Veteran actress Prema Gana in the movie "Varahachakram".

“ವರಾಹಚಕ್ರಂ” ಚಿತ್ರದಲ್ಲಿ ಹಿರಿಯ ನಟಿ ಪ್ರೇಮ ಗಾನ - CineNewsKannada.com

“ವರಾಹಚಕ್ರಂ” ಚಿತ್ರದಲ್ಲಿ ಹಿರಿಯ ನಟಿ ಪ್ರೇಮ ಗಾನ

ಗೌರಿಪುತ್ರ ಖ್ಯಾತಿಯ ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನದ ಚಿತ್ರ ವರಾಹಚಕ್ರಂ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ದತಿಗಳು, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಥಾಹಂದರ ಒಳಗೊಂಡ ವರಾಹಚಕ್ರಂ ಚಿತ್ರದಲ್ಲಿ ಹಿರಿಯನಟಿ ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೆಲ್ಲ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ವಿಶೇಷವಾಗಿ ನಾಯಕಿ ಪ್ರೇಮಾ ಅವರು ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ. ವಾರಣಾಸಿಯಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಜನವರಿ 26ರ ಗಣರಾಜ್ಯೋತ್ಸವದಂದು ನಡೆಯಲಿದೆ.

ಶೂಟಿಂಗ್ ಟೈಮ್ ನಲ್ಲಿ ಸೆಟ್ ನಲ್ಲಿ ಪ್ರೇಮ ಅವರು ಹಾಡುತ್ತಿರುವಾಗ ಅದನ್ನು ಕೇಳಿದ ನಿರ್ದೇಶಕರು ಈ ಹಾಡನ್ನು ನೀವೆ ಹಾಡಿ ಎಂದು ಕೇಳಿದಾಗ ಅವರೂ ಒಪ್ಪಿ ಪ್ರೀತಿಯಿಂದ ಹಾಡಿಗೆ ದನಿಯಾಗಿದ್ದಾರೆ. ನಾಯಕಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿರುವ ಪ್ರೇಮ ಅವರು ತುಂಬಾ ಅನುಭವಿ ಗಾಯಕಿಯ ಹಾಗೆ ಹಾಡಿದ್ದು ವಿಷೇಶವಾಗಿತ್ತು.

ಅರ್ಜುನ್ ದೇವ ಚಿತ್ರದ ನಾಯಕನಾಗಿ ನಟಿಸಿದ್ದು, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್ ಮಸ್ಕಲ್ ಮಟ್ಟಿ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಡಾ.ವಿ. ನಾಗೇಂದ್ರಪ್ರಸಾದ್ ಅವರು ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ಸಹ ಮಾಡುತ್ತಿದ್ದಾರೆ.

ಚಿತ್ರಕ್ಕೆ ಶರತ್‍ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದ್ದು, ಬೆಂಗಳೂರು, ನೆಲ್ಲೂರು, ಪೆÇಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ವರಾಹಚಕ್ರಂ ಚಿತ್ರೀಕರಣ ನಡೆದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin