Sita Payana Movie Review: A film that reflects family bonds

Sita Payana Movie Review ಕೌಟಂಬಿಕ ಬಾಂಧವ್ಯಕ್ಕೆ ಕನ್ನಡಿ ಹಿಡಿದ ಚಿತ್ರ ” ಸೀತಾ ಪಯಣ - CineNewsKannada.com

Sita Payana Movie Review ಕೌಟಂಬಿಕ ಬಾಂಧವ್ಯಕ್ಕೆ ಕನ್ನಡಿ ಹಿಡಿದ ಚಿತ್ರ ” ಸೀತಾ ಪಯಣ

ಚಿತ್ರ : ಸೀತಾ ಪಯಣ
ನಿರ್ದೇಶನ ;ಅರ್ಜುನ್ ಸರ್ಜಾ
ತಾರಾಗಣ : ನಿರಂಜನ್, ಐಶ್ವರ್ಯ ಅರ್ಜುನ್, ಸತ್ಯರಾಜ್, ಪ್ರಕಾಶ್ ರೈ, ಕೋವೈ ಸರಳಾ,ಅರ್ಜುನ್ ಸರ್ಜಾ, ಧ್ರುವ ಸರ್ಜಾ ಮತ್ತಿತರರು
ರೇಟಿಂಗ್ : *** 3.5 / 5

ಪುತ್ರಿ ಐಶ್ವರ್ಯಗಾಗಿ ಪ್ರೇಮ ಬರಹ ಚಿತ್ರ ನಿರ್ದೇಶನ ಮಾಡಿದ್ದ ಹಿರಿಯ ನಟ ,ನಿರ್ದೇಶಕ ಅರ್ಜುನ್ ಸರ್ಜಾ ಇದೀಗ 8 ವರ್ಷಗಳ ಬಳಿಕ ಮತ್ತೊಮ್ಮೆ ಪುತ್ರಿಗಾಗಿ ಸೀತಾ ಪಯಣ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಈ ಬಾರಿ ಒಂದಷ್ಟು ಹೊಸತನದ ಕಥೆ, ನಿರೂಪಣೆ, ಕಥಾ ವಸ್ತುವನ್ನು ಮುಂದಿಟ್ಟುಕೊಂಡು ಕನ್ನಡದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಬದುಕೇ ಒಂದು ತಿರುವುಗಳ ಆಗರ, ಎಲ್ಲಿಂದ ಎಲ್ಲಿ ಹೋಗಿ ಬಿಡುತ್ತದೆಯೋ ಅನ್ನುವುದು ಯಾರಿಗೂ ತಿಳಿಯದ ಸಂಗತಿ. ಒಂದಷ್ಟು ತಿರುವುಗಳು, ಟ್ವಸ್ಟ್ ಗಳು, ಜೀವನದಲ್ಲಿ ಎದುರಾಗುವ ಘಟನೆಗಳು ಕಲಿತ ಪಾಠಗಳು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಅನುಭವವನ್ನು ಸೀತಾ ಪಯಣದ ಮೂಲಕ ದಾರೆ ಎರೆದಿದ್ದಾರೆ ಅರ್ಜುನ್ ಸರ್ಜಾ

ಬಹಳ ವರ್ಷಗಳ ನಂತರ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡಿರುವುದು ಒಂದಾದರೆ, ಪರಭಾಷೆಯಲ್ಲಿದ್ದರೂ ಕನ್ನಡ ಪ್ರೇಮ, ಬೆಳೆದ ನಾಡನ್ನು ಮರೆಯದಿರುವ‌‌ ಅರ್ಜುನ್‌ ಸರ್ಜಾ ಅವರಿಗೆ ನಾಡಿನ ಮೇಲಿನ ನಿಷ್ಠೆ, ಪ್ರೀತಿ ಪ್ರಶಂಸನೀಯ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು.

ತಂದೆ- ಮಗಳ ಬಾಂಧವ್ಯ, ಜೀವ, ಜೀವನ, ಮಾನವೀಯತೆಯ ಮೌಲ್ಯ, ಜೀವನ, ಸ್ನೇಹ, ಪ್ರೀತಿ, ದ್ವೇಷ ಸೇರಿದಂತೆ ವಿವಿಧ ವಿಷಯಗಳನ್ನು ಮನ ಮುಟ್ಟುವಂತೆ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.

ಆಗರ್ಭ ಶ್ರೀಮಂತ ಕುಟುಂಬದಲ್ಲಿ ಬೆಳದ‌ ಸೀತಾ (ಐಶ್ವರ್ಯ ಅರ್ಜುನ್) ತಾಯಿ ಕಳೆದುಕೊಂಡಾಕೆ. ತಾಯಿಯ ಕೊರತೆ ಬಾರದಂತೆ ಪ್ರೀತಿಯಿಂದ‌ ಮಗಳನ್ನು ಸಾಕಿ ಸಲುಹಿದ ಪ್ರಸಾದ್ (ಸತ್ಯರಾಜ್). ಮದುವೆಗಿಂತ ಮಿಗಿಲಾಗಿ ಅಡುಗೆ ಮಾಡುವ ಕೆಲಸದಲ್ಲಿ ಹೆಚ್ಚು ಒಲವು. ಅಡುಗೆ ತರಬೇತಿ ಪಡೆಯಲು ಬಂದ ತಂಡ ಜೊತೆಗೆ ಪಯಣಿಸುವ ವೇಳೆ ಮಾರ್ಗಮದ್ಯೆ ಸಿಕ್ಕ ಹುಡುಗ ಅಭಿಷೇಕ್ (ನಿರಂಜನ್) ಗೆ ಷರತ್ತಿನೊಂದಿಗೆ ಪ್ರಯಾಣ.
ತಾತ ಹನುಮಂತ ರಾಯ ( ಪ್ರಕಾಶ್ ರೈ) ನ ಅಕ್ಕಪಕ್ಕದ ರಾಮಪುರ ಹಾಗೂ ಸೀತಾಪುರ ಊರ ಸಮಸ್ಯೆ ಬಗ್ಗೆ ತೆಗೆದುಕೊಳ್ಳುವ ಕಾತುರ ಮತ್ತು ತವಕ

ಕಾರಿನ ಜರ್ನಿಯಲ್ಲಿ ನಡೆಯುವ ಘಟನೆ ಹಣ್ಣು ಮಾರುವ ಹುಡುಗಿ, ಹೋಟೆಲ್ ನಡೆಸುವ ತಾಯಿ,ಮಗ, ಸೊಸೆ, ಹಸು ಮೇಯಿಸುವ ಹುಡುಗ ಹೀಗೆ ಹಲವು ಪಾತ್ರಗಳು ಬಂದು ಹೋಗುತ್ತವೆ. ಈ ನಡುವೆ ಎದುರಾದ ಅಡೆತಡೆಯಲ್ಲಿ ಜೀವ ಉಳಿಸಿದವರಿಗೆ ಧನ್ಯಾದ ಹೇಳಲು ನಿರ್ಧರಿಸುತ್ತಾಳೆ. ಈ ವೇಳೆ ನಡೆಯುವ ಘಟನೆಗಳು, ಪ್ರೀತಿ, ಸ್ನೇಹ, ಬಾಂಧವ್ಯ, ಬದುಕಿನ ಪ್ರೀತಿ,ಮೌಲ್ಯ ಮತ್ತಿತರ ವಿಷಯಗಳ ಕುರಿತು ಸತ್ಯದ ಅನಾವರಣವಾಗಲಿದೆ. ಇದರ ನಡುವೆ ನಿಗೂಢ ಸತ್ಯದ ಅನಾವಣ . ಅಭಿಷೇಕ್ ಯಾರು.. ಸೀತಾ ಮತ್ತು ಪಾತ್ರ ಕುತೂಹಲಕಾರಿಯಾಗಿದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು..

ನಿರ್ದೇಶಕ ಅರ್ಜುನ್ ಸರ್ಜಾ ಕೌಟಂಬಿಕ ಕಥಾ ವಸ್ತು ಆಯ್ಕೆ ಮಾಡಿಕೊಂಡು ಅದನ್ನು ಸಮರ್ಥವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.ಜೊತೆಗೆ ಬದುಕಿನ ಮೌಲ್ಯ ಕುಟುಂಬದ ಮಹತ್ವ ಸೇರಿದಂತೆ ಮತ್ತಿತರ ವಿಷಯಗಳನ್ನು ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ನಾಯಕಿಯಾಗಿ ಐಶ್ವರ್ಯ ಅರ್ಜುನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಮ್ಮ ಕುಟುಂಬದ ಪರಂಪರೆ ಮುಂದುವರಿಸುವ ಭರವಸೆ ಮೂಡಿಸಿದ್ದು ನಾಯಕ ನಿರಂಜನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟನೆಯ ಮೂಲಕ ಗಮನ ಸೆಳೆದಿದ್ದಾರೆ

ಹಿರಿಯ ನಟ ಪ್ರಕಾಶ್ ರೈ ಸತ್ಯರಾಜ್, ಕೋವೈ ಸರಳಾ, ವಿಶೇಷ ಪಾತ್ರದಲ್ಲಿ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಮತ್ತಿತರರರು ಚಿತ್ರದ ಕಥೆಗೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ.

ಜಿ ಬಾಲಮುರುಗನ್ ಕ್ಯಾಮರಾ, ಅನೂಪ್ ರೂಬೆನ್ಸ್ ಚಿತ್ರಕ್ಕೆ ಚಿತ್ರದ ವೇಗಕ್ಕೆ ಮತ್ತಷ್ಟು ಸಹಕಾರಿಯಾಗಿದೆ. ಮನೆಮಂದಿಯಲ್ಲಿ ಒಟ್ಟಿಗೆ ಕುಳಿತು ನೋಡಬಹುದಾದ ಮುದ್ದಾದ ಕೌಟಂಬಿಕ ಕಥನ ಸೀತಾಪಯಣ

ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin