Teaser of “Kothalavadi” produced by actor Yash’s mother released: Curiosity increases

ನಟ ಯಶ್ ತಾಯಿ ನಿರ್ಮಾಣದ “ಕೊತ್ತಲವಾಡಿ” ಟೀಸರ್ ಬಿಡುಗಡೆ: ಹೆಚ್ಚಿದ ಕುತೂಹಲ - CineNewsKannada.com

ನಟ ಯಶ್ ತಾಯಿ ನಿರ್ಮಾಣದ “ಕೊತ್ತಲವಾಡಿ” ಟೀಸರ್ ಬಿಡುಗಡೆ: ಹೆಚ್ಚಿದ ಕುತೂಹಲ

ರಾಕಿಂಗ್‍ಸ್ಟಾರ್ ಯಶ್ ಅರ್ಪಿಸಿ ಅವರ ತಂದೆ -ತಾಯಿ ಪುಷ್ಪ,ಅರುಣ್ ಕುಮಾರ್ ಚೊಚ್ಚಲ ನಿರ್ಮಾಣದ ” ಕೊತ್ತಲವಾಡಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪವರ್‍ಫುಲ್ ಆಕ್ಷನ್‍ಲುಕ್‍ನಲ್ಲಿ ನಟ ಪೃಥ್ವಿಅಂಬರ್ ಕಾಣಿಸಿಕೊಂಡಿರುವ ಟೀಸರ್ ಗಮನ ಸೆಳೆದಿದೆ.

ನಟ ಶರಣ್ ಟೀಸರ್ ಬಿಡುಗಡೆ ಮಾಡಿ ಶುಭಕೋರಿದರು. ನೆಲದ ಅಪ್ಪದ ದೇಸಿ ಕಲಾವಿದರಾದ ಗೋಪಾಲಕೃಷ್ಣ ದೇಶಪಾಂಡೆ ಮತ್ತು ರಾಜೇಶ್ ನಟರಂಗ , ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ನಟನೆಯ ಮೂಲಕ ಮೋಡಿ ಮಾಡಿರುವ ನಟಿ ಕಾವ್ಯ ಚಿತ್ರದ ನಾಯಕಿ. ಶ್ರೀರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಟೀಸರ್ ಅನ್ನು ನಟ ಶರಣ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಇದೇ ವೇಳೆ ಚಿತ್ರದ ಹಾಡು ಪ್ರದರ್ಶಿಸಲಾಯಿತು. ಲಹರಿ ಸಂಸ್ಥೆಯ ವೇಲು, ನಿರ್ಮಾಪಕರಾದ ಪುಷ್ಪ ಹಾಗು ಅರುಣ್ ಕುಮಾರ್ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟೀಸರ್ ಬಿಡುಗಡೆ ಮಾಡಿದ ನಟ ಶರಣ್, ಕೊತ್ತಲವಾಡಿ ಚಿತ್ರದ ಟೀಸರ್ ಮತ್ತೆ ಮತ್ತೆ ನೋಡುವಂತೆ ಇದೆ.ಎರಡು ವರ್ಷಗಳ ಹಿಂದೆ ಪುಷ್ಪ ಅಮ್ಮ ಅವರು ಚಿತ್ರ ಮಾಡುವುದಾಗಿ ಹೇಳಿದ್ದರು. ಇತ್ತೀಚೆಗೆ ಕಾಲ್ ಮಾಡಿ ಚಿತ್ರೀಕರಣ ಮುಗಿದಿದೆ ಎಂದು ಹೇಳಿದರು. ಪುಷ್ಪ ಅರುಣ್ ಕುಮಾರ್ ಮನಸ್ಸು ಮಾಡಿದ್ದರೆ ನಟ ಯಶ್ ಅವರಿಗಾಗಿ ಸಿನಿಮಾ ಮಾಡಬಹುದಿತ್ತು. ಆದರೆ ಹೊಸಬರಿಗೆ ಅವಕಾಶ ನೀಡುವ ಅವರ ಉದ್ದೇಶ ಯಶಸ್ವಿಯಾಗಬೇಕು. ಜೊತೆಗೆ ಪಿಎ ಪೆÇ್ರಡಕ್ಷನ್ ಕನ್ನಡ ಚಿತ್ರರಂಗದ ಅತಿ ದೊಡ್ಡ ಪ್ರೊಡಕ್ಷನ್ಸ್ ಹೌಸ್ ಆಗಿ ಯಶಸ್ಸುಗಳಿಸಲಿ ಎಂದು ಹಾರೈಸಿದರು

ಒಂದು ಹೊಸ ಶುರುವಾತಿನ ವೈಬ್ ಕಾಣಿಸುತ್ತಿದೆ. ಯಶಸ್ಸಿನ ಗುಟ್ಟು ಈ ಒಗ್ಗಟ್ಟಿನ ಸಾಕ್ಷಿ, ಈ ಚಿತ್ರಕ್ಕೆ ಕೆಲಸ ಮಾಡಿರುವ ಮುಖದಲ್ಲಿ ಕುತೂಹಲ, ಪಾಸಿಟಿವ್ ಎನರ್ಜಿ, ಭಕ್ತಿ, ಆತ್ಮೀಯತೆ, ಪ್ರೀತಿ ಇದೆ. ಇಷ್ಟು ಸಾಕು ಒಂದು ಯಶಸ್ವಿಗೆ. ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಕೊಟ್ಟಿದ್ದಕ್ಕೆ ಅಮ್ಮನಿಗೆ ಧನ್ಯವಾದ. ಇಷ್ಟು ವರ್ಷದ ಕನಸ್ಸು ಲೋಕಾರ್ಪಣೆ ಮಾಡುತ್ತಿರುವ ಖುಷಿ ಚಿತ್ರತಂಡದ ಮುಖದಲ್ಲಿ ಕಾಣಿಸುತ್ತದೆ. ಇಡೀ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಮಾತನಾಡಿ, ಸಿನಿಮಾ ಅವಕಾಶ ಕೊಡುತ್ತೇನೆ ಸುತ್ತಿಕೊಂಡು ಬರಬಾರದು. ಕೆಲಸ ಮಾತನಾಡಬೇಕು. ನಾವು ಮಾತನಾಡಬಾರದು. ಈ ಸಿನಿಮಾನಾ ನಾವು ನೋಡಲ್ಲ. ಯಶ್ ಮನೆ ಸಿನಿಮಾ ಅಂದ್ರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ಲ ಅಂದರೆ ಮಾಡಬೇಡಿ. ಎಲ್ಲ ನಿಮಗೆ ಕೊಡುತ್ತೇವೆ. ಆರ್ಟಿಸ್ಟ್ ಯಾರು ಬೇಕು. ಎಲ್ಲಾ ಸೆಲೆಕ್ಷನ್ ಅವರೇ ಮಾಡಿದ್ದಾರೆ. ನಮ್ಮ ಬ್ಯಾನರ್ ಯಾವುದು ಎಲ್ಲವನ್ನೂ ಯಶ್ ಗೆ ಉತ್ತರ ಕೊಡಬೇಕು. ಯಶ್ ನಿಂದ ನಾವು ಏನು ಕಲಿತಿದ್ದೇವೆ ಎಂದರೆ ಸಿನಿಮಾ ಏನು ಕೇಳುತ್ತದೆಯೋ ಅದು ಕೊಡಬೇಕು.ಸಿನಿಮಾಗೆ ಮೋಸ ಮಾಡಬಾರದು ಎನ್ನುವುದು. 10ರೂಪಾಯಿ ಜಾಸ್ತಿಯಾಗಲಿ. ಕ್ವಾಲಿಟಿ ಕೊಡಬೇಕು. ಕಥೆ ಮಾತನಾಡಬೇಕು. ಅದೇ ರೀತಿ ನೀವು ಮಾಡುತ್ತೇವೆ ಎಂದರೆ ನಿಮಗೆ ಕೊಡುತ್ತೇವೆ ಎಂದು ಹೇಳಿದ್ದೆ. ಆಡಿಯನ್ಸ್ ರಿಸಲ್ಟ್ ಗೆ ನಾವು ಕಾಯುತ್ತೇವೆ ಎಂದು ಹೇಳಿದರು.

ಅರುಣ್ ಕುಮಾರ್ ಮಾತನಾಡಿ, ನಿನಗೆ ಖುಷಿಯಾದರೆ ಮಾಡಮ್ಮ. ನಾನು ರೈತ. ನೀನು ಏನ್ ಬೇಕಾದರೂ ಮಾಡು ಎಂದು ಪತ್ನಿಗೆ ಬೆಂಬಲವಾಗಿ ನಿಂತಿರುವುದಾಗಿ ತಿಳಿಸಿದರು.

ನಟ ಪೃಥ್ವಿ ಅಂಬರ್ ಮಾತನಾಡಿ, ನಿರ್ದೇಶಕ ಶ್ರೀರಾಜು ಸರ್ ನನಗೆ ಮೊದಲಿನಿಂದ ಪರಿಚಯ. ಹೇಳಿರುವ ಎರಡನೇ ಕಥೆ. ಹಳ್ಳಿಯ ಸೊಡಗಿರುವ, ಹಳ್ಳಿಯ ಮುಗ್ದ, ಪವರ್ ಫುಲ್ ಸ್ಟ್ರಾಂಗ್ ಕ್ಯಾರೆಕ್ಟರ್ ಪ್ಲೇ ಮಾಡಬೇಕು ಎಂಬ ಮನಸ್ಸು ಇತ್ತು. ಎಲ್ಲರೂ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಿನಿಮಾ ಮುಗಿದ್ರು ನಿರ್ಮಾಪಕರು ಯಾರು ಎಂದು ಗೊತ್ತಿರಲಿಲ್ಲ. ಪ್ರೊಡಕ್ಷನ್ಸ್ ಹೌಸ್ ಮೀಟ್ ಮಾಡೋಣಾ ಎಂದು ರಾಜು ಸರ್ ಹೇಳುತ್ತಿದ್ದರು. ಮ್ಯಾಮ್ ಹಾಸನ್ ಮನೆಗೆ ಹೋದೆವು. ಮೀಟಿಂಗ್ ಮುಗಿಸಿ ಹೊರಟ ಬಳಿಕ ಮ್ಯಾಮ್ ಕಾಲಿಗೆ ಬಿದ್ದಾಗ ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ ಎಂದರು. ಮ್ಯಾಮ್ ಬ್ರ್ಯಾಗ್ರೌಂಡ್ ಇಲ್ಲದವರ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಸಿನಿಮಾ ಕಥೆಗೆ ಏನೋ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ. ಬಹಳ ಪ್ರೀತಿಯಿಂದ ಎಲ್ಲರೂ ಈ ಸಿನಿಮಾಗೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಟಿ ಕಾವ್ಯ ಮಾತನಾಡಿ, ಮೊದಲ ಸಿನಿಮಾ, ಕಿರಿತೆರೆಯಲ್ಲಿ ನಟಿದ್ದೇನೆ. ಚಿತ್ರ ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವ ಗೊಂದಲ ಇತ್ತು. ಚಿತ್ರ ಬಿಟ್ಟಿದ್ದರೆ ಮಿಸ್ ಮಾಡಿಕೊಳ್ಳುತ್ತಿದೆ ಎಂದರು

ನಿರ್ದೇಶಕ ಶ್ರೀರಾಜ್ ಮಾತನಾಡಿ, ಮೊದಲ ಬಾರಿಗೆ ಅವಕಾಶ ಕೊಟ್ಟಿರುವುದಕ್ಕೆ ಅಪ್ಪಾಜಿ-ಅಮ್ಮನಿಗೆ ಧನ್ಯವಾದ. ಅಮ್ಮನಿಗೆ ಕಥೆ ಜಡ್ಟ್ ಮೆಂಟ್ ಚೆನ್ನಾಗಿ ಮಾತನಾಡುತ್ತಾರೆ. ಆಗ ನಾನು ಕಥೆ ಹೇಳಿದೆ ಅವರು ಇದು ವರ್ಕ್ ಆಗಲ್ಲ ಎಂದರು. ನಾನು ಸಿನಿಮಾ ಮಾಡುವುದು ನನಗೆ ನಿನಗೆ ಮಾತ್ರ ಗೊತ್ತಿರಬೇಕು. ಯಾರಿಗೂ ಗೊತ್ತಾಗಬಾರದು ಎಂದು ಹೇಳಿದರು. ಕೊತ್ತಲವಾಡಿ ಒನ್ ಲೈನ್ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅದಕ್ಕೆ ಓಂಕಾರ ಹಾಕಿದರು. ಕಥೆ ಬರೆಯೋದಿಕ್ಕೆ ಎಂಟು ತಿಂಗಳು ಟೈಮ್ ತೆಗೆದುಕೊಂಡೆ. ಕಥೆ ಪೂರ್ತಿಯಾದಾಗ ಬಾ ಎಂದಿದ್ದರು. ಅಮ್ಮನಿಗೆ ಪೂರ್ತಿಯಾಗಿ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅಲ್ಲಿಂದ ಈ ಜರ್ನಿ ಶುರುವಾಯ್ತು ಎಂದರು.

ಗಮನ ಸೆಳೆದ ಟೀಸರ್

ಕೊತ್ತಲವಾಡಿ ಟೀಸರ್ ನಿರೀಕ್ಷೆಗಿಂತಲೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇಷ್ಟು ದಿನ ರೋಸ್ ಹಿಡಿಯುತ್ತಿದ್ದ ಪೃಥ್ವಿ ಈಗ ಕಂಪ್ಲೀಟ್ ರಗಡ್ ಹಾಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕ್ವಾಲಿಟಿ ಚೆನ್ನಾಗಿದೆ. ಕೊತ್ತಲವಾಡಿ ಎಂಬ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಶ್ರೀರಾಜ್ ಹೇಳೋದಿಕ್ಕೆ ಹೊರಟಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ಟೀಸರ್ ಹೈಲೆಟ್.

KOttalavadi

ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಪಿ ಎ ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ.

ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಪೃಥ್ವಿ ಅಂಬರ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಕೊತ್ತಲವಾಡಿ ಸಿನಿಮಾಗೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin