Karikaada Movie Review: ಹೊಸ ಬಗೆಯ ಕಂಟೆಂಟು ಮೂಲಕ ಗಮನ ಸೆಳೆದ “ಕರಿಕಾಡ”
ಚಿತ್ರ : ಕರಿಕಾಡ
ನಿರ್ದೇಶಕ : ಕೆ.ವೆಂಕಟೇಶ್
ತಾರಾಗಣ : ಕಾಡ ನಟರಾಜ್, ನಿರೀಕ್ಷಾ ಶೆಟ್ಟಿ, ಯಶ್ ಶೆಟ್ಟಿ, ವಿಜಯ್ ಚಂಡೂರ್, ಬಾಲರಾಜವಾಡಿ, ವಿಪಿನ್ ಪ್ರಕಾಶ್, ಬೇಬಿ ರಿದ್ದಿ, ರಶ್ಮಿ ಮತ್ತಿತರರು
ರೇಟಿಂಗ್ : *** 3.5/ 5
ಕನ್ನಡದಲ್ಲಿ ಇತ್ರೀಚೆಗೆ ಹೊಸ ಹೊಸ ಮಾದರಿಯ ಚಿತ್ರಗಳು ಹೊಸತನದ ನಿರೂಪಣೆ,ಕಂಟೆಂಟು ಸೇರಿದಂತೆ ವಿಭಿನ್ನತೆಗೆ ಒತ್ತು ನೀಡಿದ ಚಿತ್ರಗಳು ತೆರೆಗೆ ಬರುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಅದುವೇ “ಕರಿಕಾಡ”.
ದಟ್ಟ ಕಾನನದ ನಡುವಿನ ಊರಿನಲ್ಲಿ ವಾಸಿಸುವ ಜನರ ಬದುಕು, ಬವಣೆ, ಗೆಳೆತನ, ಸ್ನೇಹ, ಪ್ರೀತಿ, ದ್ವೇಷ, ಪ್ರಾಣಿ ಬೇಟೆ, ಕುತಂತ್ರ, ಮುದ್ದು,ಗುಂಡಿನ ಸದ್ದಿನ ಸುತ್ತ ನಡೆಯುವ ರೋಮಾಂಚನಕಾರಿ ದೃಶ್ಯ ವೈಭವದ ಸೊಬಗನ್ನು ಕುತೂಹಲಕಾರಿಯಾಗಿ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ.ವೆಂಕಟೇಶ್
ಮನರಂಜನೆಯನ್ನು ಪ್ರಧಾನವಾಗಿರಿಸಿಕೊಂಡು ಆಕ್ಷನ್, ಥಿಲ್ಲರ್, ಮೂಲಕ ನಟ ಕಾಡ ನಟರಾಜ್ ಚಿತ್ರದುದ್ದಕ್ಕೂ ಅಬ್ಬರಿಸಿದ್ದಾರೆ. ಪ್ರೀತಿ, ಸ್ನೇಹ ಮಮತೆ, ಮಮಕಾರ ಸೇರಿದಂತೆ ಒಂದಷ್ಟು ಒಂದಷ್ಟು ವಿಷಯಗಳ ಮೂಲಕ ಗಮನ ಸೆಳೆಯುವ ಕುತೂಹಲಕಾರಿ ವಿಷಯವನ್ನು ಕಡೆತನಕ ನೋಡಿಕೊಂಡು ಹೋಗುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ಸು ಕಂಡಿದ್ದಾರೆ.
ಕಳಸಾಪುರದ ಊರಿನಲ್ಲಿ ಕಾಡ ( ಕಾಡ ನಟರಾಜ್) ಜೋಳ ಕಾಯುವ ಕೆಲಸ, ಮುದ್ದಾದ ಹುಡುಗಿ ಕನಕ (ನಿರೀಕ್ಷಾ ಶೆಟ್ಟಿ) ಮೇಲೆ ಕಾಡನಿಗೆ ಎಲ್ಲಿಲ್ಲದ ಪ್ರೀತಿ. ಕಾಡ ಮಾತಿನಲ್ಲಿ ಒರಟನಾದರೂ ಮನಸ್ಸು ಮಾತ್ರ ಮೃದು. ಇಂತವನಿಗೆ ಕನಕನ ಮೇಲೆ ಪ್ರೀತಿಯ ಬೀಜ ಅಂಕುರೊಡೆಯುತ್ತದೆ.
ಊರ ಗೌಡರ ಮಗ ಕಾಂತನ (ವಿಪಿನ್ ಪ್ರಕಾಶ್)ನೊಂದಿಗೆ ಬೇಟೆಗೆ ಸಜ್ಜಾಗುತ್ತಾನೆ. ಸ್ನೇಹಿತ ಸೀನ (ವಿಜಯ್ ಚಂಡೂರ್) ಸೇರಿದಂತೆ ತನ್ನದೇ ಬಳಗದ ಜೊತೆಗೆ ಹಂದಿ ಬೇಟೆಯಾಡಲು ಹಾತೊರೆಯುತ್ತಾರೆ. ಮಾವ ಭೂಪತಿ (ಬಾಲ ರಾಜ್ವಾಡಿ) ಮಗ ಕಾಂತನಿಗೆ ಒಡಹುಟ್ಟ ತಂಗಿ ಮಗಳು ಕನಕಳನ್ನು ಮದುವೆ ಮಾಡಿಸುವ ಆಸೆ. ಈ ನಡುವೆ ಸೀನನ ತಂಗಿ ಕೂಡ ಕಾಡನನ್ನು ಪ್ರೀತಿಸುತ್ತಾಳೆ.ಇಂತಹ ಸಮಯದಲ್ಲಿ ಕಾಡನ ಆಯ್ಕೆ ಏನು. ಕಾಡ ಮುಂದೇಗುತ್ತಾನೆ ಎನ್ನುವುದು ಕುತೂಹಲಕಾರಿ ಸಂಗತಿ
ಚಿತ್ರದಲ್ಲಿ ಕಾಡುವ ಕುತೂಹಲಕಾರಿ ಸಂಗತಿ ಒಂದೆಡೆಯಾದರೆ ಕಾಡನ ಮೇಲೆ ಕೋಪ ಯಾಕೆ ಅವನನ್ನು ಕೊಲ್ಲಿಸುವ ಮನಸ್ಸು ಮಾಡಿದ್ದಾರು ಏಕೆ. ಇದರ ನಡುವೆ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.
ನಿರ್ದೇಶಕ ಕೆ ವೆಂಕಟೇಶ್, ರೋಚಕ ಕಥಾಹಂದರವಿರುವ ಚಿತ್ರವನ್ನು ಪ್ರೇಕ್ಷಕ ಮತ್ರಷ್ಡು ಕುತೂಹಲಕಾರಿಯಾಗಿ ಕಡೆ ತನಕ ನೋಡಿಸಿಕೊಂಡು ಹೋಗುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ವಿಭಿನ್ನ ಬಗೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ನಾಯಕ ಕಾಡ ನಟರಾಜ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದು ನಟನೆಯ ಜೊತೆಗೆ ಲುಕ್, ಆಕ್ಷನ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸೈ ಎನಿಸಿಕೊಂಡಿದ್ದಾರೆ.ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಟ ಸಿಕ್ಕಂತಾಗಿದೆ.
ನಟಿ ನಿರೀಕ್ಷಾ ಶೆಟ್ಟಿ ಪಾತ್ರದ ಕಡೆ ಇನ್ನೊಂದಿಷ್ಟು ಗಮನ ಹರಿಸಿದ್ದರೆ ಚೆಂದ ಇತ್ತು.ಅದರೂ ಅವರನ್ನು ಕಡೆಗಣಿಸುವಂತಿಲ್ಲ.
ಉಳಿದಂತೆ ಯಶ್ ಶೆಟ್ಟಿ , ವಿಜಯ್ ಚೆಂಡೂರ್,ಬಾಲ ರಾಜವಾಡಿ ವಿಪಿನ್ ಪ್ರಕಾಶ್, ಬೇಬಿ ರಿದ್ದಿ, ಹರ್ಷಿತ್ ಶಂಕರ್, ಗೋವಿಂದೇಗೌಡ, ಚಂದ್ರಪ್ರಭ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಚಿತ್ರಕ್ಕೆ ಜೀವನ್ ಗೌಡ ಛಾಯಾಗ್ರಹಣ, ಅತಿಶಯ್ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಪೂರಕವಾಗಿದೆ. ಚಿತ್ರ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ.ವಿಭಿನ್ನ ಬಗೆಗೆ ಅನುಭವವನ್ನು ಕರಿಕಾಡ ನೀಡುವಲ್ಲಿ ಎರಡು ಮಾತಿಲ್ಲ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

