“ಆಕ್ರೋಶ” ಕಿರುಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಯಶ್ವಂತ್
ಕಿರುಚಿತ್ರ ಅನೇಕ ಪ್ರತಿಭಾವಂತರ ಪ್ರದರ್ಶನಕ್ಕೆ ಉತ್ತಮ ವೇದಿಕೆ.ಅಭಿನಯಿಸಿ ಸೈ ಎನಿಸಿಕೊಂಡವರು ಹಿರಿತೆರೆಯ ಮೇಲೆ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಯಶ್ವಂತ್ ಯುವನಟ, ಗೌರಿಶ್ರೀ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 30 ನಿಮಿಷಗಳ “ಆಕ್ರೋಶ” ಎಂಬ ಕಿರುಚಿತ್ರದಲ್ಲಿ ನಟಿಸುವ ಮೂಲಕ ಅಭಿನಯ ಆರಂಭಿಸಿದ್ದಾರೆ.

ಜಗದೀಶ್ ವರ್ಮ ನಿರ್ಮಾಣದ ಕಿರುಚಿತ್ರದ ಪ್ರದರ್ಶನನಡೆಯಿತು. ಹಿರಿಯ ನಿರ್ದೇಶಕರಾದ ಓಂಸಾಯಿಪ್ರಕಾಶ್ , ಪುರುಷೋತ್ತಮ್ ಓಂಕಾರ್, ರತ್ನಮಾಲ ಮುಂತಾದವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು
ನಿರ್ದೇಶಕಿ ಗೌರಿಶ್ರೀ ಮಾತನಾಡಿ ನಿರ್ಮಾಪಕ ಜಗದೀಶ್ ವರ್ಮ, ನನ್ನ ಮಗ ಯಶ್ವಂತ್ ನನ್ನು ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿಸಬೇಕೆಂದುಕೊಂಡಿದ್ದೇವೆ. ಹಾಗಾಗಿ ಒಂದು ಸಿನಿಮಾ ಮಾಡೋಣ ಎಂದರು. ಮೊದಲು ಕಿರುಚಿತ್ರ ಮಾಡೋಣ. ಹೊಸ ಹುಡುಗ ಮೊದಲು ನಟನೆ ಕಲಿಯಲಿ. ಆನಂತರ ಸಿನಿಮಾ ಮಾಡೋಣ ಅಂತ ಹೇಳಿದೆ. ಹಾಗಾಗಿ ಮೊದಲು ಕಿರುಚಿತ್ರ ಮಾಡಿದ್ದೇವೆ. ಇದಕ್ಕೂ ಮೊದಲು “ಅಮೂಲ್ಯ”, “ರೀತು”, ” ಜನರಕ್ಷಕ”, “ಭಾರತಿ ಐಪಿಎಸ್” ಚಿತ್ರಗಳನ್ನು ನಿರ್ದೇಶಿಸಿದ್ದೇನೆ ಎಂದರು

ಅದರಲ್ಲಿ “ಅಮೂಲ್ಯ” ಹಾಗೂ “ಜನರಕ್ಷಕ” ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಇನ್ನೂ “ಆಕ್ರೋಶ” ಕಿರುಚಿತ್ರದ ಕಥೆ ಒಂದೇ ದಿನದಲ್ಲಿ ಸಿದ್ಧವಾಯಿತು. ಎರಡೇ ದಿನದಲ್ಲಿ ಚಿತ್ರೀಕರಣ ಕೂಡ ಮಾಡಲಾಯಿತು. ನೂತನ ಪ್ರತಿಭೆ ಯಶ್ವಂತ್ ಕಿರುಚಿತ್ರದಲ್ಲಿ ಕನ್ನಡ ಕಲಿತು ಅಭಿಯಿಸಿದ್ದಾರೆ. ಸದ್ಯದಲ್ಲೇ ಇವರೆ ನಾಯಕನಾಗಿ ನಟಿಸಲಿರುವ ಹೊಸ ಚಿತ್ರ ಕೂಡ ಆರಂಭವಾಗಲಿದೆ ರಾಜಾರವಿ ಛಾಯಾಗ್ರಹಣ, ವಿನು ಮನಸು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ಯಶ್ವಂತ್, ಗುರುರಾಜ್ ಹೊಸಕೋಟೆ, ಭಾಗ್ಯ, ಪ್ರವಲ್ಲಿಕ, ಪ್ರೇಮ ಮಾಲೂರ್ ಮುಂತಾದವರಿದ್ದಾರೆ. ನಾನು ಕೂಡ ಅಭಿನಯಿಸಿದ್ದೇನೆ ಎಂದು ತಿಳಿಸಿದರು.

ನಟ ಯಶ್ವಂತ್ ಮಾತನಾಡಿ “ಆಕ್ರೋಶ” ನನ್ನ ಮೊದಲ ಪ್ರಯತ್ನ. ಮುಂದೆ ದೊಡ್ಡಪರದೆಯ ಮೇಲೂ ಅಭಿನಯಿಸಲಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು
ನಿರ್ಮಾಪಕ ಜಗದೀಶ್ ವರ್ಮ, ನಟಿ ಪ್ರವಲ್ಲಿಕ ಹಾಗೂ ನಟ ಪ್ರೇಮ್ ಮಾಲೂರು ಮುಂತಾದವರು “ಆಕ್ರೋಶ” ಕಿರುಚಿತ್ರದ ಕುರಿತು ಮಾತನಾಡಿದರು.

