಚಿತ್ರ “ಭಾರತಿ ಟೀಚರ್ 7ನೇ ತರಗತಿ”

ಚಿತ್ರ: ಭಾರತಿ ಟೀಚರ್ 7ನೇ ತರಗತಿ
ನಿರ್ದೇಶನ: ಎಂ.ಎಲ್.ಪ್ರಸನ್ನ
ತಾರಾಗಣ : ರೋಹಿತ್ ರಾಘವೇಂದ್ರ, ಯಾಶಿಕ, ಸಿಹಿಕಹಿ ಚಂದ್ರು, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕ ನಂಜಪ್ಪ, ರಂಗಸ್ವಾಮಿ, ಸೌಜನ್ಯ ಸುನಿಲ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತಿತರರು
ರೇಟಿಂಗ್: *** 3.5/5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಥೆ ಮತ್ತು ಕಂಟೆಂಟುಗಳುಳ್ಳ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲಿ ಬಹುತೇಕ ಹೊಸಬರ ಚಿತ್ರಗಳು ಎನ್ನುವುದು ಹೆಗ್ಗಳಿಕೆ ವಿಷಯ. ಈ ವಾರ ತೆರೆಗೆ ಬಂದಿರುವ “ಭಾರತಿ ಟೀಚರ್ 7ನೇ ತರಗತಿ” ವಿಭಿನ್ನ ಸಾಲಿಗೆ ನಿಲ್ಲಬಹುದಾದ ಸಿನಿಮಾ.

ಹಿರಿಕರು ತಾವು ಅನುಭವಿಸಿದ ಕಂಡ ಸತ್ಯವನ್ನು ಗಾದೆಯ ಮೂಲಕ ಕಟ್ಟಿಕೊಟ್ಟಿದ್ದಾರೆ.ಅದರಲ್ಲಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವುದು ಕೂಡ ಒಂದು. ಇದೇ ಆಶಯ ಮತ್ತು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಭಾರತಿ ಟೀಚರ್ 7ನೇ ತರಗತಿ ಚಿತ್ರವನ್ನು ನಿರ್ದೇಶಕ ಎಂ.ಎಲ್ ಪ್ರಸನ್ನ ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಸರ್ಕಾರಿ ಶಾಲೆ,ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎದುರಾಗುವ ಕಷ್ಠ ಕೋಟಲೆಗಳು ಮತ್ತು ಅಡ್ಡಿ ಆತಂಕ ಅಡೆತಡೆಗಳನ್ನು ದಾಟಿ ಹೇಗೆ ಮುಂದೆ ಸಾಗುತ್ತದೆ ಎನ್ನುವುದನ್ನು ಚಿತ್ರದ ಮೂಲಕ ಪರಿಣಾಮಕಾರಿಯಾಗಿ ತಂದಿದ್ಧಾರೆ ನಿರ್ದೇಶಕರು. ಇಂತಹದೊಂದು ಜಾಗೃತಿ ಮೂಡಿಸುವ ಮತ್ತು ಸಧಬಿರುಚಿ ಚಿತ್ರಗಳು ಅಗತ್ಯ ಮತ್ತು ಅನಿವಾರ್ಯವೂ ಕೂಡ.

ಹುಲಿಗೇರಿಪುರದದಲ್ಲಿರುವ ಜನರು ಬಹುತೇಕ ಅವಿದ್ಯಾವಂತರು, ತಾಯಿಯ ನೆರಳಲ್ಲಿ ಬೆಳದ ಭಾರತಿ (ಯಾನಿಕ) ಪ್ರತಿ ಹೆಜ್ಜೆಯಲ್ಲಿ ಬೆನ್ನೆಲುಬಾಗಿ ನಿಂತು ವಿದ್ಯಾವಂತೆ ಮಾಡುವಲ್ಲಿ ಶಿಕ್ಷಕ (ಸಿಹಿಕಹಿ ಚಂದ್ರು) ಪ್ರೋತ್ಸಾಹದ ಮಾತುಗಳಿಂದ ಆಕೆಯನ್ನು ಹುರುದುಂಬಿಸುತ್ತಾರೆ.

ಭಾರತಿ ಒಂದೆಡೆಯಾದರೆ ಮತ್ತೊಬ್ಬ ವಿದ್ಯಾವಂತ ಯುವಕ ರಾಜಶೇಖರ್ (ರೋಹಿತ್ ರಾಘವೇಂದ್ರ) ತನ್ನದಲ್ಲದ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಾನೆ, ಜೊತೆಗಾರರ ನೆರವಿನಿಂದ ಭ್ರಷ್ಟಾಚಾರದ ವಿರುದ್ದ ಸಮರ ಸಾರುತ್ತಾರೆ. ಈ ನಡುವೆ ಊರಿನ ಮಂದಿಯನ್ನು ಅಕ್ಷರಸ್ಥರನ್ನಾಗಿ ಮಾಡಬೇಕು ಎನ್ನುವುದು ಭಾರತಿಯ ಬಹುದೊಡ್ಡ ಕನಸು. ಆಕೆ ವ್ಯಾಸಂಗ ಮಾಡುತ್ತಿರುವುದು ಏಳನೇ ತರಗತಿಯಲ್ಲಾದರೂ ಆಕೆಯ ಕನಸು ಮಾತ್ರ ದೊಡ್ಡದು.

ಭಾರತಿ ಕಂಡ ಕನಸು ನಸಸು ಮಾಡಲು ಏನೆಲ್ಲಾ ಪ್ರಯತ್ನ ಪಡುತ್ತಾಳೆ. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಗಳಿಸುತ್ತಾಳಾ, ಇತ್ತ ಭ್ರಷ್ಟರ ವಿರುದ್ದ ಸಮರ ಸಾರಿದ ರಾಜಶೇಖರ್ ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರಾ ಎನ್ನುವುದು ಚಿತ್ರದ ಕುತೂಹಲ.

ನಿರ್ದೇಶಕ ಎಂ.ಎಲ್ ಪ್ರಸನ್ನ ಉತ್ತಮ ಕಥಾಹಂದರ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ, ಇಂತಹ ಚಿತ್ರಕ್ಕೆ ನಿರ್ಮಾಪಕ, ವಿತರಕ ವೆಂಕಟ್ ಗೌಡ ಬೆನ್ನೆಲಬಾಗಿ ನಿಂತಿರುವುದು ಶ್ಲಾಘನೀಯ.

ಚಿತ್ರದಲ್ಲಿ ಭಾರತಿ ಪಾತ್ರದ ಮೂಲಕ ನಟಿ ಯಾಶಿಕ ಗಮನ ಸೆಳೆದಿದ್ದಾರೆ.ಭವಿಷ್ಯದಲ್ಲಿ ಉತ್ತಮ ನಟಿಯಾಗುವ ಎಲ್ಲಾ ಲಕ್ಷಣಗಳಿವೆ . ಯುವ ಪ್ರತಿಭೆ ರೋಹಿತ್ ರಾಘವೇಂದ್ರ ಸಮಾಜಮುಖಿ ಕಾಳಜಿಯ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ನಟನೆಯಲ್ಲಿ ಇನ್ನಷ್ಟು ಪಳಗಿದರೆ ಕನ್ನಡದಕ್ಕೆ ಮತ್ತೊಬ್ಬ ಭರವಸೆಯ ನಟ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಿರಿಯ ಕಲಾವಿದರಾದ ಸಿಹಿ ಕಹಿ ಚಂದ್ರು ಚಿತ್ರಕ್ಕೆ ಫ್ಲಸ್ ಪಾಯಿಂಟು.,ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಉಳಿದಂತೆ ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕ ನಂಜಪ್ಪ, ರಂಗಸ್ವಾಮಿ, ಸೌಜನ್ಯ ಸುನಿಲ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿದಂತೆ ಎಲ್ಲರ ಪಾತ್ರಗಳೂ ಪೂರಕವಾಗಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin