Interview: ಕೊಡಗಿನ ಬೆಡಗಿ ವರ್ಷ ಬೊಳ್ಳಮ್ಮ: ಕನ್ನಡ ಚಿತ್ರರಂಗಕ್ಕೆ ಆಗಮನ - CineNewsKannada.com

Interview: ಕೊಡಗಿನ ಬೆಡಗಿ ವರ್ಷ ಬೊಳ್ಳಮ್ಮ: ಕನ್ನಡ ಚಿತ್ರರಂಗಕ್ಕೆ ಆಗಮನ

ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಮೋಡಿ ಮಾಡಿರುವ ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ವರ್ಷ ಬೊಳ್ಳಮ್ಮ, ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಚಂದನವನಕ್ಕೆ ಮತ್ತೊಬ್ಬ ನಟಿ ಸಿಕ್ಕಂತಾಗಿದೆ

#VarshaBollamma

ತಮಿಳಿನಲ್ಲಿ ತೆರೆಗೆ ಬಂದ ಸೂಪರ್ ಡೂಪರ್ ಹಿಟ್ ಆದ ವಿಜಯ್ ದಳಪತಿ ಅಭಿನಯದ “ಬಿಗಿಲ್” ಚಿತ್ರದಲ್ಲಿ ನಟಿಸು ಮೂಲಕ ತಮಿಳು ಚಿತ್ರರಂಗದಲ್ಲಿ ಅದರಲ್ಲಿಯೂ ತಮಿಳು ಅಭಿಮಾನಿಗಳ ಮನಸೂರೆಗೊಂಡಿದ್ದರು, ಇದರ ಜೊತೆಗೆ 96 ಸೇರಿದಂತೆ ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಪಿಸಿ ಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟ ವಿಜಯ್ ರಾಘವೇಂದ್ರ ನಟನೆಯ “ಮಹಾನ್” ಚಿತ್ರದ ಮೂಲಕ ವರ್ಷ ಬೊಳ್ಳಮ್ಮ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದು ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ಕಲಾವಿದರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ವರ್ಷ ಬೊಳ್ಳಮ್ಮ, ಸಿನಿಮಾ ಜರ್ನಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ

• ನಿಮ್ಮ ಚಿತ್ರ ಜೀವನ ಆರಂಭವಾದದ್ದು ಯಾವಾಗ, ಮಾಹಿತಿ ಹಂಚಿಕೊಳ್ಳುವಿರಾ

2015ರಲ್ಲಿ ತಮಿಳು ಚಿತ್ರ ಸತುರನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ನಂತರ 2017ರಲ್ಲಿ ತೆರೆಗೆ ಬಂದ ಯಾನುಮ್ ಥೀಯವನ್ 2018ರಲ್ಲಿ ಬಿಡುಗಡೆಯಾದ ’96 , 2019ರಲ್ಲಿ ತೆರೆಗೆ ಬಂದು ಯಶಸ್ಸು ಗಳಿಸಿದ ತಮಿಳಿನ ಖ್ಯಾತ ನಟ ವಿಜಯ್ ದಳಪತಿ ನಟನೆಯ ಬಿಗಿಲ್ , 2020ರಲ್ಲಿ ತೆರೆಗೆ ಬಂದ ಮಿಡಲ್ ಕ್ಲಾಸ್ ಮೆಲೋಡೀಸ್ ಮತ್ತು 2024ರಲ್ಲಿ ಬಿಡುಗಡೆಯಾದ್ ಊರು ಪೆರು ಭೈರವಕೋನ ಚಿತ್ರದಲ್ಲಿ ನಟಿಸಿದ್ದೇನೆ, ತಮಿಳಿನ ಜೊತೆಗೆ ತೆಲುಗು ಮತ್ತು ಮಲೆಯಾಳಂ ಚಿತ್ರರಂಗದಲ್ಲಿಯೂ ನಟಿಸಿದ್ದೇನೆ ಎಂದಿದ್ದಾರೆ

#VarshaBollamma

• ವರ್ಷ ಎಲ್ಲಿಯವರು, ನಿಮ್ಮ ಹಿನ್ನೆಲೆ ಏನು

ನಾನು ಕರ್ನಾಟಕದವಳು, ಮೂಲತಃ. ಕೊಡಗಿನ ಹುಡುಗಿ, ಕೊಡಗಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದಿದ್ದೇನೆ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಸೂಕ್ಷ್ಮ ಜೀವವಿಜ್ಞಾನದಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದೇನೆ. ತಮಿಳಿನ ಸತುರನ್ ಚಿತ್ರದ ಮೂಲಕ ತಮಿಳು ಚಿತ್ರರಂಗದ ಮೂಲಕ ಬಣ್ಣದ ಬದುಕಿಗೆ ಪ್ರವೇಶ ಮಾಡಿದೆ .

• ತಮಿಳಿನಲ್ಲಿ ಯಾವ ಯಾವ ಸಿನಿಮಾದಲ್ಲಿ ನಟಿಸಿದ್ದೀರಿ, ಅಲ್ಲಿನ ಕಲಾವಿದರೊಂದಿಗೆ ಅನುಭವ ಹೇಗಿತ್ತು

ಡಬ್ಸ್‍ಮ್ಯಾಶ್ ವೀಡಿಯೊಗಳಿಂದ ಜನಮನ್ನಣೆ ಪಡೆದ ವರ್ಷಕ್ಕೆ 2013ರಲ್ಲಿ ತಮಿಳು ಚಿತ್ರ ರಾಜಾ ರಾಣಿ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತಿ 2015 ರಲ್ಲಿ ಸತುರನ್ ಚಿತ್ರದಲ್ಲಿ ನಾಯಕಿತಾಗಿ ಪಾದಾರ್ಪಣೆ ಮಾಡಿದೆ, ನಂತರ, ಅವರು ವೆಟ್ರಿವೇಲ್ ಚಿತ್ರದಲ್ಲಿ ಎಂ. ಶಶಿಕುಮಾರ್ ಅವರೊಂದಿಗೆ ಪ್ರಭು ಅವರ ಮಗಳ ಪಾತ್ರ ನಿರ್ವಹಿಸಿದ್ದೆ. ಜೊತೆಗೆ ಇವಾನ್ ಯಾರೇಂದ್ರು ತೇರಿಕಿರಥ ಮತ್ತು ಯಾನುಮ್ ಥೀಯವನ್ ಸೇರಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

#VarshaBollamma

• ಬಿಗಿಲ್ ಚಿತ್ರದಲ್ಲಿ ನಿಮ್ಮ ಪಾತ್ರ ಏನು

2019 ರಲ್ಲಿ ಅಟ್ಲೀ ಬರೆದು ನಿರ್ದೇಶಿಸಿದ ಬಿಗಿಲ್ ಚಿತ್ರದಲ್ಲಿ ಫುಟ್ಬಾಲ್ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಈ ಚಿತ್ರ 2019 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಮತ್ತು 2019 ರಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರ ಜೊತೆಗೆ ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ಅವರೊಂದಿಗೆ 96 ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ.

• ಮಲೆಯಾಳಂ ಭಾಷೆಯಲ್ಲಿ ಯಾವ ಯಾವ ಚಿತ್ರದಲ್ಲಿ ನಟಿಸಿದ್ದೀರಾ

2018 ರಲ್ಲಿ, ವರ್ಷಾ ಕಲ್ಯಾಣಂ ಚಿತ್ರದ ಮೂಲಕ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದೆ. ಆಸಿಫ್ ಅಲಿ ನಟಿಸಿದ ಮತ್ತೊಂದು ಮಲಯಾಳಂ ಚಿತ್ರ ಮಂಧಾರಂ ನಲ್ಲಿಯೂ ಕಾಣಿಸಿಕೊಂಡಿದ್ದೆ, ಸೀಮತುರೈ ಚಿತ್ರದಲ್ಲಿಯೂ. 2019 ರಲ್ಲಿ, ಸಮುತಿರಕಣಿ ನಟಿಸಿದ ಪೆಟ್ಟಿಕಡೈ ಚಿತ್ರ ಗೋಕುಲ್ ಸುರೇಶ್ ಅವರೊಂದಿಗೆ ಅವರ ಮೂರನೇ ಮಲಯಾಳಂ ಚಿತ್ರ ಸೂತ್ರಕರನ್ ಕೂಡ ಅದೇ ವರ್ಷ ಬಿಡುಗಡೆಯಾಗಿದೆ .

• ಯಾವ ಯಾವ ಭಾಷೆ ಬರುತ್ತದೆ

ಕರ್ನಾಟಕವದಳು ಆಗಿರುವುದರಿಂದ ಇಲ್ಲಿನ ನೆಲದ ಭಾಷೆ ಕನ್ನಡ ಬಂದೇ ಬರುತ್ತದೆ. ಜತೆಗೆ ತಮಿಳು, ಮಲಯಾಳಂ ಸೇರಿದಂತೆ ಬಹು ಭಾಷೆ ಬಲ್ಲೆ. ತೆಲುಗು ಮಾತನಾಡಲು ಕಲಿಯುತ್ತಿದ್ದೇನೆ

• ಮಹಾನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದೀರಾ ಹೇಗನಿಸುತ್ತದೆ, ನಿರ್ದೇಶಕರ ಬಗ್ಗೆ ಹೇಳುವುದಾದರೆ

ತಮಿಳಿನ “ಬಿಗಿಲ್”, “96” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಹಾಗೂ ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ನಟಿಸಿರುವ ವರ್ಷ ಬೊಳ್ಳಮ್ಮ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದೆ. ಮೂಲತಃ ಕನ್ನಡದವಳಾದ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಇದೇ ಮೊದಲ ಬಾರಿಗೆ ಕನ್ನಡದ “ಮಹಾನ್” ಚಿತ್ರದಲ್ಲಿ ನಟಿಸುತ್ತಿದ್ದೇನೆ.

• ಮಾತೃ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದೀರಾ ಹೇಗನಿಸಲಿದೆ

ಮಾತೃಭಾಷೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. “ಮಾಹಾನ್” ಒಂದು ರೈತರ ಕುರಿತಾದ ಚಿತ್ರ. ರೈತರ ಬದುಕಿನ ಬವಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ ಪಿ.ಸಿ.ಶೇಖರ್ ನಿರ್ದೇಶನದ ಚಿತ್ರಗಳನ್ನು ನೋಡಿದ್ದೇನೆ. ಸದಭಿರುಚಿಯ ಚಿತ್ರಗಳ ನಿರ್ದೇಶಕರು ಪಿ.ಸಿ.ಶೇಖರ್ “ಮಹಾನ್” ಚಿತ್ರದ ಕಥೆ ಹೇಳಿದಾಗ, ಕಥೆಯಲ್ಲಿರುವ ಸಾಮಾಜಿಕ ಕಳಕಳಿ ಬಹಳ ಇಷ್ಟವಾಯಿತು. ಪಿ.ಸಿ.ಶೇಖರ್ ಜೊತೆಗೆ ಕೆಲಸ ಮಾಡುತ್ತಿರುವುದು ಹಾಗೂ ವಿದ್ಯಾ ಸಂಸ್ಥೆ ನಡೆಸುತ್ತಿರುವ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಕಳಕಳಿಯುಳ್ಳ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನನಗೆ ಬಹಳ ಸಂತಸ ತಂದಿದೆ

#VarshaBollamma

• ನೀವು ವಿಜಯ್ ರಾಘವೇಂದ್ರ ಅವರ ಅಭಿಮಾನಿಯಂತೆ ಹೌದಾ.

ಹೌದು, ನಾನು ವಿಜಯ್ ರಾಘವೇಂದ್ರ ಅವರ ಅಭಿಮಾನಿ, ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿದ್ದಾಗ ಅವರ ಚಿತ್ರಗಳನ್ನು ನೋಡಿ ಬೆಳೆದಿದ್ದೇನೆ, ಅವರ ಅಭಿಮಾನಿಯಾಗಿದ್ದೇನೆ, ಈಗ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕರುವುದು ಹೆಮ್ಮೆ ಮತ್ತು ಖುಷಿಯ ವಿಷಯ ಎಂದಿದ್ದಾರೆ. ಚಿತ್ರದ ತಾರಾಬಳದಲ್ಲಿ ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ, ವರ್ಷ ಬೊಳ್ಳಮ್ಮ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ

ಮಹಾನ್ ಮೂಲಕ ಕನ್ನಡಕ್ಕೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಹಾಗೂ ಜನಪ್ರಿಯ ನಟ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ವರ್ಷ ಬೊಳ್ಳಮ್ಮ ಅಭಿನಯಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin