The shooting of the new film starring actor Shivaraj K.R. Pete has been completed

ನಟ ಶಿವರಾಜ್ ಕೆ.ಆರ್ ಪೇಟೆ ನಟನೆಯ ಹೊಸ ಚಿತ್ರದ ಚಿತ್ರೀಕರಣ ಪೂರ್ಣ - CineNewsKannada.com

ನಟ ಶಿವರಾಜ್ ಕೆ.ಆರ್ ಪೇಟೆ ನಟನೆಯ ಹೊಸ ಚಿತ್ರದ ಚಿತ್ರೀಕರಣ ಪೂರ್ಣ

ಹಾಸ್ಯದ ಮೂಲಕ ಸಿನಿ ಪ್ರೇಪಕ್ಷಕರಿಗೆ ನಗುವಿನ ರಸದೌತಣ ಉಣಬಡಿಸಿದ ಶಿವರಾಜ್ ಕೆ.ಆರ್ ಪೇಟೆ ನಟನೆಯ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರೀಕರಣದ ನಂತರದ ಕೆಲಸಗಳನ್ನು ತಂಡ ತೊಡಗಿಸಿಕೊಂಡಿದೆ

ಲಲಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಟ ಶಿವರಾಜ್ ಕೆಆರ್ ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪ್ರೊಡಕ್ಷನ್ ನಂಬರ್ 2 ಸಿನಿಮಾದ ಚಿತ್ರಿಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ.

ಹಳ್ಳಿಗಾಡಿನ ಸೊಗಡಿನ ಸಿನಿಮಾವನ್ನು ಬೆಂಗಳೂರು, ಹಾಸನ ಸುತ್ತಮುತ್ತಲ ಕಡೆ ಮೂರು ಶೆಡ್ಯೂಲ್ನಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರಕ್ಕೆ ಶರತ್ ಚಕ್ರವರ್ತಿ ಕತೆ ಚಿತ್ರಕತೆ ಬರೆದು ನಿರ್ದೇಶಿದ್ದಾರೆ.

ನಿರೀಕ್ಷ ರಾವ್ ನಾಯಕಿಯಾಗಿರುವ ಚಿತ್ರದಲ್ಲಿ ಜಹಂಗೀರ್, ಬಲ ರಾಜವಾಡಿ ಹಾಗೂ ಇತರೆ ಪ್ರತಿಭಾನ್ವಿತ ನಟರು ನಟಿಸಿದ್ದಾರೆ.

ತಾಂತ್ರಿಕವರ್ಗ ಮಾಹಿತಿಯನ್ನ ಮುಂದಿನ ಹಂತಗಳಲ್ಲಿ ಪರಿಚಯಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರ ಟೈಟಲ್ ಕೂಡ ಸದ್ಯದಲ್ಲೇ ಅನಾವರಣಗೊಳ್ಳಲಿದ್ದು ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin