ಫಸ್ಟ್ ರಾಂಕ್ ಖ್ಯಾತಿಯ ನಟ ಗುರುನಂದನ್ ಸ್ನೇಹಿತರೊಂದಿಗೆ ನಿರ್ಮಿಸಿರುವ, ಸುಮಂತ್ ನಿರ್ದೇಶನದ ಮಿಸ್ಟರ್ ಜಾಕ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಪ್ರೇಮದ ಊರಲಿ’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಟಿ ತಪಸ್ವಿನಿ ಪೂಣಚ್ಚ ನಾಯಕಿಯಾಗಿ ಅಭಿನಯಿಸಿರುವ ಚಿತ್ರ ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಟ್ರೈಲರ್ ಅನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಡಾ. ಅಶ್ವತ್ಥ್ ನಾರಾಯಣ್, ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಹಾಗು `ಪ್ರೇಮದ ಊರಲಿ’ ಚಿತ್ರತಂಡದ ಸದಸ್ಯರೂ ಈ ವೇಳೆ ಹಾಜರಿದ್ದು ಚಿತ್ರಕ್ಕೆ ಶುಭ ಹಾರೈಸಿದರು
ನಿರ್ದೇಶಕ ಸುಮಂತ್ ಮಾತನಾಡಿ ಎಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಉತ್ತಮ ಸದಭಿರುಚಿಯ ಚಿತ್ರ ರೂಪಿಸಲು ಸಾಧ್ಯವಾಗಿದೆ. ಚಿತ್ರ ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿ, ಪೆÇ್ರೀತ್ಸಾಹಿಸಿ ಎಂದು ಕೇಳಿಕೊಂಡರು
ನಿರ್ಮಾಪಕ ಹಾಗೂ ನಾಯಕ ನಟ ಗುರುನಂದನ್ ಮಾತನಾಡಿ, ಸ್ನೇಹಿತರ ಸಹ ನಿರ್ಮಾಣದಲ್ಲಿ, ವಿಶೇಷ ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದೊಂದಿಗೆ ಉತ್ತಮ ಸದಭಿರುಚಿಯ ಕೌಟುಂಬಿಕ ಚಿತ್ರ ನಿರ್ಮಿಸಿದ್ದೇವೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾತ್ಮಕ ಚಿತ್ರವಿದು. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಪೆÇ್ರೀತ್ಸಾಹಿಸಬೇಕು” ಎಂದರು.

ನಾಯಕಿ ತಪಸ್ವಿನಿ ಪೂಣಚ್ಚ ಮಾತನಾಡಿ, “`ಪ್ರೇಮದ ಊರಲಿ’ ಚಿತ್ರದ ಮೂಲಕ ಎಲ್ಲರಿಗೂ ಪರಿಚಿತಳಾಗಿದ್ದೇನೆ. ಆ ಚಿತ್ರದ ಆತ್ಮೀಯ ಚಿತ್ರತಂಡದ ಸದಸ್ಯರು `ಮಿಸ್ಟರ್ ಜಾಕ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಬೆಂಬಲ ನೀಡಿರುವುದು ತುಂಬಾ ಸಂತೋಷ ತಂದಿದೆ. ಪ್ರೀತಿ ಮತ್ತು ಪೆÇ್ರೀತ್ಸಾಹಕ್ಕೆ ಆಭಾರಿ ಎಂದು ಹೇಳಿದರು
ಹಿರಿಯ ನಟ ರಂಗಾಯಣ ರಘು ಸೇರಿದಂತೆ ಹಲವು ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ಚಿತ್ರದಲ್ಲಿ ಅಭಿನಯಿಸಿರುವ ಧರ್ಮಣ್ಣ, ಸುಷ್ಮಿತಾ ಸೇರಿದಂತೆ ಹಲವು ಕಲಾವಿದರು, ಸಹನಿರ್ಮಾಪಕರು, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಛಾಯಾಗ್ರಾಹಕ ಶಿವಸೇನ, ಸಂಕಲನಕಾರ ವಿಜಯ್ ರಾಜ್, ನೃತ್ಯ ನಿರ್ದೇಶಕ ಅಭಿಷೇಕ್ ಮಠದ್ ಸೇರಿದಂತೆ ಹಲವು ತಂತ್ರಜ್ಞರು ಹಾಗೂ ಚಿತ್ರತಂಡದ ಅನೇಕ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.








