The biography of Sri Sangameshwara Maharaj is ready to hit the screen

ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ ತೆರೆಗೆ ಬರಲು ರೆಡಿ - CineNewsKannada.com

ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ ತೆರೆಗೆ ಬರಲು ರೆಡಿ

“ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರದ ಫಸ್ಟ್ ಲುಕ್ ಪೆÇೀಸ್ಟರ್ ಬಿಡುಗಡೆ ಮಾಡಿದ ಮಂತ್ರಾಯಲದ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರು ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ಧಾರೆ

ಜಮಖಂಡಿ ತಾಲ್ಲೂಕಿನ ಕೃಷ್ಣಾ ನದೀತೀರದ ಹಿಪ್ಪರಗಿಯ ಇಂಚಗೇರಿ ಮಠದ ಕಲ್ಪತರುವಾದ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

ಮುಹೂರ್ತ ಸಮಾರಂಭಕ್ಕೂ ಮುನ್ನ ಚಿತ್ರದ ನಿರ್ಮಾಪಕರಾದ ಮಾಧವಾನಂದ ಯೋಗಪ್ಪ ಶೇಗುಣಸಿ ಹಾಗೂ ನಿರ್ದೇಶಕ ರಾಜಾ ರವಿಶಂಕರ್ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀರಾಘವೇಂದ್ರ ಗುರು ಸಾರ್ವಭೌಮರ ದರ್ಶನ ಪಡೆದುಕೊಂಡರು. ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

ರಾಮಕೃಷ್ಣ, ರವಿ ನಾರಾಯಣ್(ಹೊಸ ಪರಿಚಯ), ಸುಂದರರಾಜ್, ವಿಜಯಕಾಶಿ, ವಿನಯಪ್ರಸಾದ್, ಭವ್ಯಶ್ರೀ ರೈ, ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin