ಮನಮುಟ್ಟುವ “ಮಹರ್ಷಿ ವಾಲ್ಮಿಕಿ” ಕಿರುಚಿತ್ರದ ಅನಾವರಣ
ಬೇಡನಾಗಿದ್ದ ರತ್ನಕಾರ,ಋಷಿಗಳ ಉಪದೇಶದಿಂದ ಮಹರ್ಷಿ ವಾಲ್ಮೀಕಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕ್ರೌಂಚ ಪಕ್ಷಿಯ ಸಾವನ್ನು ಕಣ್ಣಾರೆ ಕಂಡ ವಾಲ್ಮೀಕಿ ಮಹರ್ಷಿಗಳಿಗೆ ಘಟನೆ ರಾಮಾಯಣ ಬರೆಯಲು ಸ್ಪೂರ್ತಿಯಾಯಿತು. ವಾಲ್ಮೀಕಿ ರಾಮಾಯಣ ಎಂದೇ ಪ್ರಸಿದ್ದವಾಯಿತು. ವಾಲ್ಮೀಕಿ ಋಷಿಗಳ ಜೀವನ ಚರಿತ್ರೆ ಕುರಿತು ಕಿರುಚಿತ್ರದ ಮೂಲಕ ಹೊರತಂದಿದ್ದಾರೆ ನಿರ್ದೇಶಕ ಪ್ರವೀಣ್ ಶಿವಣ್ಣ .

21 ನಿಮಿಷಗಳಲ್ಲಿ ಅದ್ಭುತವಾಗಿ ಮೂಡಿಬಂದಿರುವ ಕಿರುಚಿತ್ರಕ್ಕೆ “ಮಹರ್ಷಿ ವಾಲ್ಮೀಕಿ” ಎಂದು ಹೆಸರಿಟ್ಟಿದ್ದಾರೆ. ರತ್ನ ದಾಸ್ ನಿರ್ಮಾಣದ ಕಿರುಚಿತ್ರದ ಅನಾವರಣ ಮಾಡಲಾಯಿತು
ಶ್ರೀರಿಷಿ ಅವಿರ್ಭವ ಗುರು ಪೂರ್ಣದೈತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್, ನಟ ಗಣೇಶ್ ರಾವ್ ಕೇಸರ್ಕರ್, ಪದ್ಮಶ್ರೀ ವೆಂಕಟೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರದರ್ಶನದ ನಂತರ ತಂಡದ ಸದಸ್ಯರು ಹಾಗೂ ಗಣ್ಯರು ಮಾತನಾಡಿದರು.
ನಿರ್ದೇಶಕ ಪ್ರವೀಣ್ ಶಿವಣ್ಣ ಮಾತನಾಡಿ ನಿರ್ದೇಶಕನಾಗಿ ಮೊದಲ ಕಿರುಚಿತ್ರ. ನಿರ್ಮಾಪಕರ, ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ “ಮಹರ್ಷಿ ವಾಲ್ಮೀಕಿ” ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ. ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಕಿರುಚಿತ್ರ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು
ವಾಲ್ಮೀಕಿ ಪಾತ್ರಧಾರಿ ಸುಜಿತ್ ಶೆಟ್ಟಿ ಮಾತನಾಡಿ ರಾಮ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಬಂದ ಹಾಗೆ ತಾವೂ ಕೂಡ ನಟನೆ ಮಾಡಲು ಹದಿನಾಲ್ಕು ವರ್ಷಗಳು ಬೇಕಾಯಿತು. ರಾಮಭಕ್ತ “ಮಹರ್ಷಿ ವಾಲ್ಮೀಕಿ” ಕಥೆಯ ಮೂಲಕವೇ ಆಗಿರುವುದು ಕಾಕತಾಳೀಯ. ವಾಲ್ಮೀಕಿ ಮಹರ್ಷಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಶಿವಮಣಿ ಅವರಂತಹ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ ಎಂದು ಹೇಳಿದರು

ಇಂತಹ ಕಿರುಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ನಟಿ ರೂಪ ಮುತ್ತುರಾಯಪ್ಪ ಸಂತಸಪಟ್ಟರು. ನಿರ್ಮಾಪಕಿ ರತ್ನ ದಾಸ್ ಧನ್ಯವಾದ ಹೇಳಿದರು. ಛಾಯಾಗ್ರಾಹಕ ತನ್ವಿಕ್ ಹಾಗೂ ಸಂಗೀತ ನಿರ್ದೇಶಕ ರಾಮಾನುಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

