Psychological thriller "February 30" teaser released

ಕ್ರೈಮ್ ಥ್ರಿಲ್ಲರ್,ಸ್ಪಸ್ಪೆನ್ಸ್ ಸಿನಿಮಾ “ರುಧ” - CineNewsKannada.com

ಕ್ರೈಮ್ ಥ್ರಿಲ್ಲರ್,ಸ್ಪಸ್ಪೆನ್ಸ್ ಸಿನಿಮಾ “ರುಧ”

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಂಟೆಂಟುಗಳುಳ್ಳ ಸಿನಿಮಾಗಳು ಸೆಟ್ಟೇರುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ “ರುಧ”, ಆಕ್ಷನ್,ಕ್ರೈಮ್, ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥೆಯನ್ನು ಚಿತ್ರ ಒಳಗೊಂಡಿದೆ

ನಿರ್ದೇಶಕ ಶರತ್ ಚೊಚ್ಚಲ ಬಾರಿಗೆ ಆಕ್ಷನ್‍ಕಟ್ ಹೇಳುತ್ತಿರುವ ಚಿತ್ರಕ್ಕೆ ನಟಿ ಅನುಪ್ರಭಾಕರ್ ಮತ್ತು ನಟ ರಘು ಮುಖರ್ಜಿ ದಂಪತಿ ಆಗಮಿಸಿ ಹೊಸ ತಂಡದ ಪ್ರಯತ್ನಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು

ಚಿತ್ರದಲ್ಲಿ ಅಥರ್ವ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಮಾನವಸಗೌಡ ಮತ್ತು ವರಲಕ್ಷ್ಮಿ ನಾಯಕ-ನಾಯಕಿಯರು, ಚಿತ್ರದ ಮಹೂರ್ತದ ನಂತರ ತಂಡ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ಶರತ್ ಮಾತನಾಡಿ ಕೇರಳದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಗುತ್ತಿದೆ. ರುಧ ಎಂದರೆ ಸಂಸ್ಕøತದಲ್ಲಿ ನಟೋರಿಸ್, ಅಥವಾ ಕ್ರೂರಿ ಎಂದರ್ಥ, ಬ್ಲಡ್ ಶೆಡ್ ನಲ್ಲಿ ಸಿನಿಮೀಯವಾಗಿ ಚಿತ್ರೀಕರಣ ಮಾಡಲಾಗಿದೆ. ಹೆಣ್ಣು ಮಗುವಿನ ಮೇಲೆ ನಡದ ಘಟನೆ ಆಧರಿಸಿ ಮಾಡುತ್ತಿರುವ ಚಿತ್ರ ಇದು ಎಂದರು

ಎಮೋಷನ್ ಬ್ಯಾಕ್ ಡ್ರಾಪ್ ಹಿನ್ನೆಲೆಯಲ್ಲಿ ಚಿತ್ರ ಮಾಡಲಾಗಿದೆ. ಕೊಡಗಿನಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗುತ್ತಿದೆ.ರಂಗಭೂಮಿ ಕಲಾವಿದರು ಚಿತ್ರದಲ್ಲಿ ಶೇಕಡಾ 50 ರಷ್ಟು ಮಂದಿ ಇದ್ದಾರೆ. ಚಿತ್ರದಲ್ಲಿ ರಕ್ತದೋಕುಳಿ ಹೆಚ್ಚಾಗಿ ಇರುವುದರಿಂದ ಸೆನ್ಸಾರ್ ನಿಂದ ಎ ಪ್ರಮಾಣ ಪತ್ರ ಬರುತ್ತೆ ಎನ್ನುವುದು ಗೊತ್ತಿದೆ. ಕಟ್ ಮಾಡಿದ್ದರೆ ನಾವು ಹೇಳುವ ವಿಷಯ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನಾಯಕ ಅಥರ್ವ ಮಾತನಾಡಿ ಇದು ಮೂರನೇ ಸಿನಿಮಾ, ವಿಭಿನ್ನವಾದ ಕಥೆ ಇದೆ. ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ವಿಶ್ವಾಸವಿದೆ. ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎಂದರು

ನಾಯಕಿ ಮಾನಸ ಗೌಡ ಮಾತನಾಡಿ ವಿಭಿನ್ನ ಪಾತ್ರ, ಸಸ್ಪೆನ್ಸ್, ಥ್ರಿಲ್ಲರ್ ಆಗಿರುವುದರಿಂದ ಪಾತ್ರದ ಸುಳಿವು ಕೊಟ್ಟರೆ ಕಥೆ ಗೊತ್ತಾಗಿ ಬಿಡುತ್ತದೆ, ಕಥೆ ಕುತೂಹಲಕಾರಿಯಾಗಿ ಇರಲಿ ಎಂದು ಹೇಳಿದರು

ಮತ್ತೊಬ್ಬ ನಟಿ ವರಲಕ್ಷ್ಮಿ ಮಾತನಾಡಿ ಚಿತ್ರದಲ್ಲಿ ಪೊಲೀಸ್ ಪೇದೆ ಪಾತ್ರ ಮಾಡುತ್ತಿದ್ದು ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಛಾಯಾಗ್ರಾಹಕ ರಾಜೀವ್ ಸೇರಿದಂತೆ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin