ಯುವ ಪ್ರತಿಭೆಗಳ “ಅಮೃತ ಅಂಜನ್” ಚಿತ್ರ ಜನವರಿ 30ರಂದು ರಾಜ್ಯಾದ್ಯಂತ ತೆರೆಗೆ
ಯುವ ಪ್ರತಿಭೆಗಳ ತಂಡ ಸೇರಿಕೊಂಡು “ಅಮೃತ ಅಂಜನ್” ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಇದೇ ತಿಂಗಳ 30ರಂದು ರಾಜ್ಯದ್ಯಂತ ಬಿಡುಗಡೆ ಆಗಲಿದೆ.

ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಹಿರಿಯ ನಟಿ ಜಯಮಾಲಾ ಚಿತ್ರದ ಬಿಡಿಗಡೆ ಮಾಡಿ ಸುಧಾಕರ್ ಬಹಳ ಪ್ರತಿಭಾವಂತರ ನಟ.ಒಮ್ಮೆ ಅವರ ತಂಡ ಮಾಡಿದಂತಹ ವೆಬ್ ಸೀರೀಸ್ ನೋಡಿದೆ ಎರಡುವರೆ ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಕಲಾವಿದರು , ನಿರ್ದೇಶಕರು, ತಂತ್ರಜ್ಞರಿಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ನಿರ್ಮಾಪಕ ಲೋಕೇಶ್ ಮಾತನಾಡಿ, ನಾನೊಬ್ಬನೇ ನಿರ್ಮಾಪಕನೆಲ್ಲ ನನ್ನ ಜೊತೆ ಇನ್ನೊಬ್ಬರು ಸಾಥ್ ನೀಡಿದ್ದಾರೆ. ಚಿತ್ರದಿಂದ ಹಣ ಬರುತ್ತೆ ಎಂದು ನಿರೀಕ್ಷೆ ಮಾಡಿಲ್ಲ. ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಎಂದಿದ್ದೇನೆ. ಚಿತ್ರ ಚೆನ್ನಾಗಿದ್ದಾರೆ ಖಂಡಿತ ಎಲ್ಲರೂ ಬೆಂಬಲ ನೀಡುತ್ತಾರೆ ಎಂದರು
ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡಿ ಅಮೃತ ಅಂಜನ್ ಚಿತ್ರ ಸಂಪೂರ್ಣ ಕಾಮಿಡಿ ಚಿತ್ರ , 80 ಪರ್ಸೆಂಟ್ ಹಾಸ್ಯ , 20 ಪರ್ಸೆಂಟ್ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ. ಪ್ರೀತಿ, ಸ್ನೇಹ , ಸಂಬಂಧಗಳ ಜೊತೆಗೆ ಹಾಸ್ಯದ ಲೇಪನದೊಂದಿಗೆ ಎರಡು ಹಾಡು, ಫೈಟ್ ಗಳು ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂತ ಅಂಶ ಒಳಗೊಂಡಿದೆ. ನೈಜಕ್ಕೆ ಪೂರಕವಾಗಿ ಬರಬೇಕೆಂದು ಬಹಳಷ್ಟು ಶ್ರಮಪಟ್ಟು ಎಲ್ಲರೂ ಕೆಲಸ ಮಾಡಿದ್ದೇವೆ ಎಂದು ಹೇಳಿದರು

ನಟ ಸುಧಾಕರ್ ಗೌಡ ಮಾತನಾಡಿ ಇಷ್ಟಪಟ್ಟು ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಜೀರೋ ಇಂದ ಮಟ್ಟಕ್ಕೆ ಬಂದಿದ್ದೇವೆ. ಚಿತ್ರರಂಗದಲ್ಲಿ ಬೆಳೆಯಬೇಕೆಂದು ಬಂದಿರುವವರು ಹರಸಿ ಬೆಳೆಸಿ ಎಂದು ಕೇಳಿಕೊಂಡರು.
ನಟ ಗೌರವ ಶೆಟ್ಟಿ ಮಾತನಾಡಿ ಸಂಪೂರ್ಣ ಹಾಸ್ಯ ಭರಿತ ಮನೋರಂಜನೆಯ ಚಿತ್ರ. ಇಡೀ ತಂಡ ಬಹಳ ಶ್ರಮಪಟ್ಟು ಕೆಲಸ ಮಾಡಿದೆ. ಕುಡುಕನ ಪಾತ್ರ ಎಂದರು
ನಟಿ ಪಾಯಲ್ ಚಂಗಪ್ಪ ಮಾತನಾಡಿ ಹೊಸಬರಿಗೆ ಅವಕಾಶ ಕೊಡುವುದು ಬಹಳ ಕಷ್ಟ , ಕಿರುಚಿತ್ರದಲ್ಲೂ ಅಭಿನಯಿಸಿದ್ದೇನೆ. ಈಗ ಸಿನಿಮಾದಲ್ಲೂ ಉರಿ ಎಂಬ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದಲ್ಲಿ ಲವ್ ಸ್ಟೋರಿ , ಕಾಲೇಜು ಕಥೆ , ಫ್ಯಾಮಿಲಿ ಕಂಟೆಂಟ್ ಎಲ್ಲವೂ ಒಳಗೊಂಡಿದೆ ಎಂದು ಹೇಳಿದರು

ನಟಿ ಶ್ರೀ ಭವ್ಯ ಮಾತನಾಡಿ ಅಮೃತಂಜನ್ ಹಚ್ಚಿಕೊಂಡು ಎರಡು ಐಡಿಯಾ ಕೊಟ್ಟಿದ್ದೆ ಕಿರು ಚಿತ್ರದಲ್ಲಿ , ಈಗ ಸಿನಿಮಾದಲ್ಲಿ ಬಹಳಷ್ಟು ಐಡಿಯಾಗಳನ್ನು ನೀಡಿದ್ದೇನೆ ಎಂದರು
ಕಲಾವಿದರಾದ ಕಾರ್ತಿಕ್, ಹಾಡನ್ನು ಬರೆದ ವೆಂಕಟೇಶ್ ಕುಲಕರ್ಣಿ ಅಭಿಪ್ರಾಯಗಳನ್ನು ಹಂಚಿಕೊಂಡರು.ಹಿರಿಯ ನಟ ನವೀನ್. ಡಿ. ಪಡೀಲ್ , ಮಧುಮತಿ ಹಾಗೂ ಮುಂತಾದವರು ಅಭಿನಯಿಸಿದ್ದು, ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಗ್ರಹಣ , ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ

