The first song of the film "Garividi Lakshmi" is released

“ಗರಿವಿಡಿ ಲಕ್ಷ್ಮೀ ” ಚಿತ್ರದ ಮೊದಲ ಹಾಡು ಬಿಡುಗಡೆ - CineNewsKannada.com

“ಗರಿವಿಡಿ ಲಕ್ಷ್ಮೀ ” ಚಿತ್ರದ ಮೊದಲ ಹಾಡು ಬಿಡುಗಡೆ

ತೆಲುಗಿನ ಖ್ಯಾತ ನಟಿ ಆನಂದಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಗರಿವಿಡಿ ಲಕ್ಷ್ಮೀ” ಸಿನಿಮಾ ಇದೀಗ ಹೊಸ ಅಪ್‌ಡೇಟ್‌ ಜತೆಗೆ ಆಗಮಿಸಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ “ಗರಿವಿಡಿ ಲಕ್ಷ್ಮೀ” ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದೀಗ ಇದೇ ಚಿತ್ರದ ಉತ್ತರ ಆಂಧ್ರ ಭಾಷಾ ಸೊಗಡಿನ “ನಳ ಜಿಲಕರ ಮೊಗ್ಗ” ಹಾಡು ಬಿಡುಗಡೆ ಆಗಿದೆ. ಗೌರಿ ನಾಯ್ಡು ಜಮ್ಮು ಎಂಬ ನಿರ್ದೇಶಕರು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಟಿಜಿ ವಿಶ್ವ ಪ್ರಸಾದ್‌ ಮತ್ತು ಟಿಜಿ ಕೃತಿ ಪ್ರಸಾದ್‌ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಾಡನ್ನು ಕನ್ನಡದ ಜನಪ್ರಿಯ ಗಾಯಕಿ ಅನನ್ಯ ಭಟ್ ಹಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರದ ಚಿತ್ರೀಕರಣ ಆಂಧ್ರಪ್ರದೇಶದ ಅಡೋನಿಯಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದೀಗ 1990 ಕಾಲಘಟ್ಟ ಜಾನಪದ ಶೈಲಿಯ ಹಾಡಿನ ಮೂಲಕ ಕೇಳುಗರನ್ನು ಆಕರ್ಷಿಸಿರುವ ಗರಿವಿಡಿ ಲಕ್ಷ್ಮೀ ಸಿನಿಮಾದಲ್ಲಿ, ಉತ್ತರ ಆಂಧ್ರ ಭಾಗದ ಸಂಸ್ಖೃತಿ, ಆಚಾರ ವಿಚಾರದ ಜತೆಗೆ ಬುರ್ರ ಕಥಾ ಕಲಾವಿದರನ್ನೂ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಚರಣ್ ಅರ್ಜುನ್ ಸಂಗೀತದೊಂದಿಗೆ, ಉತ್ತರ ಆಂಧ್ರದ ಸಾರ, ಅಲ್ಲಿನ ದೃಶ್ಯ ಮತ್ತು ಧ್ವನಿಯ ಮೂಲಕ ಕೇಳುಗರ ಕಿವಿಗೆ ಇಂಪಾಗಿಸಿದ್ದಾರೆ.

ಟಿ.ಜಿ. ವಿಶ್ವ ಪ್ರಸಾದ್, ಟಿ.ಜಿ. ಕೃತಿ ಪ್ರಸಾದ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗರಿವಿಡಿ ಲಕ್ಷ್ಮೀ ಚಿತ್ರದಲ್ಲಿ ಹಿರಿಯ ನಟ ನರೇಶ್, ರಾಸಿ, ಆನಂದಿ, ರಾಗ್ ಮಯೂರ್, ಶರಣ್ಯ ಪ್ರದೀಪ್, ಅಂಕಿತ್ ಕೊಯ್ಯ, ಮೀಸಲ ಲಕ್ಷ್ಮಣ್, ಕಂಚರಪಾಲೆಂ ಕಿಶೋರ್, ಶರಣ್ಯ ಪ್ರದೀಪ್, ಕುಶಾಲಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಿವೇಕ್ ಕೂಚಿಬೋಟ್ಲ ಸಹ ನಿರ್ಮಾಪಕರಾದರೆ, ಜೆ. ಆದಿತ್ಯ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ ನೀಡುತ್ತಿದ್ದಾರೆ.


Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin