'Yava Mohana Murali Kairuithu' movie to release on March 27th

ಮಾರ್ಚ್ 27ಕ್ಕೆ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಬಿಡುಗಡೆ - CineNewsKannada.com

ಮಾರ್ಚ್ 27ಕ್ಕೆ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಬಿಡುಗಡೆ

ಶರಣಪ್ಪ ಗೌರಮ್ಮ ಮೊದಲಬಾರಿಗೆ ನಿರ್ಮಾಣ ಮಾಡಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿ ಮಾರ್ಚ್ 27ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ ರಷ್ಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೆಡಲ್ ಪಡೆದಿರುವ ಶರಣಪ್ಪ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೂಡ.

ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಯಿತು, ಈ ವೇಳೆ ಮಾತನಾಡಿದ ನಿರ್ಮಾಪಕ ಶರಣಪ್ಪ ಗೌರಮ್ಮ, ‘ಮಗಳಿಗಾಗಿ ಈ ಸಿನಿಮಾ ಮಾಡಿದ್ದು ಕಥೆ ಚನ್ನಾಗಿ ಇತ್ತು. ಹಾಗಾಗಿ ನಿರ್ಮಾಣ ಮಾಡಿದೆ. 10 ದಿನ ಶೂಟಿಂಗ್ ಬಾಕಿ ಇರುವಾಗ ಚಿತ್ರದಲ್ಲಿ ನಟಿಸಿರುವ ರಾಕಿ ಎಂಬ ನಾಯಿ ಆಕಸ್ಮಿಕವಾಗಿ ನಡೆದ ಆಕ್ಸಿಡೆಂಟ್ ನಲ್ಲಿ ನಿಧನವಾಯಿತು. ಚಿಕ್ಕವನಾಗಿದ್ದ ರಾಣಾ ನಾಯಿ ದೊಡ್ಡದು ಆಗುವವರೆಗೂ ಕಾದು ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ದೆವು ಹಾಗಾಗಿ ಸಿನಿಮಾ ತಡ ಆಯಿತು ಎಂದರು.

ನಾಯಿ ಪ್ರೇಮಿಗಳಿಗೆ ಈ ಸಿನಿಮಾ ತುಂಬಾ ಇಷ್ಟ ಆಗುತ್ತದೆ. ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಫ್ಯಾಮಿಲಿ ಕಥೆಯ ಸಿನಿಮಾವಿದು. ಮುಂದಿನ ದಿನಗಳಲ್ಲಿ ಕಿಕ್ ಬಾಕ್ಸಿಂಗ್ ಕುರಿತಾದ ಸಿನಿಮಾ ಮಾಡುವ ಪ್ಲ್ಯಾನ್ ಇದ್ದು, ಹೊಸಬರಿಗೆ ಸಿನಿಮಾ ಮಾಡಲು ರೆಡಿಯಾಗಿದ್ದೇನೆ. ಈಗಾಗಲೇ ಇನ್ನೆರಡು ಸಿನಿಮಾಗಳ ಕೆಲಸ ಮುಗಿದಿದ್ದು ಸದ್ಯದಲ್ಲೇ ಆಪ್ ಡೇಟ್ ಕೊಡುತ್ತೇನೆ’ ಎಂದು ಮಾಹಿತಿ ಹಂಚಿಕೊಮಡರು

ನಿರ್ದೇಶಕ ವಿಶ್ವಾಸ್ ಕೃಷ್ಣ ಮಾತನಾಡಿ,ನಿರ್ದೇಶನದ ಮೊದಲ ಚಿತ್ರ. ಸುಂದರ ಕಥೆ ಎಮೋಷನಲ್ ಜರ್ನಿ ಇದೆ. ಪೆಟ್ ಲವ್ವರ್ ಗೆ ತುಂಬಾ ಇಷ್ಟ ಆಗುತ್ತದೆ. ಫ್ಯಾಮಿಲಿ ಸಮೇತ ನೋಡಬೇಕಾದ ಸಿನಿಮಾ’ ಎಂದರು.

ಚಿತ್ರದ ಮುಖ್ಯ ಪಾತ್ರದಲ್ಲಿ ಕುಮಾರಿ ಪ್ರಕೃತಿ ಅಭಿನಯಿಸಿದ್ದಾರೆ. ಕೂಡ ಕಿಕ್ ಬಾಕ್ಸಿಂಗ್ ನಲ್ಲಿ ಎರಡು ಇಂಟರ್ ನ್ಯಾಷನಲ್ ಪದಕ ಪಡೆದಿದ್ದಾರೆ.

ಬಾಲಕಿಯ ತಂದೆಯಾಗಿ ಮಾಧವ, ತಾಯಿಯಾಗಿ ಸ್ವಪ್ನ ಶೆಟ್ಟಿಗಾರ ಬಣ್ಣ ಹಚ್ಚಿದ್ದಾರೆ. ಪಟೇಲ್ ವರುಣ್ ರಾಜ್ ಸಹ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅನಿಲ ಸಿ.ಜೆ ಸಂಗೀತ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಾಣಾ ಹಾಗೂ ರಾಕಿ ಎಂಬ ನಾಯಿಗಳು ಅಭಿನಯ ಮಾಡಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin