ಸಾಮಾಜಿಕ ಮಾಧ್ಯಮದಿಂದಾಗುವ ಅನಾಹುತಗಳ ಅನಾವರಣ ಚಿತ್ರ ”ಇವನೇ ಶ್ರೀನಿವಾಸ”

ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ಇವನೇ ಶ್ರೀನಿವಾಸ” ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಬಲಗಾಲಿರಿಸಿದ್ದಾರೆ. ಪ್ರತಿಭೆ ಮತ್ತು ಆಸಕ್ತಿ ಇದ್ದರೆ ಯಾರೂ ಬೇಕಾದರೂ ನಟನಾಗಬಹುದು ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದ್ದು ಹಿರಿಯ ನಟ ಶಿವರಾಜ್‍ಕುಮಾರ್ “ಇವನೇ ಶ್ರೀನಿವಾಸ”ನಿಗೆ ಶುಭ ಹಾರೈಸಿದ್ದು ಆನೆ ಬಲಬಂದಂತಾಗಿದೆ

ಸೋಷಿಯಲ್ ಮೀಡಿಯಾ, ಕ್ರೈಂ ಸುತ್ತ ಸಾಗುವ ಕಥೆ ಚಿತ್ರ ಹೊಂದಿರುವ “ಇವನೇ ಶ್ರೀನಿವಾಸ” ಚಿತ್ರದ ಫಸ್ಟ್ ಲುಕ್ ಅನ್ನು ಹಿರಿಯ ನಟ ಶಿವಣ್ಣ ಬಿಡುಗಡೆ ಮಾಡಿ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ಚಿತ್ರಕ್ಕೆ ಎಸ್.ಕುಮಾರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ಕುಮಾರ್ ಮಾತನಾಡಿ ಇತ್ತೀಚೆಗೆ ಸಾಮಾಜಿಕ ಮಾದ್ಯಮದಿಂದ ಆಗುತ್ತಿರುವ ಅನಾಹುತಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಪ್ರತಿದಿನ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಕ್ರೈಮ್, ವಂಚನೆಯ ಬಗ್ಗೆ ಇವನೇ ಶ್ರೀನಿವಾಸ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಚಿತ್ರವನ್ನು ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಪ್ರತಾಪ್ ನಾಯಕನಾಗಿ ನಟಿಸುವ ಜತೆಗೆ ನಿರ್ಮಾಣ ಸಹ ಮಾಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆರಾಧ್ಯ ನಟಿಸಿದ್ದಾರೆ. ರೋಹಿತ್ ಕುಮಾರ್ ಕಥೆ ಬರೆದಿದ್ದು. ಮೋಹನ್ ಜುನೇಜಾ ನಟಿಸಿದ ಕೊನೆಯ ಚಿತ್ರ. ಉಳಿದಂತೆ ಚಿಲ್ಲರ್ ಮಂಜು, ಸುಶ್ಮಿತಾ ಉಳಿದ ಪಾತ್ರಗಳಲ್ಲಿದ್ದಾರೆ. ಎಂದರು

ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಬಾರದು, ಇದರಿಂದ ಮಾಹಿತಿ ತಿಳಿದುಕೊಳ್ಳುವ ವಂಚಕರು ಹೇಗೆ ಕಿರುಕುಳ,ತೊಂದರೆ ನೀಡುತ್ತಾರೆ, ವೈಯಕ್ತಿಕ ವಿಚಾರ ನಮ್ಮಲ್ಲೇ ಇರಬೇಕು, ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.ಚಿತ್ರದಲ್ಲಿ 3 ಸಾಹಸ ದೃಶ್ಯಗಳು ಹಾಗೂ 3 ಹಾಡುಗಳಿದ್ದು ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಹೇಳಿದರು

ನಾಯಕ ಪ್ರತಾಪ್ ಮಾತನಾಡಿ ನಾನೊಬ್ಬ ಪೌರ ಕಾರ್ಮಿಕ. ಹಿಂದೆ ಡ್ರಾಮಾದಲ್ಲಿ ಆಕ್ಟ್ ಮಾಡ್ತಿದ್ದೆ. ಚಿತ್ರದ ನಾಯಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೇನೆ. ಶ್ರೀನಿವಾಸ ಯಾರು, ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಮೆಸೇಜ್ ನೀಡಬೇಕೆನ್ನುವುದು ನಮ್ಮ ಉದ್ದೇಶ. ಸಿನಿಮಾಗೆ ಏನು ಬೇಕೋ ಅದನ್ನು ಕೊಟ್ಟಿದ್ದೇವೆ ಎಂದು ಹೇಳಿದರು.

ಮತ್ತೊಬ್ಬ ನಿರ್ಮಾಪಕ ನವೀನ್ ಕುಮಾರ್ ಹಿರಿಯೂರಿನವರು, ರಿಯಲ್ ಎಸ್ಟೇಟ್ ಉದ್ಯಮಿ, ಚಿತ್ರದ ಫಸ್ಟ್ ಲುಕ್ಕನ್ನು ಶಿವಣ್ಣ ರಿಲೀಸ್ ಮಾಡಿಕೊಟ್ಟರು. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು ಒಂದೊಳ್ಳೆ ಸಂದೇಶವಿದೆ ಎಂದರು.

ಪ್ರತಾಪ್ ಎನ್. ಹಾಗೂ ನವೀನ್ ಕುಮಾರ್ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದರಾಜ್ ಸಂಕಲನ, ಹರ್ಷ ಕೋಗೂಡ್, ಶ್ರೀಹರಿ, ಸುಭಾಶ್ ಅವರ ಸಂಗೀತ ಸಂಯೋಜನೆ, ರಮೇಶ್ ರಂಜಿತ್ ಸಾಹಸ, ಮುಂಜಾನೆ ಮಂಜು ಛಾಯಾಗ್ರಹಣ ಚಿತ್ರಕ್ಕಿದೆ.

Related Posts

ಬಂಬೂ ಸವಾರಿ ಚಿತ್ರದ “ಗೋವಿಂದಾ ಗೋವಿಂದಾ” ಹಾಡು ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಕ್ಸಕ್ ಫುಲ್ ಸಿನಿಮಾ ಜಾತ್ರೆ ಆರಂಭವಾಗಿರುವ ಸಮಯದಲ್ಲಿ ಬಂಬೂ ಸವಾರಿ ಹೆಸರಲ್ಲಿ ಸಿನಿಮಾ ಸದ್ದಿಲ್ಲದೇ ಬಿಡುಗಡೆಗೆ ಸಜ್ಜಾಗಿದೆ.ಮೊದಲ ಹಂತ ಚಿತ್ರತಂಡ ಹಾಡು ಬಿಡುಗಡೆ ಮಾಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ ಗೋವಿಂದಾ.. ಎಂಟ್ರಾನ್ ಸಾಮಿ…

ಹೆಸರು ಬದಲಾಯಿಸಿಕೊಂಡು ಅದೃಷ್ಠ ಕಂಡುಕೊಳ್ಳಲು ಮುಂದಾದ “ರಿಲ್ಯಾಕ್ಸ್”

ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ರೋಲೆಕ್ಸ್” ಚಿತ್ರದ ಶೀರ್ಷಿಕೆ ಈಗ “ರಿಲ್ಯಾಕ್ಸ್” ಎಂದು ಬದಲಾಗಿದೆ. ಈ ಮೂಲಕ ಅದೃಷ್ಠ ಪರೀಕ್ಷೆಗೆ ಚಿತ್ರತಂಡ ಮುಂದಾಗಿದೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದು ನಿರ್ಮಾಪಕ ಅಂಬಟಿ ಮಧು ಮೋಹನ್ ಹಾಡು…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581