Movie Review : Thimmaiah and Thimmaiah
ತಾತ ಮೊಮ್ಮಗನ ಭಾವನಾತ್ಮಕ ಸೆಳೆತ
ಚಿತ್ರ: ತಿಮ್ಮಯ್ಯ ಅಂಡ್ ತಿಮ್ಮಯ್ಯ
ನಿರ್ದೇಶನ: ಸಂಜಯ್ ಶರ್ಮಾ
ತಾರಾಗಣ: ಅನಂತ್ ನಾಗ್, ದಿಗಂತ್, ಐಂದ್ರಿತಾ ರೇ, ಶುಭ್ರ ಅಯ್ಯಪ್ಪ, ಪ್ರಕಾಶ್ ತಮ್ಮಿನಾಡು ಮತ್ತಿತರರು
ರೇಟಿಂಗ್ : * 3/5
ತಾತ ಮೊಮ್ಮಗನ ಭಾವನಾತ್ಮಕ ಸಂಬಂಧ, ಸನ್ನಿವೇಶಗಳ ತಿರುಳಿಗೆ ರೋಮಾಂಚನಕಾರಿ ಸನ್ನಿವೇಶಗಳ ಹೂರಣ ತುಂಬಿ ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ “ತಿಮ್ಮಯ್ಯ ಅಂಡ್ ತಿಮ್ಮಯ್ಯ”.
ತಾತ ಮೊಮ್ಮೊಗನ ವೈರುದ್ಯದ ಭಾವನೆಗಳನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ನಿರ್ದೇಶಕ ಸಂಜಯ್ ಶರ್ಮಾ ತೆರೆಯ ಮೇಲೆ ನಿರೂಪಿಸುವ ಕೆಲಸ ಮಾಡಿದ್ದಾರೆ.
ಬಹಳ ವರ್ಷಗಳ ನಂತರ ತಾತ (ಅನಂತ್‍ನಾಗ್) ನನ್ನು ಭೇಟಿ ಮಾಡುವ ಮೊಮ್ಮಗ (ದಿಂಗತ್) ಭಾವನಾತ್ಮಕ ಸನ್ನಿವೇಶಗಳ ಸೆಳತ ಮಿಳಿತವಿದೆ. ಇದರ ಜೊತೆಗೆ ಉಡಾಫೆ ಆಟೋಟವೂ ಇದೆ.

