ಕೌಂಟಬಿಕ ಕಥನ ಕಥೆ “ನಾನು ಕರುಣಾಕರ” ತೆರೆಗೆ ಬರಲು ಸಜ್ಜು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಆರಾಧ್ಯ ದೈವ ಎಂದೇ ಕಾಣುವ ನಿರ್ದೇಶಕ ಕಮ್ ನಟ ಆರ್ಯನ್ ತೇಜಸ್, “ನಾನು ಕರುಣಾಕರ” ಚಿತ್ರದ ಮೂಲಕ ಅಪ್ಪ-ಮಗನ ಕೌಟಂಬಿಕ ಕಥನ ಒಳಗೊಂಡಿರುವ ಚಿತ್ರವನ್ನು ಜನರ ಮುಂದಿಡಲು ಮುಂದಾಗಿದ್ದಾರೆ.

ರಂಗಭೂಮಿ ಹಿನ್ನೆಲೆ ಇರುವ ಹಾಸನ ಪ್ರತಿಭಾನ್ವಿತ ಹುಡುಗ ಬಂದು ನಟನೆ, ನಿರ್ದೇಶನ ಕಲಿತರು. ಸಿಲ್ಲಿಲಲ್ಲಿ ಸೇರಿದಂತೆ ಹಲವು ಧಾರವಾಹಿಗಳಲ್ಲೂ ನಟಿಸಿದ್ದಾರೆ. ದಿನೇ ದಿನೇ ಕಳೆದ ಮೇಲೆ ನಿರ್ದೇಶನ ಮತ್ತು ಛಾಯಾಗ್ರಾಹಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ “ನಾನು ಕರುಣಾಕರ” ಚಿತ್ರದ ಮೂಲಕ ಜನರ ಮನಗೆಲ್ಲಲು ಮುಂದಾಗಿದ್ದಾರೆ

ಈ ಮೊದಲು “ಪಾರ್ಕ್ ರೋಡ್ 100 ರೂಪಾಯಿ” ಸಿನಿಮಾವನ್ನ ಮಾಡಿದ್ದ ಆರ್ಯನ್ ನೂರಾರು ಶಾಲೆಗಳಲ್ಲಿ ಪ್ರಸಾರ ಮಾಡಲಾಗಿತ್ತು. ಎಲ್ಲರೂ ನೀಡಿದ ಸ್ಪೂರ್ತಿಯಿಂದಾನೇ ಮತ್ತೊಂದು ಸಿನಿಮಾ ಆಗಿದೆ. ಕೊರೊನಾಗೂ ಮೊದಲು ಕಥೆಯನ್ನ ಮಾಡಿಕೊಂಡಿದ್ದ ಸುನೀಲ್ ನಿರ್ಮಾಪಕರಾದ ಸಂತೋಷ ಅವರಿಗೆ ಕಥೆ ಹೇಳಿದಾಗ ಕಥೆನ ಸಿನಿಮಾ ಮಾಡಿದರೆ ಅದ್ಭುತವಾಗಿರುತ್ತೆದೆ ಎಂಬುದು ಅರ್ಥವಾದಾಗ ಸಿನಿಮಾಗೆ ತಕ್ಕಂತೆ ಕಥೆ ಎಣೆದು ಸಿನಿಮಾ ಮಾಡಲಾಯ್ತು. ಕನ್ನಡಕ್ಕೆ ಒಂದು ಒಳ್ಳೆ ಸಿನಿಮಾ ಕೊಡಬೇಕು ಎಂಬ ನಿಟ್ಟಿನಲ್ಲಿ ನಮನ್ ನಾರಾಯಣ್ ಸಂತೋಷ್ ಮತ್ತು ವೈಭವ್ ಸುರೇಶ್ ,ಶ್ರೀಕಾಂತ ಬಿ ಬಿ, ರವರು ಚಿತ್ರದ ನಿರ್ಮಾಣ ಮಾಡಿದ್ದಾರೆ.
ನಾನು ಕರುಣಾಕರ ಸಿನಿಮಾ ಎಲ್ಲರ ಲೈಫ್ ಗೂ ತುಂಬಾನೇ ಕನೆಕ್ಟ್ ಆಗುತ್ತೆ ಎಂಬ ಭರವಸೆಯನ್ನು ಚಿತ್ರತಂಡ ನೀಡಿದೆ. ಇದೊಂದು ಅಪ್ಪ ಮಗನ ಹಾಗೂ ಗಂಡ ಹೆಂಡತಿಯ ಬಾಂಧವ್ಯವನ್ನು ಹೊತ್ತ ಕಥೆಯಾಗಿದೆ. ಇಡೀ ಫ್ಯಾಮಿಲಿ ಕೂತು ನೋಡಿದಾಗ ಆ ತುಂಟ ಒಬ್ಬೊಬ್ಬರ ಮನೆಯಲ್ಲೂ ಇರೋದು ನಿಮಗೆ ಅರಿವಾಗುತ್ತದೆ.ಫೆಬ್ರವರಿ 6ಕ್ಕೆ ಸಿನಿಮಾ ಚಿತ್ರ ಬಿಡುಗಡೆ ಆಗಲು ಸಜ್ಜಾಗಿದೆ

ನಾನು ಕರುಣಾಕರ ಸಿನಿಮಾಗೆ ನಿರ್ದೇಶನ ಮತ್ತು ಹೀರೋ ಆಗಿ ಆರ್ಯನ್ ತೇಜಸ್ ಕಾಣಿಸಿಕೊಂಡಿದ್ದಾರೆ. ಜೋಡಿಯಾಗಿ ಭಾರ್ಗವಿ ಎಲ್ ಎಲ್ ಬಿ ಖ್ಯಾತಿಯ ರಾಧಾ ಭಗವತಿ ಮಾ” ಭವೀಶ್ ಇದ್ದಾರೆ. ಉಳಿದಂತೆ ಕರಿಸುಬ್ಬು,
ಎಂಕೆ ಮಠ,ಬಿ ಎಂ ವೆಂಕಟೇಶ ಅಪೂರ್ವ, ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದಾರೆ.

