What are we, Chhatrapatis..Emperors..: Why should I taunt actor Darshan - Kiccha Sudeep

ನಾವೇನು ಛತ್ರಪತಿಗಳಾ..ಚಕ್ರವರ್ತಿಗಳಾ.. : ನಾನ್ಯಾಕೆ ದರ್ಶನ್‍ಗೆ ಟಾಂಗ್ ಕೊಡಲಿ- ಕಿಚ್ಚ ಸುದೀಪ್ - CineNewsKannada.com

ನಾವೇನು ಛತ್ರಪತಿಗಳಾ..ಚಕ್ರವರ್ತಿಗಳಾ.. : ನಾನ್ಯಾಕೆ ದರ್ಶನ್‍ಗೆ ಟಾಂಗ್ ಕೊಡಲಿ- ಕಿಚ್ಚ ಸುದೀಪ್

“ನಟರಾದ ದರ್ಶನ್, ಯಶ್, ದೃವ ಸರ್ಜಾ, ಶಿವಣ್ಣ, ನಾನು..ಹೀಗೆ ಎಲ್ಲರೂ ಇದ್ದರೆ ಮಾತ್ರ ಚಿತ್ರರಂಗ . ಹೀಗಿರುವಾಗ ನಾನ್ಯಾಕೆ ನಟ ದರ್ಶನ್ ಅವರನ್ನು ವ್ಯಂಗ್ಯ ಮಾಡಲಿ, ನಾವೇನು ಛತ್ರಪತಿಗಳಾ ಅಥವಾ ಚಕ್ರವರ್ತಿಗಳಾ ಒಂದು ದಿನ ನಾವೂ ಬಿಟ್ಟು ಹೋಗುವವರೇ..”

“ಬಾಸಿಸಂ ಕಾಲ ಮುಗೀತು….. ಮ್ಯಾಕ್ಸಿಸಂ ಕಾಲ ಶುರುವಾಯ್ತು..” ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಚರ್ಚೆ, ಬಿರುಗಾಳಿಗೆ ತಣ್ಣಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ದರ್ಶನ್‍ಗೂ ನನಗೂ ಏನೂ ಇಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ನಾನಾ-ನೀನಾ ಎನ್ನುವುದಕ್ಕಿಂತ ಚಿತ್ರರಂಗ ಮುಖ್ಯ.ಅದರ ಕಡೆಗೆ ನಮ್ಮ ಗಮನ ಇರಬೇಕು.

‘ಮ್ಯಾಕ್ಸ್” ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ,ಕಲಾವಿದರಿಗೆ, ಮಾದ್ಯಮದ ಮಂದಿಗೆ ಕೃತಜ್ಞತೆ ಹೇಳಲು ಕರೆದಿದ್ದ ಥ್ಯಾಂಕ್ಸ್ ಗಿವಿಂಗ್” ನಲ್ಲಿ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿ, ನಾವೆಲ್ಲಾ ಒಂದು, ನಮ್ಮ ಮದ್ಯೆ ಅನಗತ್ಯವಾಗಿ ತಂದು ಹಾಕುವ ಕೆಲಸ ಮಾಡಬೇಡಿ.

ಅಭಿಮಾನಿಗಳು ಪ್ರೀತಿಯಿಂದ ಅವರವರ ನಟರನ್ನು ಬಾಸ್ ಅಂತ ಕರೀತಾರೆ. ಅದರಲ್ಲಿ ತಪ್ಪೇನಿದೆ, ಉಪೇಂದ್ರ, ಯಶ್, ದೃವ, ಶಿವಣ್ಣ ನನ್ನು ಅವರ ಅಭಿಮಾನಿಗಳು ಬಾಸ್ ಎಂದು ಕರೆಯುವಾಗ ನನ್ನನೇಕೆ ಕರೆಯಬಾರದು.. ನಾನು ಬಾಸ್ ಅಂತ ಕರೆಯೋದು ನನ್ನ ತಂದೆಗೆ ಮಾತ್ರ. ಅವರು ಹಾಗೆ ಬರೆಸಿ ತಂದಾಗ, ನನ್ನ ತಂದೆ ಬಗ್ಗೆ ಹೇಳುತ್ತಿದ್ದೀಯ ಎಂದು ಕೇಳಬೇಕಿತ್ತು ಎಂದು ಪ್ರಶ್ನಿಸಿದರು.

ಮ್ಯಾಕ್ಸ್ ಚಿತ್ರ ನೋಡಿಕೊಂಡು ಬಂದ ನನ್ನ ಹುಡುಗನೊಬ್ಬ `ಇವತ್ತಿನಿಂದ ಕಿಚ್ಚ ಬಾಸ್ ಅಂತ ಕರೆಯೋದು ನಿಲ್ಲಿಸಿ, ಕಿಚ್ಚ ಮಾಸ್ ಅಂತ ಕರೆಯಿರಿ’ ಎಂದು ಹೇಳುತ್ತಾನೆ. ಅದನ್ನೇ ಕೇಕ್ ಮೇಲೆ ಬರೆಸಿ ತರುತ್ತಾನೆ.ಅದನ್ನೇ ಸುದೀಪ್ ಟಾಂಗ್ ಕೊಟ್ರಾ ಎಂದು ವಾಹಿನಿಯೊಂದು ಹೇಳುತ್ತಿದ್ದ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಯ್ ಗುಡುತ್ತಿದೆ. ವಾಹಿನಿಯಲ್ಲಿ ಕೆಲಸ ಮಾಡುವ ಮಂದಿ ಅವರ ಯಜಮಾನರನ್ನು ಬಾಸ್ ಅಂತ ಕರೆಯುವುದಿಲ್ಲವೇ ಇದನ್ನು ಅಪಹಾಸ್ಯ ಮಾಡಲು ಆಗುತ್ತದೆಯೇ..

ಟಾಂಟ್ ಕೊಟ್ಟ ಸುದೀಪ್ ಎಂದು ಬಿಂಬಿಸಿದ ಅದೇ ವಾಹಿನಿಯಲ್ಲಿ ಕುಳಿತು `ದರ್ಶನ್ ಅವರ ಅಭಿಮಾನಿಗಳಿಗೆ ಬಯ್ಯಬೇಡಿ. ಅವರಿಗೆ ಏನೂ ಗೊತ್ತಾಗುತ್ತಿಲ್ಲ ನೋವಿನಲ್ಲಿದ್ದಾರೆ ಎಂದು ಹೇಳಿದ್ದೆ. ಹೀಗಿರುವಾಗ ನಾನು ಯಾಕೆ ಇನ್ನೊಬ್ಬರನ್ನು ವ್ಯಂಗ್ಯ ಮಾಡಲಿ, ಟಾಂಟ್ ಕೊಟ್ಟು ಬದುಕುವುದು ಅಗತ್ಯವಿಲ್ಲ, ಹೇಳುವುದನ್ನು ನೇರವಾಗಿಯೇ ಹೇಳುವ ಜಾಯಮಾನ ನನ್ನದು.

ನಮ್ಮ ಹಿರಿಯರು ಚಿತ್ರರಂಗವನ್ನು ಕಷ್ಟಪಟ್ಟು ಕಟ್ಟಿದ್ದಾರೆ,ಅದನ್ನು ಉಳಿಸುವುದು ನಮ್ಮ ಜವಾಬ್ದಾರಿ, ನಾವು ನಮ್ಮ ಕಿರಿಯವರಿಗೆ ಮತ್ತಷ್ಟು ಉಳಿಸಿ ಎಂದು ಚಿತ್ರರಂಗವನ್ನು ಬಿಟ್ಟುಕೊಡಬೇಕು. ಈ ರೀತಿ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ಆದರೆ ವಿವಾದ ಆಗುವುದು ಬೇಡ ಎನ್ನುವುದು ನನ್ನ ಉದ್ದೇಶ ಎಂದು ಸ್ಪಷ್ಟನೆ ಕೊಟ್ಟರು.

ನಾವೆಲ್ಲಾ ಬಹಳ ಚಿಕ್ಕವರು. ಕಷ್ಟದಲ್ಲಿರುವ ಚಿತ್ರರಂಗವನ್ನು ಉಳಿಸುವ ಕೆಲಸ ಮಾಡೋಣ. ವ್ಯಂಗ್ಯ ಮಾಡಿ ಸಾದಿಸುವುದು ಏನೂ ಇಲ್ಲ. ದರ್ಶನ್ ಸಹೋದರನ ರೀತಿ ಇದ್ದವರು. ಯಶ್‍ಗೆ ಅವರ ಅಭಿಮಾನಿಗಳು ಯಶ್ ಬಾಸ್ ಎನ್ನುತ್ತಾರೆ. ಧ್ರುವಂಗೆ ಧ್ರುವ ಬಾಸ್, ಶಿವಣ್ಣ ಬಾಸ್, ಉಪ್ಪಿ ಬಾಸ್ ಎನ್ನುತ್ತಾರೆ. ಎಲ್ಲಾ ಅಭಿಮಾನಿಗಳಿಗೂ ಅವರ ಮೆಚ್ಚಿನ ನಟರು ಬಾಸ್‍ಗಳೇ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಎಲ್ಲಾ ಅಭಿಮಾನಿಗಳು ಎಲ್ಲ ನಟರ ಚಿತ್ರಗಳನ್ನು ನೋಡುತ್ತಾರೆ. ನಾವ್ಯಾಕೆ ಹೀಗೆ ಮಾಡಬೇಕು ಈ ಕೆಟ್ಟ ಅಹಂಕಾರ ನಮ್ಮಲ್ಲಿದೆ ಅಂತ ನೀವು ಅಂದುಕೊಳ್ಳುವುದುದೇ ಸರಿಯತಲ್ಲ. ಮ್ಯಾಕ್ಸ್ ಚಿತ್ರ ನೋಡಿಕೊಂಡು ಬಂದ ಹುಡುಗನ ಮನಸ್ಥಿತಿ ಗೊತ್ತು. ಆ ಮನಸ್ಥಿತಿಯವನಲ್ಲ, ಅವನಿಗೆ ಏನಾದರೂ ಆಗಲ್ಲ, ಆಗಲು ಬಿಡುವುದಿಲ್ಲ,

ಚಿತ್ರರಂಗದಲ್ಲಿ ನಾನಾ-ನೀನಾ ಎನ್ನುವುದಕ್ಕಿಂತ ಒಗ್ಗಟ್ಟು ಮುಖ್ಯ ಎಂದು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಎದ್ದಿದ್ದ ವಿವಾದಕ್ಕೆ ಪೂರ್ಣವಿರಾಮ ಹಾಕಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin