Talent is not someone's property... Why is there a question of nepotism - Kiccha Sudeep

ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ… ನೆಪೋಟಿಸಂ ಪ್ರಶ್ನೆ ಯಾಕೆ- ಕಿಚ್ಚ ಸುದೀಪ್ - CineNewsKannada.com

ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ… ನೆಪೋಟಿಸಂ ಪ್ರಶ್ನೆ ಯಾಕೆ- ಕಿಚ್ಚ ಸುದೀಪ್

ಯುವ ನಟ ಸಂಚಿತ್‍ಗೆ ಪ್ರತಿಭೆಯಿತ್ತು ನಾಯಕನಾಗಿದ್ದಾನೆ, ಮಗಳು ಸಾನ್ವಿ ಉತ್ತಮವಾಗಿ ಹಾಡು ಹಾಡುತ್ತಾಳೆ ಹಾಗಾಗಿ ಗಾಯಕಿಯಾಗಿದ್ದಾಳೆ, ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ, ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ ಎಂದರು ಕಿಚ್ಚ ಸುದೀಪ್.

ಸಹೋದರಿಯ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ “ಮ್ಯಾಂಗೋ ಪಚ್ಚ” ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ “ನೆಪೋಟಿಸಂ” ಎನ್ನುವ ಪ್ರಶ್ನೆ ಎದುರಾಗುತ್ತಿದ್ದಂತೆ ಖಡಕ್ ಆಗಿ ಉತ್ತರಿಸಿದ್ದು ಹೀಗೆ..

ಸಂಚಿತ್ ಮತ್ತು ಸಾನ್ವಿ ಇಬ್ಬರನ್ನು ಬಿಟ್ಟರೆ ಕುಟುಂಬದಲ್ಲಿ ಸಾಕಷ್ಟು ಮಂದಿ ಮಕ್ಕಳಿದ್ದಾರೆ. ಅವರ್ಯಾರು ಚಿತ್ರರಂಗಕ್ಕೆ ಬಂದಿಲ್ಲ,, ಸುಮ್ಮನೆ ನೆಪೋಟಿಸಂ ವಿಷಯ ಪ್ರಸ್ತಾಪ ಮಾಡಬೇಡಿ , ಹಾಗೊಂದು ವೇಳೆ ವಿಷಯ ಪ್ರಸ್ತಾಪ ಮಾಡುವುದಿದ್ದರೆ ನಮ್ಮೊಬ್ಬರಿಗೆ ಯಾಕೆ ಪ್ರಶ್ನೆ ಕೇಳುತ್ತೀರಾ. ಯಾವಾಗಲಾದರೂ ದೊಡ್ಮನೆ ಕುಟುಂಬದ ಮಂದಿಗೆ ಪ್ರಶ್ನೆ ಕೇಳಿದ್ದೀರಾ, ನೆಪೋಟಿಸಂ ಹುಟ್ಟಿಕೊಂಡಿದ್ದೇ., ದೊಡ್ಮನೆಯಿಂದ , ಶಿವರಾಜ್ ಕುಮಾರ್ ಹಾಗು ಪುನೀತ್ ರಾಜ್ ಕುಮಾರ್ ಅವರ ಬದುಕಿದ್ದಾಗ ಅವರನ್ನು ಯಾವಗಲಾದರೂ ಕೇಳಿದ್ದೀರ ಎಂದು ಗರಂ ಆದರು.

ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕುಟುಂಬದ ಹಿನ್ನೆಲೆ ಇದೆ ಎನ್ನುವುದನ್ನು ಬಿಟ್ಟರೆ ಅವರು ಪ್ರತಿಬೆ ಮತ್ತು ಸಾಮಥ್ರ್ಯದಿಂದ ಗಮನ ಸೆಳೆದಿದ್ದಾರೆ,ಅದಕ್ಕಾಗಿ ನಾನು ಮತ್ತು ನನ್ನಂಥಹ ಅಸಂಖ್ಯಾತ ಮಂದಿ ಅಭಿಮಾನಿಗಳಾಗಿದ್ದೇವೆ, ನಾವು ಪ್ರತಿಭೆಯನ್ನು ಗೌರವಿಸುತ್ತೇವೆ, ಅದು ಯಾರ ಸ್ವತ್ತು ಅಲ್ಲ ಎಂದರು.

ಮೊದಲ ಬಾರಿಗೆ ನಾಯಕನಾಗಿ ಸಂಚಿತ್ ಚಿತ್ರರಂಗ ಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೊದಲ ಜನರ ಬಳಿ ಹೋಗಲಿ, ಜೊತೆಗೆ ಚಿತ್ರದಲ್ಲಿ ಆತನ ಅಭಿನಯ ನೋಡಿ ಮಾತನಾಡಲಿ ಎನ್ನುವ ಕಾರಣಕ್ಕೆ ಬಿಡುಗಡೆಗೆ ಮುನ್ನ ಯಾವುದೇ ಪತ್ರಿಕಾಗೋಷ್ಠಿ ಮಾಡಿರಲಿಲ್ಲ ಎಂದು ಹೇಳಿದರು

ಮ್ಯಾಂಗೋ ಪಚ್ಚ ” ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

“ಮ್ಯಾಂಗೋ ಪಚ್ಚ” ಚಿತ್ರ ಬಿಡುಗಡೆಯಾಗಿ ಎಲ್ಲಾ ಕೇಂದ್ರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರದ ಮೂಲಕ ನಟ ಕಿಚ್ಚ ಸುದೀಪ್ ಅವರ ಸಹೋದರಿಯ ಪುತ್ರ ಸಂಚಿತ್ ಸಂಜೀವ್ ನಾಯಕನಾಗಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ

ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರತಿಕ್ರಿಯೆ ಹಂಚಿಕೊಳ್ಳಲು ಪತ್ರಕಾಗೋಷ್ಢಿ ಕರೆದಿತ್ತು. ನಟ ಕಿಚ್ಚ ಸುದೀಪ್ ಆದಿಯಾಗಿ ಚಿತ್ರತಂದ ಹಾಜರಿತ್ತು.

ಈ ವೇಳೆ ಮಾತಿಗಿಳಿದ ನಟ ಸಂಚಿತ್ ಸಂಜೀವ್, ಮೊದಲ ಚಿತ್ರದಲ್ಲಿ ಆಯ್ಕೆ ಮಾಡಿಕೊಂಡ ಕಥೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ಚಿತ್ರದ ಕಥವಸ್ತು ಕಡೆಗೆ ಗಮನ ಹರಿಸಿಲ್ಲ, ಸಿಕ್ಕ ಪಾತ್ರಕ್ಕೆ ಜೀವ ತುಂಬುವುದಷ್ಟೇ ನನ್ನ ಉದ್ದೇಶವಾಗಿತ್ತು. ಆ ಕೆಲಸ ಮಾಡಿದ್ದೇನೆ. ಚಿತ್ರಕ್ಕೆ ಎಲ್ಲೆಡೆ ಸಿಗುತ್ತಿರುವ ಪ್ರೀತಿ, ಬೆಂಬಲಕ್ಕೆ ಸದಾ ಚಿರಋಣಿ ಎಂದರು.

ನಿರ್ಮಾಪಕಿ ಪ್ರಿಯಾ ಸುದೀಪ್ ಮಾತನಾಡಿ, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ನಟ ಸಂಜೀವ್ ಇಷ್ಟು ಚೆನ್ನಾಗಿ ನಟಿಸುತ್ತಾನೆ ಎಂದು ಗೊತ್ತಿರಲಿಲ್ಲ, ಚಿತ್ರ ನೋಡಿದ ಎಲ್ಲರಿಗೂ ಅಬಾರಿ ಎಂದರು

ನಿರ್ದೇಶಕ ವಿವೇಕ, ನಿರ್ಮಾಪಕ ಕಾರ್ತಿಕ್ ಗೌಡ, ನಾಯಕಿ ಕಾಜಲ್ ಕುಂದರ್, ಕಲಾವಿದರಾದ ಮಯೂರ್ ಪಟೇಲ್, ಉಗ್ರಂ ಮಂಜು ಸೇರಿದಂತೆ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin