Marnami Movie Review: ಸೇಡಿನಲ್ಲಿ ಬೆಂದು ರಕ್ತದೋಕುಳಿ ಹರಿಸಿದ ಕರಾವಳಿ ಭಾಗದ ಚಿತ್ರ “ಮಾರ್ನಮಿ”
ನಿರ್ದೇಶನ : ರಿಷಿತ್ ಶೆಟ್ಟಿ
ತಾರಾಗಣ: ರಿತ್ವಿಕ್ ಮಠದ್, ಚೈತ್ರಾ ಆಚಾರ್, ಪ್ರಕಾಶ್ ತಮಿನಾಡು, ಸುಮನ್ ತಲ್ವಾರ್, ಸೋನುಗೌಡ, ರಾಧಾ ರಾಮಚಂದ್ರ, ಜ್ಯೋತಿಶ್ ಶೆಟ್ಟಿ, ಸ್ವರಾಜ್ ಶೆಟ್ಟಿ ಮತ್ತಿತರರು
ರೇಟಿಂಗ್ : *** 3.5/5
ಮಗನ ಕಾಯಿಲೆ ಗುಣವಾದರೆ ಮಾರ್ನಮಿ ದಿನ ದೇವಿಯ ಮುಂದೆ ಮಗನಿಗೆ ಹುಲಿ ವೇಷ ಹಾಕಿಸಿ ನಲಿಸುತ್ತೇವೆ ಅಮ್ಮ..
ಅಮ್ಮ, ನಿಂಗೆ ಎಂತದು ಆಗಲ್ಲ, ಅಮ್ಮ,,,
ಈ ಎರಡು ಸನ್ನಿವೇಶಗಳು ಅಮ್ಮ-ಮಗನ ಬಾಂಧವ್ಯಕ್ಕೆ ಕನ್ನಡಿ ಹಿಡಿದಿದೆ.
ಮತ್ತೊಂದೆಡೆ ಹೆಂಡ್ತಿ ಮಗು ಆರೋಗ್ಯದಿಂದ ಬಂದರೆ ಹುಲಿ ವೇಷ ಹಾಕಿ ಅಮ್ಮನ ತೇರು ಮುಂದೆ ಕುಣಿತೀನಿ. ಗರ್ಭಿಣಿ ಪತ್ನಿ ಮತ್ತು ಹೊಟ್ಟೆಯಲ್ಲಿರುವ ಕಂದನ ಉತ್ತಮ ಆರೋಗ್ಯಕ್ಕಾಗಿ ಪತಿ ಹರಕೆ ಮಾಡಿಕೊಳ್ಳುವುದು ಮತ್ತೊಂದು ಸನ್ನಿವೇಶ.
ತುಳುನಾಡಿನ ಆಚಾರ, ವಿಚಾರ, ಕಲೆ, ಸಂಸ್ಕøತಿ ಮತ್ತು ಸೊಗಡನ್ನು ಬಿಂಬಿಸುವ ಚಿತ್ರ “ಮಾರ್ನಮಿ”. ಚಿತ್ರದಲ್ಲಿ ಅಮ್ಮ-ಮಗನ ಬಾಂಧವ್ಯವಿದೆ, ಮುದ್ದಾದ ಪ್ರೀತಿ, ಅದಕ್ಕೆ ಅಡ್ಡಿ ಪಡಿಸುವ ಒಂದಷ್ಟು ಮಂದಿ, ಹುಲಿ ವೇಷ ಅದರ ಹಿಂದಿನ ಕಿತಾಪತಿ, ಗಲಾಟೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ.
ಕರಾವಳಿ ಭಾಗದ ಕಥೆ ಮುಂದಿಟ್ಟುಕೊಂಡು ಇತ್ತೀಚೆಗೆ ಒಂದರ ಹಿಂದೆ ಒಂದು ಚಿತ್ರಗಳು ತೆರೆಗೆ ಬರುತ್ತಿವೆ, ಇತ್ತೀಚೆಗಷ್ಟೇ ರಾಜ್ ಬಿ ಶೆಟ್ಟಿ ಅಭಿನಯದ ಸು ಫ್ರಂ ಸೋ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಈಗ ತುಳುನಾಡು ಭಾಗದ ಕತೆಯನ್ನು ಮುಂದಿಟ್ಟುಕೊಂಡು ಮತ್ತೆ ಮತ್ತೊಂದು ಚಿತ್ರ “ ಮಾರ್ನಮಿ”ಯನ್ನು ನಿರ್ದೇಶಕ ರಿಷಿತ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ.
ಅಮ್ಮ ಗಿರಿಜಾ (ಸೋನುಗೌಡ) ಮಗ ಚೇತು (ರಿತ್ವಿಕ್ ಮಠದ್) ಎಂದರೆ ಎಲ್ಲಿಲ್ಲದ ಪ್ರೀತಿ, ಮಗನಿಗೆ ಅಪ್ಪ-ಅಮ್ಮ ಎಲ್ಲವೂ ಆಗಿ ಬೆಳಸಿದಾಕೆ ಕ್ಷಯದಿಂದ ಅಮ್ಮ ಸಾವನ್ನಪ್ಪಿದಾಗ ಒಬ್ಬಂಟಿಯಾಗುವ ಚೇತುನನ್ನು ಮಾವ ವಸಂತ (ಪ್ರಕಾಶ್ ತಮಿನಾಡು) ಪ್ರೀತಿ ಅಕ್ಕರೆಯಿಂದ ಬೆಳಸಿದವ. ಈ ಮದ್ಯೆ ದೀಕ್ಷಾ (ಚೈತ್ರ ಜೆ ಆಚಾರ್)ಗೆ ಚೇತು ಮೇಲೆ ಪ್ರೀತಿ, ಕಾಡಿ ಬೇಡಿ ಮನೆಯವರ ವಿರೋದ ಕಟ್ಟಿಕೊಂಡ ಮದುವೆ ಆಗ್ತಾಳೆ.
ಎಲ್ಲವೂ ಸಲೀಸು ಮುದ್ದಾದ ಯುವ ಜೋಡಿ ಅನೋನ್ಯವಾಗಿರುತ್ತಾರೆ. ಎನ್ನುವಾಗ ಹುಲಿ ವೇಷ ಕುಣಿತದಿಂದ ಉಂಟಾದ ಕಿರಿಕಿರಿ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಅಲ್ಲಿಂದ ಕತೆ ಮತ್ತೊಂದು ಮಗ್ಗಲು ಪಡೆದುಕೊಂಡು ಹೊಡೆದಾಟ, ಬಡಿದಾಟ,ರಕ್ತಪಾತದ ಓಕುಳಿ ಆಡಿದೆ. ಅಮ್ಮನ ಬದುಕಿಸಿಕೊಳ್ಳಲು ಆಗದಿದ್ದಾಗ ಹುಲಿ ವೇಷ ತೊಟ್ಟು ಕುಣಿಯುವುದನ್ನು ನಿಲ್ಲಿಸಿದ್ದ ಚೇತು ಹೆಂಡತಿ, ಮಗಳ ಆರೋಗ್ಯಕ್ಕಾಗಿ ಹುಲಿ ವೇಷ ತೊಡುವ ಹರಕೆ ಕಟ್ಟಿಕೊಳ್ಳುತ್ತಾನೆ, ಅದನ್ನು ಆತ ಪೂರೈಸುತ್ತಾನಾ, ಪ್ರೀತಿಯಿಂದ ಮದುವೆ ಮಾಡಿಕೊಂಡ ದೀಕ್ಷಾ ಉಲ್ಟಾ ಹೊಡಿದಿದ್ದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ರಿಷಿತ್ ಶೆಟ್ಟಿ ಕರಾವಳಿಯವರೇ ಆಗಿರುವುದರಿಂದ ಆ ಭಾಗದ ಭಾಷೆ, ಆಚಾರ,ವಿಚಾರವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ, ಆದರೆ ಕೆಲವು ಸನ್ನಿವೇಶಗಳು ಪುನರಾವರ್ತಿತವಾಗಿವೆ, ಇನ್ನೂ ಕೆಲವು ಸನ್ನಿವೇಶಗಳನ್ನು ಎಳೆಯುವ ಅಗತ್ಯವಿರಲಿಲ್ಲ, ಒಂದಷ್ಟು ಸನ್ನಿವೇಶಕ್ಕೆ ಕತ್ತರಿ ಹಾಕಿದ್ದರ ಇನ್ನಷ್ಟು ಚೆಂದವಿದ್ದ ಸಿನಿಮಾವನ್ನು ನೀಡಬಹುದಿತ್ತು.
ನಟ ರಿತ್ವಿಕ್ ಮಠದ್, ನಟಿ ಚೈತ್ರಾ ಆಚಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಮೊದಲರ್ದದಲ್ಲಿ ಚೈತ್ರಾ ಲವಲವಿಕೆಯಿಂದಲೇ ಹಳ್ಳಿ ಹುಡುಗಿಯಾಗಿ ಮನ ಗೆದ್ದಿದ್ದಾರೆ. ರಿತ್ವಿಕ್ ಕೂಡ ಸಿಕ್ಕ ಪಾತ್ರಕ್ಕೆ ಜೀವ ತುಂಬಿದಿದ್ದಾರೆ.
ಪ್ರಕಾಶ್ ತುಮಿನಾಡು ಪಾತ್ರ ಗಮನ ಸೆಳೆದಿದೆ. ಹಿರಿಯ ನಟ ಸುಮನ್ ತಲ್ವಾರ್ ಅವರನ್ನು ಬಂದು ಹೋಗು ಪಾತ್ರಕಷ್ಟೇ ಸೀಮಿತಗೊಳಿಸಿದ್ಧಾರೆ,ಅವರನ್ನು ಮತ್ತಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು
ಚರಣ್ ರಾಜ್ ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿದೆ, ಶೀವಸೇನ ಛಾಯಾಗ್ರಾಹಣ ಚಿತ್ರಕ್ಕೆ ಪೂರಕವಾಗಿದೆ.
ರಕ್ತದೋಕುಳಿಯಲ್ಲಿ ಮಿಂದ ಮಾರಣ ಹೋಮದ ಕರಾವಳಿ ಭಾಗದ ಮತ್ತೊಂದು ಕಥನ ಮಾರ್ನಮಿ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

