“ದಿ ರೈಸ್ ಆಫ್ ಅಶೋಕ”.. ರೈಸ್ ಆಫ್ ಸತೀಶ ಆಗಲಿ : ಸಾಂಡಲ್‍ವುಡ್ ನಟರ ಹಾರೈಕೆ
ನಟ,ನಿರ್ಮಾಪಕ ಸತೀಶ್ ನಿನಾಸಂ ನಟನೆಯ ಬಹುನಿರೀಕ್ಷಿತ ಚಿತ್ರ “ದಿ ರೈಸ್ ಆಫ್ ಅಶೋಕ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರ ಫೆಬ್ರವರಿ 27ರಂದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಚಿತ್ರದ ಟ್ರೈಲರ್ ಅನ್ನು ಹಿರಿಯ ನಟ ವಿ ರವಿಂಚದ್ರನ್, ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್, ನಟ ಸತೀಶ್ ನೀನಾಸಂ ಪುತ್ರಿ ಮನಸ್ವಿಕಾ ಜೊತೆ ಬಿಡುಗಡೆ ಮಾಡಿ ಶುಭ ಹಾರೈಸಿದರು, ಗೆಳೆಯನ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ನಟರಾದ ಯೋಗಿ, ದಿಗಂತ್, ವಸಿಷ್ಠ ಸಿಂಹ, ನಾಗಭೂಷಣ, ಶಿವರಾಜ್ ಕೆ,ಆರ್ ಪೇಟೆ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು
ಈ ವೇಳೆ ನಟ ಯೋಗಿ, ನಾಗಭೂಷಣ, ದಿಗಂತ್, ವಸಿಷ್ಠ, ಶಿವರಾಜ್ ಕೆ,ಆರ್ ಪೇಟೆ ಸೇರಿದಂತೆ ಹಲವು ಮಂದಿ ನಾಯಕರು ‘ದಿ ರೈಸ್ ಆಫ್ ಅಶೋಕ ಚಿತ್ರವನ್ನು ನಟ ಸತೀಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಒಳ್ಳೆಯದಾಗಲಿ, ರೈಸ್ ಅಫ್ ಸತೀಶ ಹಾಗು ರೈಸ್ ಆಫ್ ಸ್ಯಾಂಡಲ್ ವುಡ್ ಆಗಲಿ ಎಂದು ಹಾರೈಸಿದರು.

ಮಗಳಲ್ಲಿ ತಾಯಿ ಕಂಡ ಸತೀಶ್ : ರವಿಚಂದ್ರನ್
ನಟ ರವಿಂದ್ರನ್ ಮಾತನಾಡಿ ನಟ ಸತೀಶ್ ಪುತ್ರಿ ಯಲ್ಲಿ ತಾಯಿ ಕಂಡಿದ್ದಾರೆ. ನಾನು ಈ ಮಟ್ಟಕ್ಕೆ ಬರಲು ನನ್ನ ಅಪ್ಪ- ಅಮ್ಮನೇ ಕಾರಣ. ಸರೀಶ್ ಅವರ ಪ್ರತಿಯೊಂದು ಮಾತಿನಲ್ಲಿ ಸಿನಿಮಾ ಮೇಲೆ ಇರುವ ಪ್ರೀತಿ ಕಾಳಜಿ ತೋರಿಸತ್ತದೆ. ಜೊತೆಗೆ ಮಾತನಾಡುವಾಗ ಭಾವುಕರಾಗಿದ್ದರು, ಗಂಡು ಯಾವುದೇ ಕಾರಣಕ್ಕೂ ಅಳಬಾರದು, ನೋವನ್ನು ಒಳಗೆ ಇಟ್ಟುಕೊಳ್ಳಬೇಕು, ನಮ್ಮ ಕೈಯಲ್ಲಿ ಆಗುವುದು ಒಳ್ಳೆಯ ಸಿನಿಮಾ ಮಾಡುವುದು ಮತ್ತು ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುವುದಷ್ಟೇ ಎಂದರು.
ಇತ್ತೀಚೆಗೆ ಚಿತ್ರ ಆರಂಭವಾಗಿರುವುದೇ ಇಲ್ಲ ಮೊದಲ ಸೀನ್‍ನಲ್ಲಿ ಕಾಮೆಂಟ್, ಲೈಕ್ ಮಾಡ್ತಾರೆ, ಈಗಾದರೆ ಸಿನಿಮಾ ಹೇಗೆ ನೋಡಲು ಸಾಧ್ಯ ಅಥವಾ ಸಿನಿಮಾ ಒಳ್ಳೆಯದಾ ಕೆಟ್ಟದ್ದಾ ಎಂದು ಹೇಗೆ ನಿರ್ಧಾರಕ್ಕೆ ಬರಲು ಆಗುತ್ತದೆ, ವಿಮರ್ಶೆ ಮಾಡಲು ಸಿನಿಮಾಗೆ ಬರಬೇಡಿ, ಮುಕ್ತ ಮನಸ್ಸಿನಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ, ಲೈಕ್, ಕಾಮೆಂಟ್‍ನಿಂದ ಏನು ಅನುಕೂಲವಾಗುವುದಿಲ್ಲ ಎಂದು ಹೇಳಿದರು.

ಕನ್ನಡ ಸಿನಿಮಾ ಬೆಳೆಸಿ: ದುನಿಯಾ ವಿಜಯ್
ದುನಿಯಾ ವಿಜಯ್ ಮಾತನಾಡಿ ಕನ್ನಡ ಸಿನಿಮಾಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಆಗ ಮಾತ್ರ ಸಿನಿಮಾಗಳು ಮತ್ತು ಚಿತ್ರರಂಗ ಉಳಿಯಲು ಮತ್ತು ಬೆಳೆಯಲು ಕಾರಣವಾಗುತ್ತದೆ ಎಂದರು.
ಸತೀಶ್ ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ, ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ, ಸಿನಿಮಾ ರೈಸ್ ಆಫ್ ಸತೀಶ್ ಆಗಲಿ, ಇನ್ನಷ್ಟು ಈ ರೀತಿಯ ಸಿನಿಮಾ ಮಾಡಲಿ ಎಂದು ಶುಭ ಹಾರೈಸಿದರು.
ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಸಂಪತ್ ಮೈತ್ರೇಯಾ ಸೇರಿದಂತೆ ಹಲವು ಕಲಾವಿದರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು

