ಮೂರು ದಿನಗಳ “ವೀರಲೋಕ ಪುಸ್ತಕ ಸಂತೆ” : 2 ಲಕ್ಷಕ್ಕೂ ಅಧೀಕ ಮಂಧಿ ಆಗಮನದ ನಿರೀಕ್ಷೆ: ವೀರಕಪುತ್ರ ಶ್ರೀನಿವಾಸ್
ಸಾಂಸ್ಕøತಿಕ ಮತ್ತು ಸಾಹಿತ್ಯ ಅಭಿರುಚಿಯುಳ್ಳ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಸಾಂಸ್ಕೃತಿಕ ಹೆಗ್ಗುರುತು ಮೂಡಿಸುವ ನಿಟ್ಟಿನಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ. ಓದುಗ-ಲೇಖಕ-ಪ್ರಕಾಶಕ ಮೂವರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ, ಮೂರನೇ ಆವೃತ್ತಿಯ ವೀರಲೋಕ ಪುಸ್ತಕ ಸಂತೆ ಆಯೋಜಿಸಲಾಗಿದೆ

ನವಂಬರ್ ನವಂಬರ್ 14ರಿಂದ 16ರವರೆಗೆ ಮೂರು ದಿನಗಳ ಕಾಲ ಪುಸ್ತಕ ಸಂತೆ ಆಯೋಜಿಸಲಾಗಿದೆ. ಕಳೆದ ಎರಡು ಬಾರಿಯ ಪುಸ್ತಕ ಸಂತೆ ಯಶಸ್ವಿಯಾಗಿದ್ದು ಅದೇ ಖುಷಿ ಮತ್ತು ವಿಶ್ವಾಸದಲ್ಲಿ ಮೂರನೇ ಪುಸ್ತಕ ಸಂತೆಯನ್ನು ಜಯನಗರದಲ್ಲಿ ಇದೇ 14ರಿಂದ 16ರ ವರೆಗೆ ಮೂರು ದಿನಗಳ ಕಾಲ ಆಯೋಜಿಲಸಾಗಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಬೇಟಿ ನೀಡುವ ಸಾಧ್ಯತೆ ಎಂದು ವೀರಲೋಕ ಪುಸ್ತಕ ಸಂಸ್ಥೆಯ ಮುಖ್ಯಸ್ಯ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ
ಮೂರು ದಿನಗಳ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಲೇಖಕರಿ, ಮುನ್ನೂರು ಪ್ರಕಾಶಕರ ಸಂಪರ್ಕ ಸಿಗಲಿದೆ.200 ಕ್ಕೂ ಹೆಚ್ಚು ಮಳಿಗೆ ತೆರೆಯಲಾಗಿದೆ.ಮಕ್ಕಳಿಗೆ ಆಟದ ಯಂತ್ರಗಳಿರುತ್ತವೆ. ಶಾಪಿಂಗ್ ಸೌಲಭ್ಯವಿದೆ. ಜೊತೆಗೆ ಎರಡು ವೇದಿಕೆಗಳಲ್ಲಿ ನಿರಂತರವಾಗಿ ಇಡೀ ದಿನ ಕಾರ್ಯಕ್ರಮ ಆಯೋಜನೆಯಾಗಿವೆ ಎಂದು ಮಾಹಿತಿ ನೀಡಿದರು
ಓಲೇ ವಿಭಾಗದಲ್ಲಿ ನೂರರಷ್ಟು ಲೇಖಕರ ನೇರ ಮುಖಾಮುಖಿ ಸಾಧ್ಯವಾಗಲಿದೆ.40 ಜನರ ಲೇಖಕರಿಂದ ಇಪ್ಪತ್ತು ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ.22 ನೂತನ ಕೃತಿಗಳ ಲೋಕಾರ್ಪಣೆ ಮಾಡಲು ನಿರ್ದರಿಸಲಾಗಿದೆ. 10 ರೀತಿಯ ಚಟುವಟಿಕೆಗಳನ್ನು ರೂಪಿಸಲಾಗಿದೆ..ನಾಟಕ, ಗೀತ ಗಾಯನಗಳು ಇರಲಿವೆ ಎಂದರು
ಮೊದಲ ದಿನ ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ,ಎ ನಾರಾಯಣಗೌಡ, ಶಾಸಕರಾದ ಎಸ್.ಟಿ ಸೋಮಶೇಖರ್, ಸಿಕೆ ರಾಮಮೂರ್ತಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಮಂದಿ ಬಾಗವಹಗಿಸುವ ನಿರೀಕ್ಷೆ ಎಂದು ಹೇಳಿದರು

