ರಾಂಕ್ ಸ್ಟಾರ್ ಗುರುನಂದನ್ ಈಗ ನಿರ್ಮಾಪಕ : ‘ಮಿಸ್ಟರ್ ಜಾಕ್’ ಶೀರ್ಷಿಕೆ ಟೀಸರ್ ಬಿಡುಗಡೆ

“ರಾಂಕ್ ಸ್ಟಾರ್” ಖ್ಯಾತಿಯ ನಟ ಗುರುನಂದನ್ ಈಗ ನಿರ್ಮಾಪಕರಾಗಿದ್ದಾರೆ. “ಮಂಡಿಮನೆ ಟಾಕೀಸ್” ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಸ್ನೇಹಿತರೊಂದಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದುವೇ “ಮಿಸ್ಟರ್ ಜಾಕ್.
ರಾಜು” ಸರಣಿಯ ಚಿತ್ರಗಳಿಂದ ಗುರುನಂದನ್ ಇದೀಗ “ಮಿಸ್ಟರ್ ಜಾಕ್” ಅವತಾರದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ಜೋಡಿಯಾಗಿ ಯುವ ನಟಿ ತಪಸ್ವಿನಿ ಪೂಣಚ್ಚ ಕಾಣಿಸಿಕೊಂಡಿದ್ದಾರೆ.

ಮಿಸ್ಟರ್ ಜಾಕ್ ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಇದೀಗ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ.
ಡಿಸೆಂಬರ್ 30 ನಟ ಗುರುನಂದನ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ತಮ್ಮ ಹೊಸ ನಿರ್ಮಾಣ ಸಂಸ್ಥೆ ಮಂಡಿಮನೆ ಟಾಕೀಸ್ ಅಡಿ ಮೂಡಿ ಬರುತ್ತಿರುವ ” ಮಿಸ್ಟರ್ ಜಾಕ್” ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಗುರುನಂದನ್‍ಗೆ ಉಡುಗೊರೆ ನೀಡಿ, ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು.

ಚಿತ್ರಕ್ಕೆ ಸುಮಂತ್ ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ವೇಳೆ ಮಾತು ಹಂಚಿಕೊಂಡ ಸುಮಂತ್,
ಮೊದಲ ಚಿತ್ರ. ಗುರುನಂದನ್ ಗೆ ಕಥೆ ಹೇಳಿದಾಗ ತಾವೇ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದರು. ನಾಯಕನ ಹೆಸರು ಜಾನಕಿರಾಮ್ . ಸ್ಟಾಂಡ್ ಅಪ್ ಕಾಮಿಡಿಯನ್ ಗಳು ತಮ್ಮ ಹೆಸರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ, ನಾಯಕ ತನ್ನನ್ನು ‘ಮಿಸ್ಟರ್ ಜ್ಯಾಕ್’ ಎಂದು ಗುರುತಿಸಿಕೊಳ್ಳುತ್ತಿರುತ್ತಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಮತ್ತು ಫ್ಯಾಮಿಲಿ ಡ್ರಾಮಾ. ಗುರುನಂದನ್ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡುತ್ತಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ’ ಎಂದರು.

ನಟ ಗುರುನಂದನ್ ಮಾತನಾಡಿ, ಟೀಸರ್ ಮತ್ತು ಟೈಟಲ್ ರಿವೀಲ್ ಮಾಡುತ್ತಾರೆ ಎಂಬುದು ನನಗೂ ಗೊತ್ತಿರಲಿಲ್ಲ. ಚಿತ್ರತಂಡದವರು ಅಚ್ಚರಿ ಎಂದಷ್ಟೇ ಹೇಳಿದ್ದರು. ಇದ್ಯಾವುದನ್ನೂ ತೋರಿಸಿರಲಿಲ್ಲ. ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಈ ಟೀಸರ್ ಕೊಟ್ಟಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಈ ಕಥೆ ಕೇಳಿದಾಗ ನ ನಿರ್ಮಾಣ ಮಾಡಬೇಕು ಅಂತನಿಸಿತ್ತು. ಅಷ್ಷೊಂದು ಚೆನ್ನಾಗಿತ್ತು ಈ ಕಥೆ. ಇದುವರೆಗೂ ಸ್ಟಾಂಡ್ ಅಪ್ ಕಾಮಿಡಿಯನ್ ಬಗ್ಗೆ ಕನ್ನಡದಲ್ಲಿ ಯಾರೊಬ್ಬರೂ ಚಿತ್ರ ಮಾಡಿರಲಿಲ್ಲ. ಅಂಥದ್ದೊಂದು ಪ್ರಯತ್ನ ಚಿತ್ರದ ಮೂಲಕ ಮಾಡುತ್ತಿದ್ದೇವೆ. ನಮ್ಮ ಸ್ನೇಹಿತರೆಲ್ಲರೂ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ ಎಂದರು.

ಬೆಂಗಳೂರು ಸುತ್ತಮುತ್ತ ಶೇ. 75ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಕೊನೆಯ ಹಂತದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಶುರುವಾಗಲಿದೆ. ಒಂದು ಹಾಡು ಹೊರತುಪಡಿಸಿದರೆ, ಜನವರಿಯಲ್ಲಿ ಮಿಕ್ಕೆಲ್ಲಾ ಭಾಗದ ಚಿತ್ರೀಕರಣ ಮುಗಿಯಲಿದೆ. ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು.
‘ಹಾಸ್ಯ ಮಾಡುವವರ ಹಿಂದಿನ ಕಥೆ ಇದು. ಇಲ್ಲಿ ನಾಯಕ ಒಬ್ಬ ಸ್ಟಾಂಡ್ ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಅವನ ಹಿಂದಿನ ನೋವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಏನೇ ನೋವಿದ್ದರೂ, ಅದನ್ನು ಹೊರಗೆ ತೋರಿಸದೇ, ಎಲ್ಲರನ್ನೂ ನಗಿಸುವುದು, ದೊಡ್ಡ ಸವಾಲಿನ ಕೆಲಸ. ನನ್ನ ಹಿಂದಿನ ಚಿತ್ರಗಳಲ್ಲಿ ಮಾತುಗಳ ಮೂಲಕ ಹಾಸ್ಯ ಇರುತ್ತಿತ್ತು. ಆದರೆ, ಇಲ್ಲಿ ಸ್ವಾಭಾವಿಕವಾಗಿ ಮತ್ತು ತಕ್ಷಣವೇ ನಗಿಸುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಿರ್ದೇಶಕರು ಹೊಸಬರಾದರೂ, ಹಳಬರ ರೀತಿ ಕೆಲಸ ಮಾಡುತ್ತಿದ್ದಾರೆ. ಸಮಾಧಾನವಾಗುವವರೆಗೂ, ಅಂದುಕೊಂಡ ಔಟ್‍ಪುಟ್ ಸಿಗುವವರೆಗೂ ಅವರು ಬಿಡುವುದಿಲ್ಲ’ ಎಂದರು.

ಚಿತ್ರದಲ್ಲಿ ನಾಯಕಿಯಾಗಿ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತೇಜಸ್ವಿನಿ ಪೂಣಚ್ಛ ನಟಿಸುತ್ತಿದ್ದಾರೆ. ‘ನನ್ನದು ಸಸ್ಪೆನ್ಸ್ ಪಾತ್ರ. ಈ ಚಿತ್ರದಲ್ಲಿ ಬರೀ ಕಾಮಿಡಿಯಷ್ಟೇ ಅಲ್ಲ, ತುಂಬಾ ಸೆಂಟಿಮೆಂಟ್ ಸಹ ಇದೆ. ಅದೆಲ್ಲವನ್ನು ಚೆನ್ನಾಗಿ ಪೋಣಿಸಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದೊಂದು ತಂಡದ ಪ್ರಯತ್ನ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬರುವುದಕ್ಕೆ ಸಾಧ್ಯವಾಗಿದೆ’ ಎಂದರು.
‘ಮಿಸ್ಟರ್ ಜಾಕ್’ ಚಿತ್ರದಲ್ಲಿ ಗುರುನಂದನ್ ಮತ್ತು ತೇಜಸ್ವಿನಿ ಜೊತೆಗೆ ಮಿತ್ರ, ಧರ್ಮಣ್ಣ ಕಡೂರು, ಗೋಪಾಲಕೃಷ್ಣ ದೇಶಪಾಂಡೆ, ಗಿರಿ, ಸುಷ್ಮಿತಾ ಮುಂತಾದವರು ನಟಿಸುತ್ತಿದ್ದಾರೆ. ಕಾರ್ತಿಕ್ ಪತ್ಥಾರ್ ಮುಂತಾದ ಜನಪ್ರಿಯ. ಸ್ಟಾಂಡ್ ಅಪ್ ಕಾಮಿಡಿಯನ್ ಗಳು ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸುತ್ತಿದ್ದು, ಶಿವಸೇನ ಛಾಯಾಗ್ರಹಣವಿದೆ.