ಹಿರಿಯ ನಟಿ ಮಹಾಲಕ್ಷ್ಮಿ ನಟನೆಯ ಟಿ ಆರ್ ಪಿ ರಾಮನಿಗೆ ಸೆನ್ಸಾರ್ ಅಸ್ತು
ಬಹುಭಾಷಾ ನಟಿ ಮಹಾಲಕ್ಷ್ಮಿ ನಟನೆಗೆ ಕಮ್‍ಬ್ಯಾಕ್ ಮಾಡಿದ್ದಾರೆ. ಅವರು ನಟಿಸಿರುವ `ಟಿಆರ್ ಪಿ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಟಿ ಆರ್ ಪಿ ರಾಮ ಟ್ರೇಲರ್ ಅನಾವರಣಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಕಮರ್ಷಿಯಲ್ ಅಂಶಗಳ ಜೊತೆಗೆ ಒಳ್ಳೆಯ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರ ಸೆನ್ಸಾರ್ ಪಾಸಾಗಿದ್ದು, ಯು ಎ ಸರ್ಟಿಫಿಕೇಟ್ ಸಿಕ್ಕಿದೆ.
‘ ಟಿ ಆರ್ ಪಿ ರಾಮ’ ಸಿನಿಮಾಗೆ ರವಿಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. `ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಆರ್.ಕೆ, ಪಲ್ಲವಿ ಪರ್ವ, ಕರಿಸುಬ್ಬು ಮುಂತಾದವರು ಅಭಿನಯಿಸಿದ್ದಾರೆ.
ರಾಜ್ ಗುರು ಹೊಸಕೋಟೆ ಅವರು ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಅವರು ಸಂಕಲನ ಮತ್ತು ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
ಟಿ ಆರ್ ಪಿ ರಾಮ ಸತ್ಯ ಘಟನೆಗಳನ್ನ ಆಧರಿಸಿ ಬರ್ತಿರೋ ಸಿನಿಮಾ ಆಗಿದೆ. ಚಿತ್ರದ ನಿರ್ದೇಶಕ ರವಿ ಪ್ರಸಾದ್ ಇಲ್ಲಿ ಆ ವಿಕೃತ ರಾಮನ ಪಾತ್ರ ಮಾಡಿದ್ದಾರೆ. ಆದರೆ ಇಲ್ಲಿ “ಖಿಖP” ಅಂದ್ರೇನೂ ಅನ್ನೋ ಪ್ರಶ್ನೆ ಕುತೂಹಲಕ್ಕೆ ನವೆಂಬರ್ ತಿಂಗಳಲ್ಲಿ ಉತ್ತರ ಸಿಗಲಿದೆ. ಅಂದರೆ ಟಿ ಆರ್ ಪಿ ರಾಮ ಸಿನಿಮಾ ನವೆಂಬರ್ ಮೊದಲ ವಾರ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ.