Review: Krishnam Prayana Sakhi is a cute love story visual poem

Review: ಕೃಷ್ಣಂ ಪ್ರಯಣ ಸಖಿ ಮುದ್ದಾದ ಪ್ರೇಮ ಕಥನದ ದೃಶ್ಯಕಾವ್ಯ - CineNewsKannada.com

Review: ಕೃಷ್ಣಂ ಪ್ರಯಣ ಸಖಿ ಮುದ್ದಾದ ಪ್ರೇಮ ಕಥನದ ದೃಶ್ಯಕಾವ್ಯ

ಚಿತ್ರ: ಕೃಷ್ಣಂ ಪ್ರಣಯ ಸಖಿ
ನಿರ್ದೇಶನ: ಶ್ರೀನಿವಾಸ ರಾಜು
ನಿರ್ಮಾಣ: ಪ್ರಶಾಂತ್ ರುದ್ರಪ್ಪ
ತಾರಾಗಣ: ಗಣೇಶ್‍, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ಶಶಿಕುಮಾರ್, ಶ್ರುತಿ, ರಂಗಾಯಣ ರಘು, ಸಾಧು ಕೋಕಿಲ, ಶ್ರೀನಿವಾಸಮೂರ್ತಿ , ಗಿರೀಶ್ ಶಿವಣ್ಣ ಮತ್ತಿತತರು
ರೇಟಿಂಗ್ ‘ *** 3.5 / 5

ಪ್ರೇಮ ಕಥಾ ವಸ್ತುಗಳಿಂದ ಗಮನ ಸೆಳೆದ ರೋಮಾಂಟಿಕ್ ಚಿತ್ರಗಳ ಸರದಾರ ಗೋಲ್ಡನ್ ಸ್ಟಾರ್ ಗಣೇಶ್ , ಮತ್ತೊಂದೆಡೆ ಅಪರಾಧಗಳ ಕಥಾ ವಸ್ತುವಿನ ವೈಭವೀಕರಣದಿಂದ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಭದ್ರಪಡಿಸಿಕೊಂಡವರು ನಿರ್ದೇಶಕ ಶ್ರೀನಿವಾಸ ರಾಜು, ಇಂತಹ ಎರಡು ವಿಭಿನ್ನ ದೃಷ್ಟಿ ಕೋನದ ಮಂದಿ ಸಿನಿಮಾ ಮಾಡ್ತಾರೆ ಅಂದರೆ ಯಾವ ರೀತಿಯ ಸಿನಿಮಾ ಮಾಡಬಹುದು ಎನ್ನುವ ಕುತೂಹಲ ಸಹಜ.

ಈ ರೀತಿಯ ಸಹಜ ಕುತೂಹಲ ಪ್ರೇಕ್ಷಕರಿಗೆ ಮಾತ್ರವಲ್ಲಿ ನಿರ್ದೇಶಕ ಶ್ರೀನಿವಾಸ ರಾಜು ಹಾಗು ಗಣೇಶ್ ಅವರಲ್ಲಿ ಇದ್ದರೂ ಆಶ್ಚರ್ಯವಿಲ್ಲ. ಆದರೆ ಯಾರೂ ನಿರೀಕ್ಷೆಯೂ ಮಾಡದ ರೀತಿ ನಿರ್ದೇಶಕ ಶ್ರೀನಿವಾಸ ರಾಜು, ನಟ ಗಣೇಶ್ ಅವರಿಗಾಗಿ ” ಕೃಷ್ಣಂ ಪ್ರಣಯ ಸಖಿ” ಚಿತ್ರದ ಮೂಲಕ ಕುಟುಂಬದ ಸಮೇತ ಮನೆ ಮಂದಿಯೆಲ್ಲಾ ನೋಡಬಹುದಾದ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಒಂದಷ್ಟು ತಿರುವು ಕುತೂಹಲಗಳನ್ನು ಜೊತೆಯಲ್ಲಿಟ್ಟುಕೊಂಡು ಪ್ರೇಮಮಯ ದೃಶ್ಯ ಕಾವ್ಯವನ್ನು ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಬಹು ವರ್ಷಗಳ ಬಳಿಕ ಮತ್ತೊಂದು ಮುದ್ದಾದ ಪ್ರೇಮಕಥಾ ಸಿಕ್ಕಿದೆ. ಅಷ್ಟೇ ಅಲ್ಲ ಜನ ಕೂಡ ಅಪ್ಪಿ,ಒಪ್ಪಿದ್ದಾರೆ.

ಕೂಡು ಕುಟುಂಬದ ಕುಡಿ ಕೃಷ್ಞ ( ಗಣೇಶ್) ಗೆ ವಯಸ್ಸು ಮುವತ್ತು ದಾಟಿದ್ದರೂ ಮದುವೆ ಆಗುವ ಯೋಗ ಕೂಡಿ ಬಂದಿರುವುದಿಲ್ಲ. ಅದಕ್ಕೆ ಮನೆಯಲ್ಲಿ ಅವರದೇ ಆದ ಕಟ್ಟು ಪಾಡು ಮತ್ತು ಆಯ್ಕೆಗಳು. ಒಬ್ಬರಿಗೆ ಇಷ್ಟವಾದವರು ಮತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ‌ ಮದುವೆ ಮುಂದಕ್ಕೆ ಹೋಗುತ್ತಿರುತ್ತದೆ.

ಇಂತಹ ಕೃಷ್ಣನಿಗೆ ಪ್ರಣಯ (ಮಾಳವಿಕಾ ನಾಯರ್) ಮೇಲೆ ಪ್ರೀತಿ ಅಂಕುರವಾಗುತ್ತದೆ. ಆಕೆಯೋ ಅನಾಥೆ. ಆಶ್ರಮದಲ್ಲಿ ಬದುಕು ಸಾಗಿಸುವಾಕೆ..ಆಕೆಯ ಮನವೊಲಿಸಲು ಇನ್ನಿಲ್ಲದ ಕಸರತ್ತು ಮಾಡ್ತಾನೆ. ಮೊದಲೇ ಹೇಳಿ ಕೇಳಿ ಶ್ರೀಮಂತ ಮನೆತನದಿಂದ ಬಂದ ಕೃಷ್ಣ ತಾನು ಪ್ರೀತಿಸುವ ಹುಡುಗಿಗಾಗಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡು ಆಕೆಯನ್ನು ಒಲೈಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಾನೆ.

ಪ್ರೀತಿಸುವ ಹುಡುಗಿಯನ್ನು ಕೃಷ್ಣ ಮದುವೆ ಆಗ್ತಾನ, ಇಲ್ಲ ಕೃಷ್ಣನ ಲೀಲೆಗಳು ಏನೇನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ನಿರ್ದೇಶಕ ಶ್ರೀನಿವಾಸ ರಾಜು, ಮುದ್ದಾದ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ, ಬಹಳ ದಿನಗಳ ನಂತರ ಗಣೇಶ್ ಅವರಿಗೆ ಜನರು ನೋಡುವ ಚಿತ್ರ ಕೊಟ್ಟಿದ್ದಾರೆ ಅದರಲ್ಲಿ ಯಶಸ್ಸು ಗಳಿಸಿದ್ದಾರೆ.

ಚಿತ್ರದಲ್ಲಿ ನಟ ಗಣೇಶ್,ನಿರ್ದೇಶಕ ಶ್ರೀನಿವಾಸ ರಾಜು ‌ಅವರ ಜೊತೆ ಮುದ್ದಾದ ಹಾಡುಗಳ ಮೂಲಕ ಮೋಡಿ ಮಾಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಮೊದಲ ಬಾರಿಗೆ ನಟನೆಯಲ್ಲಿ ಗಮನ ಸೆಳದ ಮಾಳವಿಕ ನಾಯರ್ ಚಿತ್ರದ ಪ್ರಮುಖ ಆಧಾರ್ ಸ್ಥಂಭಗಳು ಎಂದರೆ ತಪ್ಪಾಗಲಾರದು.

ಉಳಿದಂತೆ ಹಿರಿಯ ಕಲಾವಿದರಾದ ರಂಗಾಯಣ ರಘು, ಶಶಿಕುಮಾರ್, ಸಾಧು ಕೋಕಿಲ, ಶ್ರೀನಿವಾಸಮೂರ್ತಿ , ಗಿರೀಶ್ ಶಿವಣ್ಣ, ಶರಣ್ಯ ಮತ್ತಿತರು ಪಾತ್ರದ ಮೂಲಕ. ಗಮನ ಸೆಳೆದಿದ್ದಾರೆ.

ನಟ ಗಣೇಶ್ ಅಭಿಮಾನಿಗಳು ಬಹುದಿನದಿಂದ ಎದುರು ನೋಡುತ್ತಿದ್ದ ಸಮಯ ಇದು. ಚಿತ್ರ ಅಭಿಮಾನಿಗಳು ಕೊಟ್ಟ ಕಾಸಿಗೆ ಮೋಸ ಮಾಡದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin