Kalasamrat S. Narayan in the social concern film “Hello Sir”

ಸಾಮಾಜಿಕ ಕಳಕಳಿಯ “ಹಲೋ ಸರ್” ಚಿತ್ರದಲ್ಲಿ ಕಲಾಸಾಮ್ರಾಟ್ ಎಸ್. ನಾರಾಯಣ್ - CineNewsKannada.com

ಸಾಮಾಜಿಕ ಕಳಕಳಿಯ “ಹಲೋ ಸರ್” ಚಿತ್ರದಲ್ಲಿ ಕಲಾಸಾಮ್ರಾಟ್ ಎಸ್. ನಾರಾಯಣ್

ಮುಕ್ತಿ, ತ್ರಿಪುರ,ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ್ದ ಕೆ.ಶಂಕರ್ ನಿರ್ದೇಶನದ ಮತ್ತೊಂದು ಚಿತ್ರ “ಹಲೋ ಸರ್”. ಕನ್ನಡ, ತೆಲಗು, ತಮಿಳು ಸೇರಿದಂತೆ 3 ಭಾಷೆಗಳಲ್ಲಿ ನಿರ್ಮಾಣವಾಗಿದ್ದು ಚಿತ್ರಕ್ಕೆ ಶಂಕರ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿದ್ದಾರೆ.

ಸಮಾಜದಲ್ಲಿ, ತಿಳಿದೂ ಅಪರಾಧ ಕೃತ್ಯ ತಪ್ಪು ಮಾಡಿ, ತಮ್ಮ, ಹಣ ಬಲ, ಜನರ ಸಾಮರ್ಥ್ಯ ಬಳಸಿಕೊಂಡು, ಪ್ರಾಮಾಣಿಕರ ಹಾಗೂ ಪೊಲೀಸ್ ಮತ್ತು ರಾಜಕಾರಣಿಗಳ ವಿರುದ್ಧ ಸಮರ ಸಾರುವ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಚಿತ್ರದಲ್ಲಿದೆ.

ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವವರ ವಿರುದ್ದ ಹೋರಾಡುವ ಯುವಕನ ಕಥೆಯೂ ಹೌದು.ಚಿತ್ರದ ನಾಯಕನಾಗಿ ರಾಜಬಾಲ ನಟಿಸಿದ್ದಾರೆ. ಈಗಾಗಲೇ ತೆಲುಗಿನ;;ಒ ಚಿತ್ರಂ, ಲವ್ ಬೂಮ್, ತೊಂಗಿ ತೊಂಗಿ ಚುದಾಮುಕ್ಕು ಚಂದಮಾಮ, ಮೈತ್ರಿವಾನಂ, ಅಂತಕು ಮಿಂಚು, ಚಿತ್ರಗಳಲ್ಲಿ ನಟಿಸಿರುವ ರಾಜಬಾಲ ಅವರಿಗೆ ಕನ್ನಡದಲ್ಲಿದು ಮೊದಲ ಚಿತ್ರ, ಸ್ವಾತಿ ಲಿಂಗರಾಜ್ ಚಿತ್ರದ ನಾಯಕಿಯಾಗಿ ನಟಿಸಿದ್ದು, ಕಲಾ ಸಾಮ್ರಾಟ್ ಎಸ್. ನಾರಾಯಣ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಎಲ್. ಮಂಜುನಾಥ್, ಮಹೇಶ್ ಮತ್ತು ವೆಂಕಟೇಶ್‍ಸೇರಿ ಚಿತ್ರ ನಿರ್ಮಿಸುತ್ತಿದ್ದಾರೆ. ಕೆ ಶಂಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಎನ್.ಕೃಪಾಕರ್ ಸಂಗೀತ, ಚಂದ್ರು ಸೊಂಡೇಕೊಪ್ಪ, ಸೂರ್ಯೋದಯ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೆ.ಶಿವಣ್ಣ, ಕಿಲ್ಲರ್ ವೆಂಕಟೇಶ್, ರಮಾನಂದ್, ಬೇಬಿ ಎಸ್ ಪವಿತ್ರ, ಉಳಿದ ತಾರಾಗಣದಲ್ಲಿದ್ದಾರೆ.

ಮಂಗಳೂರು, ಮಂಡ್ಯ, ಬೆಂಗಳೂರು, ಹೈದರಾಬಾದ್ ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin