“ಶಿಲ್ಪಾ ಶ್ರೀನಿವಾಸ್” ಚಿತ್ರದ ವಿಶೇಷ ಹಾಡಿನಲ್ಲಿ ಹಿರಿಯ ನಟ ಅಭಿಜಿತ್
ಅಹಿನಾ ಮನೋ ಹಾಗು ಮಂಜುನಾಥ್ ಗೌರಜ್ಜಿ ನಿರ್ಮಿಸುತ್ತಿರುವ “ಶಿಲ್ಪಾ ಶ್ರೀನಿವಾಸ್” ಚಿತ್ರದ ಸ್ಪೆಷಲ್ ಹಾಡಲ್ಲಿ ಹಿರಿಯ ನಟ ಅಭಿಜಿತ್ ಹೆಜ್ಜೆ ಹಾಕಲಿದ್ದಾರೆ.

“ಈ ಸಿನಿಮಾ ಅಂತೀವಲ್ಲಾ ಅದು ದೊಡ್ಡ” ಎಂಬ ಸಾಲುಗಳಿಂದ ಪ್ರಾರಂಭವಾಗುವ ಪ್ರತಾಪ್ ಭಟ್ ಸಾಹಿತ್ಯಕ್ಕೆ ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ಮಾಡುವ ಜೊತೆಗೆ ಅವರೇ ಹಾಡಿದ್ದಾರೆ.
ಹಾರರ್ , ಥ್ರಿಲ್ಲರ್ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿನ ಹುಳುಕು ತೊಡಕು ಎತ್ತಿ ತೋರಿಸುವ ಕಥಾವಸ್ತು ಒಳಗೊಂಡಿರುವ ಶಿಲ್ಪಾ ಶ್ರೀನಿವಾಸ್ ಈಗಾಗಲೇ ಚಿತ್ರೀಕರಣ, ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಹಂತದಲ್ಲಿದೆ.

ನಿರ್ದೇಶಕ ರಾಜೀವ್ ಕೃಷ್ಣ, ಹೊಸ ಹಾಡನ್ನು ಸಿದ್ದಪಡಿಸಿ ಅದರಲ್ಲಿ ನಟ ಅಭಿಜಿತ್ ಅವರಿಂದ ಹೆಜ್ಜೆ ಹಾಕಿಸುತ್ತಿದ್ದಾರೆ. ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳು ಹಾಗೂ ಎರಡು ಫೈಟ್ ಗಳಿದ್ದು ಮೇ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂಬ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ.
ಚಿತ್ರದಲ್ಲಿ ನಿರ್ಮಾಪಕರು, ವಿತರಕರೂ ಆದ ಶಿಲ್ಪಾ ಶ್ರೀನಿವಾಸ್ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಶೋಭರಾಜ್, ನಾಗೇಂದ್ರ ಅರಸ್, ಶಂಖನಾದ ಆಂಜಿನಪ್ಪ,, ಅನ್ನಪೂರ್ಣ, ನಂದಿನಿ ಕಮ್ಮಯ್ಯ. ಪಂಚಾಕ್ಷರಯ್ಯ ಮರಿಸ್ವಾಮಿ, ವೀರ ಧನುಷ್.ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಬೆಂಗಳೂರು ಮನು,ಪ್ರಿಯ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಅನಿರುದ್ದ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಕೆ. ಮಲ್ಲಿ ವಡ್ಡರಹಟ್ಟಿ ಸಹ ನಿರ್ದೇಶನ, ಡಿ ಮಲ್ಲಿ ಸಂಕಲನ. ಸಾನ್ವಿ ನೃತ್ಯ ನಿರ್ದೇಶನವಿದೆ.ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

