Comedy artists' new "flash": "Great Artists" reality show

ಕಾಮಿಡಿ ಕಲಾವಿದರ ಹೊಸ “ಮಿಂಚು” : “ಮಹಾನ್ ಕಲಾವಿದರು” ರಿಯಾಲಿಟಿ ಶೋ - CineNewsKannada.com

ಕಾಮಿಡಿ ಕಲಾವಿದರ ಹೊಸ “ಮಿಂಚು” : “ಮಹಾನ್ ಕಲಾವಿದರು” ರಿಯಾಲಿಟಿ ಶೋ

ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಈ ಹಿಂದೆ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದರು. ಆ ಸಾಲಿನಲ್ಲಿ ಮಿಂಚು, ಪ್ರವೀಣ್ ಗಸ್ತಿ ಗೋಕಾಕ್ ಮತ್ತು ಚಿದಂಬರ ಪೂಜಾರಿ ಕಣ್ಣ ಮುಂದೆ ಕಾಣುತ್ತಾರೆ. ಇವರುಗಳ ಬತ್ತಳಿಕೆಯಿಂದ ‘ಮಹಾನ್ ಕಿಲಾಡಿ’ ಎಂಬ ರಿಯಾಲಿಟಿ ಷೋ ಶುರುವಾಗಿದೆ.

‘ಟ್ಯಾಲೆಂಟ್ ನಿಮ್ಮದು ವೇದಿಕೆ ನಮ್ಮದು’ ಎಂಬ ಅಡಿಬರಹ ಇರಲಿದೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್, ಟೈಟಲ್ ಸಾಂಗ್ ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ವಿಧಾನ ಪರಿಷತ್ ಸದಸ್ಯರಾದ ಟಿ.ಶರವಣ, ಉದ್ಯಮಿಗಳಾದ ಡಾ.ಎನ್.ನರಸಿಂಹಮೂರ್ತಿ, ಶ್ರೀಕಾಂತ್, ಡಾ.ಮೋಕ್ಷಗೊಂಡ ಗುರೂಜಿ ಮತ್ತು ಶ್ರೀ ಭಾರ್ಗವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಟಿಎ ಶರವಣ ಮಾತನಾಡಿ ಕಲಾವಿದರುಗಳಿಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ. ಇವರುಗಳ ಶ್ರಮ ನೋಡಿದಾಗ, ಇಂತಹವರು ಲೈಮ್‍ಲೈಟ್‍ಗೆ ಬರಬೇಕು.ಸರ್ಕಾರದಿಂದಲೂ ಅನುದಾನ ಬರಲು ಶಿಪಾರಸ್ಸು ಮಾಡುತ್ತೇನೆಂದು ಭರವಸೆ ನೀಡಿದರು.

‘ಮಹಾನ್ ಕಿಲಾಡಿ’ ಸಾರಥಿ ಮಿಂಚು ಹೇಳುವಂತೆ, ಒಂದಷ್ಟು ವಿಷಯಗಳಿಂದ ಅವಕಾಶಗಳು ಇಲ್ಲದೆ ಇರುವಾಗ, ಹೊಸತನದೊಂದಿಗ್ನೆ ಅವಕಾಶವನ್ನು ನಾನೇ ರೂಪಿಸಿಕೊಳ್ಳಬೇಕು. ಕಲಿತುದನ್ನು ಬೇರೆಯವರಿಗೆ ಹೇಳಿಕೊಡಬೇಕು ಎಂಬ ಕಲ್ಪನೆಯನ್ನು ಗೆಳಯ ಪ್ರವೀಣ್ ಗಸ್ತಿಗೆ ಹೇಳಿದಾಗ, ಆತ ಬೆನ್ನಲುಬಾಗಿ ನಿಂತುಕೊಂಡಿದ್ದೇ ಇಲ್ಲಿಯವರೆಗೂ ಬಂದಿದೆ. ಮಿತವ್ಯಯ ಬಜೆಟ್‍ನೊಂದಿಗೆ ಶುರುಮಾಡಿ, ಮುಂದೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಅಕ್ಷರ ಸ್ಟುಡಿಯೋದ ಗೌರಿಪ್ರಸಾದ್ ಚಿತ್ರೀಕರಿಸಲು ಅನುವು ಮಾಡಿಕೊಟ್ಟರು ಎಂದರು

ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಕೊಟ್ಟಾಗ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದರು. ಇದರಲ್ಲಿ ಮೂರು ಸಲ ಅಡಿಷನ್ ಮಾಡಿ, ಅಂತಿಮವಾಗಿ 22 ಪ್ರತಿಭೆಗಳು ಆಯ್ಕೆಯಾಗಿದ್ದರೆ. ಇವರುಗಳಿಗೆ ಮೇಧಾವಿಗಳಿಂದ ಏಳು ವಾರಗಳ ತರಭೇತಿ ನೀಡಲಾಗಿ, ಕ್ಯಾಮಾರ ಮುಂದೆ ನಿಲ್ಲಿಸಲಾಗಿದೆ. ಕಿರಣ್‍ಕುಮಾರ್ ನಿರ್ದೇಶನ ಜವಬ್ದಾರಿ ಹೊತ್ತುಕೊಂಡಿದ್ದು, ದಿಲೀಪ್ ಕುಮಾರ್.ಹೆಚ್.ಆರ್ ಕ್ರಿಯಟೀವ್ ಮುಖ್ಯಸ್ಥ, ಪುಟ್ಟರಾಜು ಡಿಜಿಟಲ್ ಪ್ರಮೋಟರ್, ಚಿದಂಬರ ಪೂಜಾರಿ ಮೆಂಟರ್, ಸ್ಕ್ರಿಪ್ಟ್ ರೈಟರ್ ಶ್ರೀ ಪಲ್ಲವಿ ಆಗಿರುತ್ತಾರೆ. ನನ್ನೊಂದಿಗೆ ಮಹೇಶ್ ಕೃಷ್ಣ, ಪ್ರವೀಣ್ ಗಸ್ತಿ ತೀರ್ಪುಗಾರರಾಗಿರುತ್ತಾರೆ. ‘ಮಿಂಚು ಎಂಟರ್‍ಟೈನ್ ಮೆಂಟ್ಸ್ ಯುಟ್ಯೂಬ್’ ಚಾನಲ್‍ದಲ್ಲಿ ಪ್ರಸಾರವಾಗಲಿದೆ. ಎಲ್ಲರೂ ನೋಡಿ ಚಂದದಾರರಾಗಿ, ಲೈಕ್ ಬಟನ್ ಒತ್ತುವುದರ ಮೂಲಕ ಬೆಂಬಲವಾಗಿ ನಿಂತಿದ್ಧಾರೆ ಎಂದು ಹೇಳಿದರು

ಛಾಯಾಗ್ರಹಣ ಅಕ್ಷಯ್ ಮೊಕಾಶಿ, ಸಂಕಲನ ಸುನಿಲ್-ಸುರೇಶ್ ಅವರದಾಗಿದೆ. ಇದೇ ಜೂನ್ 13 ರಿಂದ ಶೀರ್ಷಿಕೆ ಹಾಡು ಹೊರ ಬರಲಿದ್ದು, ಮುಂದಿನ ದಿನಗಳಲ್ಲಿ ಶುಕ್ರವಾರ ಮತ್ತು ಶನಿವಾರದಂದು ಒಂದೊಂದು ಗಂಟೆಗಳ ಕಾಲ ವೀಕ್ಷಕರನ್ನು ಮನರಂಜನೆ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಈಗಾಗಲೇ ಓಟಿಟಿ ಹಾಗೂ ವಾಹಿನಿದವರು ಆಸಕ್ತಿ ತೋರಿಸಿದ್ದು, ಮಿಕ್ಕಂತೆ ವಿಜೇತರಿಗೆ ನಗದು ಪುರಸ್ಕಾರ ಇತೆರೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡ ಹೇಳಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin