Teaser of the film “Chitralahari”, which revolves around two stories, released

ಎರಡು ಕಥೆಗಳ ಸುತ್ತ ಸಾಗುವ ಚಿತ್ರ “ಚಿತ್ರಲಹರಿ” ಟೀಸರ್ ಬಿಡುಗಡೆ - CineNewsKannada.com

ಎರಡು ಕಥೆಗಳ ಸುತ್ತ ಸಾಗುವ ಚಿತ್ರ “ಚಿತ್ರಲಹರಿ” ಟೀಸರ್ ಬಿಡುಗಡೆ

” ಚಿತ್ರಲಹರಿ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆಯಾಗಿದೆ.ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ನಿರ್ದೇಶಕ ಪುರುಷೋತ್ತಮ್ ಬಿಡುಗಡೆ ಮಾಡಿತಂಡಕ್ಕೆ ಶುಭ ಕೋರಿದರು. ನವನೀತ ಲಕ್ಷ್ಮೀ ನಿರ್ಮಿಸಿ ಹಾಗೂ ಕೆ.ಆರ್ ಸುರೇಶ್ ನಿರ್ದೇಶನದ ಚಿತ್ರದ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿದೆ

ನಿರ್ದೇಶಕ ಕೆ.ಆರ್ ಸುರೇಶ್ ಮಾತನಾಡಿ “ಚಿತ್ರಲಹರಿ” ಎರಡು ಕಥೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಕ್ಲೈಮ್ಯಾಕ್ಸ್ ಒಂದೇ ಆಗಿರುತ್ತದೆ. ಕರೋನ ಸಮಯದಲ್ಲೇ ಸಿದ್ದವಾದ ಕಥೆಯಿದು ಕಳೆದವರ್ಷ ಚಿತ್ರೀಕರಣ ಆರಂಭವಾಯಿತು. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸತೀಶ್ ಬಾಬು ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಅದರೆ ದುರದೃಷ್ಟವಶಾತ್ ಚಿತ್ರ ಬಿಡುಗಡೆ ಹೊತ್ತಿಗೆ ನಮ್ಮೊಂದಿಗೆ ಅವರಿಲ್ಲ. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಪ್ರೀತಿ, ಆಕ್ಷನ್ , ಸೆಂಟಿಮೆಂಟ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಈ ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದರು

ನಿರ್ಮಾಪಕಿ ನವನೀತ ಲಕ್ಷ್ಮೀ ಮಾತನಾಡಿ ಕೇಸರಿ ನಂದನ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಮೊದಲ ಚಿತ್ರ “ವಿಕ್ಕಿ”ಗೆ ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ. ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದು ಹೇಳಿದರು

ನಾಯಕರಾದ ವರುಣ್ ದೇವಯ್ಯ ಹಾಗೂ ಶ್ರೀಕಾಂತ್ ಚಿತ್ರತಂಡದ ಸದಸ್ಯರಿಗೆ ಧನ್ಯವಾದ ಹೇಳಿದರು.ಛಾಯಾಗ್ರಾಹಕ ಸೆಂಥಿಲ್ ಕುಮಾರ್, ಸಾಹಸ ನಿರ್ದೇಶಕ ಜಾಗ್ವರ್ ಸಣ್ಣಪ್ಪ, ನೃತ್ಯ ನಿರ್ದೇಶಕ ನಲ್ಮೆ ಶ್ರೀನಿವಾಸ್, ಕಲಾವಿದ ಸತೀಶ್ ಹಾಗೂ ಸಹ ನಿರ್ದೇಶಕರಾದ ದೀಪಕ್ ಎಸ್ ಆವಂದಕರ್ ಮತ್ತು ರಾಜೇಶ್ ಬೀರಬ್ಬಿ ಚಿತ್ರದ ಕುರಿತು ಮಾತನಾಡಿದರು.

ವರುಣ್ ದೇವಯ್ಯ ಹಾಗೂ ಶ್ರೀಕಾಂತ್ ನಾಯಕರಾಗಿ ನಟಿಸಿರುವ ಚಿತ್ರದ ನಾಯಕಿಯರಾಗಿ ಗಾನ್ವಿ ಹಾಗೂ ಹರ್ಷಿತ ಅಭಿನಯಿಸಿದ್ದಾರೆ.ಸೂರ್ಯತೇಜ, ಶ್ರೀನಾಥ್, ಪ್ರದೀಪ್, ಚಂದ್ರು, ರಂಗ, ಸತೀಶ್ ಗೌಡ, ತೇಜಸ್ವಿನಿ, ಪದ್ಮ, ಯುವಶ್ರೀ, ಗಾಯತ್ರಿ, ರಾಜಶೇಖರ ಮುಂತಾದವರು ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin